ವಿಲ್ಲಿಂಗ್‌ಟನ್: ನ್ಯೂಜಿಲೆಂಡ್‌ನ ಸಂಸದೆ ಸೈಕಲ್‌ನಲ್ಲಿ ಆಸ್ಪತ್ರೆಗೆ ತೆರಳಿ ಮಗುವಿಗೆ ಜನ್ಮ ನೀಡಿ ಅಚ್ಚರಿ ಮೂಡಿಸಿದ್ದಾರೆ.
Advertisement
ಸಂಸದೆ ಜ್ಯೂಲಿ ಅನ್ನೆ ಜೆಂಟರ್ ಅವರಿಗೆ ಭಾನುವಾರ ನಸುಕಿನ ವೇಳೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಈ ವೇಳೆ ಸಂಸದೆ ಸ್ವತಃ ತಾವೇ ಸೈಕಲ್ ಚಲಾಯಿಸಿಕೊಂಡು ಆಸ್ಪತ್ರೆಗೆ ಬಂದಿದ್ದಾರೆ. ಆಸ್ಪತ್ರೆಗೆ ತಲುಪಿದ 1 ಗಂಟೆಯ ಬಳಿಕ ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ, ಮಗು ಇಬ್ಬರೂ ಆರೋಗ್ಯವಾಗಿದ್ದಾರೆ. ಇದನ್ನೂ ಓದಿ: ರಶೀದ್ ಖಾನ್ ಬೇಡಿಕೆ ಕಂಡು ದಂಗಾದ ಹೈದರಾಬಾದ್ ಫ್ರಾಂಚೈಸ್
Advertisement
Advertisement
ಮಗುವಿಗೆ ಜನ್ಮ ನೀಡಿದ ನಂತರ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಖುಷಿಯನ್ನು ಹಂಚಿಕೊಂಡಿರುವ ಸಂಸದೆ, ಇಂದು ನಸುಕಿನ 3.04ರ ವೇಳೆಗೆ ನಮ್ಮ ಕುಟುಂಬಕ್ಕೆ ಹೊಸ ಸದಸ್ಯನ ಆಗಮನವಾಗಿದೆ. ಸೈಕಲ್‌ನಲ್ಲಿ ಆಸ್ಪತ್ರೆಗೆ ಬರುವ ಯಾವುದೇ ಯೋಜನೆ ಇರಲಿಲ್ಲ. ಕೊನೆಗೆ ಸೈಕಲ್‌ನಲ್ಲೇ ಆಸ್ಪತ್ರೆಗೆ ಬರುವಂತಾಯಿತು ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ‘ಜೈ ಶ್ರೀ ರಾಮ್’ ಹೇಳುವಂತೆ ಒತ್ತಾಯಿಸಿ ಕಾಶ್ಮೀರದ ವ್ಯಾಪಾರಿಗಳ ಮೇಲೆ ಹಲ್ಲೆ
Advertisement
ಮಧ್ಯರಾತ್ರಿ 2ರ ಹೊತ್ತಿಗೆ ಆಸ್ಪತ್ರೆಗೆ ಹೊರಡುವಾಗ ಹೆರಿಗೆ ನೋವು ಅಷ್ಟಾಗಿ ಇರಲಿಲ್ಲ. 10 ನಿಮಿಷದಲ್ಲಿ ಆಸ್ಪತ್ರೆಗೆ ಸೇರಿದೆ. ಸುಲಲಿತವಾಗಿ ಹೆರಿಗೆಯಾಗಿದೆ. ನಾವು ಆರೋಗ್ಯವಾಗಿದ್ದೇವೆ ಎಂದು ತಿಳಿಸಿದ್ದಾರೆ. ಜ್ಯೂಲಿ ಅವರ ಪೋಸ್ಟ್‌ಗೆ ಸಾವಿರಾರು ಪ್ರತಿಕ್ರಿಯೆ, ಅಭಿನಂದನೆಗಳು ವ್ಯಕ್ತವಾಗಿವೆ.
ಸಂಸದೆ ಜ್ಯೂಲಿ ಅವರು 2018ರಲ್ಲಿ ಮೊದಲ ಹೆರಿಗೆ ಸಂದರ್ಭದಲ್ಲಿಯೂ ಇದೇ ರೀತಿ ಸೈಕಲ್‌ನಲ್ಲಿ ಆಸ್ಪತ್ರೆಗೆ ಬಂದಿದ್ದರು.