ವೆಲ್ಲಿಂಗ್‍ಟನ್: ನ್ಯೂಜಿಲೆಂಡ್‍ನ ಕ್ರಿಸ್ಟ್ ಚರ್ಚ್ ನಗರದ 2 ಮಸೀದಿಗಳಲ್ಲಿ ಗುಂಡಿನ ದಾಳಿ ನಡೆದಿದ್ದು, ಬಾಂಗ್ಲಾದೇಶದ ಕ್ರಿಕೆಟ್ ಟೀಂ ಪ್ರಾಣಾಪಾಯದಿಂದ ಪಾರಾಗಿದೆ.
ಬಾಂಗ್ಲಾದೇಶದ ಕ್ರಿಕೆಟ್ ತಂಡ ಶನಿವಾರ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಪಂದ್ಯ ಆಡಬೇಕಿತ್ತು. ಬಾಂಗ್ಲಾದೇಶದ ಕ್ರಿಕೆಟ್ ಆಟಗಾರರು ನಮಾಜ್ ಮಾಡಲು ಹೋಟೆಲ್‍ನಿಂದ ಹಾಗ್ಲೇ ಓವೆಲ್ ಸ್ಟೇಡಿಯಂ ಬಳಿಯಿರುವ ಮಸೀದಿಗೆ ಹೊರಟ್ಟಿದ್ದರು. ಈ ವೇಳೆ ಅಲ್ಲಿ ಗುಂಡಿನ ದಾಳಿ ನಡೆದಿದೆ. ಘಟನೆಯಲ್ಲಿ 6 ಮಂದಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗುತ್ತಿದ್ದು, ಓರ್ವ ಮುಸುಕುಧಾರಿಯನ್ನು ವಶಕ್ಕೆ ಪಡೆಯಲಾಗಿದೆ.
Advertisement
ಈ ಬಗ್ಗೆ ಬಾಂಗ್ಲಾದೇಶದ ಕ್ರಿಕೆಟ್ ಬೋರ್ಡ್ ತನ್ನ ಟ್ವಿಟ್ಟರಿನಲ್ಲಿ, “ನ್ಯೂಜಿಲೆಂಡ್‍ನ ಕ್ರೈಸ್ಟ್ ಚರ್ಚ್ ನಲ್ಲಿರುವ ಬಾಂಗ್ಲಾದೇಶ ಕ್ರಿಕೆಟ್ ತಂಡದ ಎಲ್ಲ ಆಟಗಾರರು ಗುಂಡಿನ ದಾಳಿ ಘಟನೆ ನಡೆದ ನಂತರ ಸುರಕ್ಷಿತವಾಗಿ ಹೋಟೆಲ್‍ಗೆ ತೆರಳಿದ್ದಾರೆ. ಬಾಂಗ್ಲಾದೇಶದ ಕ್ರಿಕೆಟ್ ತಂಡದ ಜೊತೆ ನಾವು ಸಂಪರ್ಕದಲ್ಲಿದ್ದೇವೆ” ಎಂದು ಟ್ವೀಟ್ ಮಾಡಿದೆ.
Advertisement
All members of the Bangladesh Cricket Team in Christchurch, New Zealand are safely back in the hotel following the incident of shooting in the city. The Bangladesh Cricket Board (BCB) is in constant contact with the players and team management.#christchurchMosqueAttack
— Bangladesh Cricket (@BCBtigers) March 15, 2019
Advertisement
ಈ ಘಟನೆ ನಡೆದ ನಂತರ ಆಟಗಾರರು ಭಯಗೊಂಡಿದ್ದರು. ಆದರೆ ಈಗ ಅವರು ಕ್ಷೇಮವಾಗಿದ್ದಾರೆ. ಘಟನೆಯ ಸ್ವಲ್ಪ ಹೊತ್ತಿನ ನಂತರ ಬಾಂಗ್ಲಾದೇಶದ ಕಂಡಿಶಿಂಗ್ ಕೋಚ್ ಮರಿಯೋ ವಿಲ್ಲಾವರಾಯೇನ್ ಅಲ್ಲಿನ ಮಾಧ್ಯಮಗಳಿಗೆ ತಿಳಿಸಿದ್ದಾರೆ.
Advertisement
ಬಾಂಗ್ಲಾದೇಶದ ಆಟಗಾರರು ಗುಂಡಿನ ದಾಳಿ ಶಬ್ಧ ಕೇಳಿದ್ದಾರೆ ಹೊರತು ಅದನ್ನು ನೋಡಲಿಲ್ಲ. ಗುಂಡಿನ ದಾಳಿಯ ಶಬ್ಧ ಕೇಳುತ್ತಿದ್ದಂತೆ ಸ್ಟೇಡಿಯಂನಲ್ಲಿದ್ದ ಅವರು ಅಲ್ಲಿಂದ ಓಡಿ ಹೋಗಿ ಪ್ರಾಣ ಉಳಿಸಿಕೊಂಡಿದ್ದಾರೆ ಎಂದು ಮರಿಯೋ ಹೇಳಿದ್ದಾರೆ.
Bangladesh team escaped from a mosque near Hagley Park where there were active shooters. They ran back through Hagley Park back to the Oval. pic.twitter.com/VtkqSrljjV
— Mohammad Isam (@Isam84) March 15, 2019
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv