ದುಬೈ: ಟಿ20 ವಿಶ್ವಕಪ್ ಇದೀಗ ಕೊನೆಯ ಹಂತಕ್ಕೆ ತಲುಪಿದೆ. ವಿಶ್ವದ ಎರಡು ಬಲಿಷ್ಠ ತಂಡಗಳು ಬಲಾಢ್ಯ ತಂಡಗಳನ್ನು ಮಣ್ಣು ಮುಕ್ಕಿಸಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ತಂಡ ಫೈನಲ್ ಕಾದಾಟಕ್ಕೆ ಸಜ್ಜಾಗಿದೆ.
Advertisement
ಫೈನಲ್‍ಗೇರಿರುವ ಎರಡು ತಂಡಗಳಿಗೂ ಈ ಬಾರಿ ಪ್ರಶಸ್ತಿ ಗೆದ್ದರೆ ಅದು ಚೊಚ್ಚಲ ಬಾರಿಯ ಪ್ರಶಸ್ತಿಯಾಗಲಿದೆ. ವಿಶ್ವಕಪ್ ಆರಂಭಕ್ಕೂ ಮೊದಲು ಎರಡು ತಂಡಗಳು ಕೂಡ ಪ್ರಶಸ್ತಿ ಸುತ್ತಿಗೇರುವ ಪ್ರಮುಖ ತಂಡಗಳಾಗಿ ಗುರುತಿಸಿಕೊಂಡಿದ್ದವು. ಆದರೆ ಆಸ್ಟ್ರೇಲಿಯಾ ತಂಡದ ಮೇಲೆ ಹೆಚ್ಚಿನ ಭರವಸೆ ಇದ್ದರೆ, ನ್ಯೂಜಿಲೆಂಡ್ ತಂಡದ ಮೇಲೆ ಭರವಸೆ ಕಮ್ಮಿಇತ್ತು. ಆದರೆ ಕಿವೀಸ್ ತಮ್ಮ ಅಮೋಘ ಆಟದ ಮೂಲಕ ಫೈನಲ್‍ಗೆ ಲಗ್ಗೆ ಇಟ್ಟಿದೆ. ಇದನ್ನೂ ಓದಿ: ನನ್ನ ಕುಟುಂಬಕ್ಕೆ ಭದ್ರತೆ ಕೊಡಿ ಎಂದು ಮೋದಿಗೆ ಮನವಿ ಸಲ್ಲಿಸಿದ ಪಾಕ್ ಕ್ರಿಕೆಟಿಗನ ಪತ್ನಿ
Advertisement
Advertisement
ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ಎರಡು ತಂಡಗಳ ಟಿ20 ಕ್ರಿಕೆಟ್ ಟ್ರ್ಯಾಕ್ ಗಮನಿಸಿದಾಗ ಎರಡು ತಂಡಗಳು ಪರಸ್ಪರ 14 ಪಂದ್ಯಗಳನ್ನು ಆಡಿವೆ. 14 ಪಂದ್ಯದಲ್ಲಿ 9 ಪಂದ್ಯದಲ್ಲಿ ಆಸ್ಟ್ರೇಲಿಯಾ ಗೆದ್ದರೆ, 5 ಪಂದ್ಯಗಳನ್ನು ನ್ಯೂಜಿಲೆಂಡ್ ತಂಡ ಗೆದ್ದುಕೊಂಡಿದೆ. ಟಿ20 ವಿಶ್ವಕಪ್‍ನಲ್ಲಿ 1 ಬಾರಿ ಎರಡು ತಂಡಗಳು ಮುಖಾಮುಖಿ ಆಗಿದ್ದು, ಅದರಲ್ಲಿ ನ್ಯೂಜಿಲೆಂಡ್ ತಂಡ ಮೇಲುಗೈ ಸಾಧಿಸಿದೆ. ಈ ಬಾರಿ ಎರಡು ತಂಡಗಳು ಕೂಡ ಬಲಿಷ್ಠವಾಗಿ ಗೋಚರಿಸುತ್ತಿದ್ದು, ಯಾವ ತಂಡ ವಿಶ್ವಕಪ್ ಮುಡಿಗೇರಿಸಿಕೊಳ್ಳಲಿದೆ ಎಂಬ ಕುತೂಹಲಕ್ಕೆ ಇಂದು ತೆರೆ ಬೀಳಲಿದೆ. ಇದನ್ನೂ ಓದಿ: ಟೀಂ ಇಂಡಿಯಾ ಆಟಗಾರರನ್ನು ಅಣಕಿಸಿದ ಶಾಹೀನ್ ಶಾ ಆಫ್ರಿದಿಗೆ ಚಾಟಿ ಬೀಸಿದ ನೆಟ್ಟಿಗರು
Advertisement