ಮುಂಬೈ: ಪುರುಷರ ಹಾಕಿ ವಿಶ್ವಕಪ್ (Hockey World cup 2023) ಕ್ರಾಸ್ ಓವರ್ ಪಂದ್ಯದಲ್ಲಿ ನ್ಯೂಜಿಲೆಂಡ್ (New Zealand) ವಿರುದ್ಧ ಭಾರತ (India) ಸೋಲು ಕಾಣುವುದರೊಂದಿಗೆ ವಿಶ್ವಕಪ್ ಅಭಿಯಾನ ಮುಗಿಸಿದೆ. ಈ ಮೂಲಕ ಕ್ರಿಕೆಟ್ (Cricket) ಬಳಿಕ ಹಾಕಿಯಲ್ಲೂ ಕಿವೀಸ್, ಟೀಂ ಇಂಡಿಯಾಗೆ ಕಂಟಕವಾಗಿ ಕಾಡಿದೆ.
Advertisement
ಕಳಿಂಗ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಹೈವೋಲ್ಟೆಜ್ ಪಂದ್ಯದಲ್ಲಿ ಆತಿಥೇಯ ಭಾರತ ತಂಡವನ್ನು ಸೋಲಿಸಿ ನ್ಯೂಜಿಲೆಂಡ್, ಕ್ವಾರ್ಟರ್ ಫೈನಲ್‌ಗೆ ಅರ್ಹತೆ ಪಡೆದುಕೊಂಡಿದೆ. ಈ ಮೂಲಕ 48 ವರ್ಷಗಳ ನಂತರ ಪ್ರಶಸ್ತಿ ಗೆಲ್ಲುವ ಆತಿಥೇಯ ತಂಡದ ಕನಸು ಭಗ್ನಗೊಂಡಿತು. ಶೂಟೌಟ್‍ನಲ್ಲಿ ಅದ್ಭುತ ಪ್ರದರ್ಶನ ನೀಡಿದ ನ್ಯೂಜಿಲೆಂಡ್ ಜಯದ ಸಂಭ್ರಮ ಆಚರಿಸಿತು. ಇತ್ತ ಭಾರತ ಸೋಲಿನೊಂದಿಗೆ ನಿರಾಸೆ ಅನುಭವಿಸಿತು. ಇದನ್ನೂ ಓದಿ: 48 ವರ್ಷಗಳ ಕನಸು ಮತ್ತೆ ಭಗ್ನ – ನ್ಯೂಜಿಲೆಂಡ್ ವಿರುದ್ಧ ಸೋತು ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದ ಭಾರತ
Advertisement
Advertisement
ಈ ಸೋಲು ಭಾರತದ ಕ್ರೀಡಾ ಅಭಿಮಾನಿಗಳ ಕಣ್ಣಿನಲ್ಲಿ ಕಣ್ಣೀರು ತರಿಸಿದೆ. ಈ ಮೂಲಕ ಪ್ರಧಾನ ಹಂತದಲ್ಲಿ ಭಾರತಕ್ಕೆ ಕ್ರಿಕೆಟ್ ಬಳಿಕ ಹಾಕಿಯಲ್ಲೂ ನ್ಯೂಜಿಲೆಂಡ್ ತಡೆಯಾಗಿ ನಿಂತಿದೆ. ಈ ಹಿಂದೆ 2019ರ ಏಕದಿನ ವಿಶ್ವಕಪ್ (ODI World cup 2019) ಸೆಮಿಫೈನಲ್ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ರನೌಟ್ ಆಗುವುದರೊಂದಿಗೆ ಭಾರತದ ಫೈನಲ್ ಕನಸನ್ನು ಭಗ್ನ ಗೊಳಿಸಿತ್ತು. ಆ ಬಳಿಕ 2021ರ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ (WTC) ಫೈನಲ್ ಪಂದ್ಯದಲ್ಲೂ ಭಾರತವನ್ನು ಮಣಿಸುವುದರೊಂದಿಗೆ ನ್ಯೂಜಿಲೆಂಡ್ ಭಾರತದ ಕ್ರೀಡಾ ಪ್ರೇಮಿಗಳಿಗೆ ಶಾಕ್ ನೀಡಿತ್ತು. ಇದನ್ನೂ ಓದಿ: ರೋಹಿತ್ ಶರ್ಮಾ ಈ ತಪ್ಪನ್ನು ಮಾಡ್ತಾರೆ: ಇರ್ಫಾನ್ ಪಠಾಣ್
Advertisement
newzealand be like tum bilateral me jeet ke khush rho ham tumhe big event me big heart break denge #INDvsNZ pic.twitter.com/JXW3f1hkdy
— ???? (@ImRealDynamo) January 22, 2023
ಆ ಬಳಿಕ ಇದೀಗ ಹಾಕಿಯಲ್ಲೂ ಅದೇ ರೀತಿಯ ಅಚ್ಚರಿಯ ಫಲಿತಾಂಶ ಹೊರಬಂದಿದ್ದು, ನ್ಯೂಜಿಲೆಂಡ್ ವಿರುದ್ಧ ಕಂಡ ಈ ಮೂರು ಸೋಲುಗಳು ಭಾರತ ಕ್ರೀಡಾ ಅಭಿಮಾನಿಗಳಿಗೆ ಕಾಡುತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹರಿದಾಡುತ್ತಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k