ಬೆಂಗಳೂರು: ರಾಜಕಾರಣಿಗಳ ಕೈಲಿ ಅಧಿಕಾರ ಇದ್ದರೆ ಸಾಕು ಫುಲ್ ಸೆಕ್ಯೂರಿಟಿ, ಝೀರೋ ಟ್ರಾಫಿಕ್ ನಲ್ಲಿ ಓಡಾಟ ಮಾಡುತ್ತಾರೆ. ಆದರೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಯಾವುದೇ ಸೆಕ್ಯೂರಿಟಿ ಇಲ್ಲದೇ ಸಾಮಾನ್ಯರಂತೆ ರಸ್ತೆಯಲ್ಲಿ ಹೋಗಿದ್ದಾರೆ.
ತುಮಕೂರಿನ ಕುಣಿಗಲ್‍ನಿಂದ ಬೆಂಗಳೂರು ಕಡೆಗೆ ಹೊರಟ್ಟಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿ ಪರದಾಡಿ ಬೆಂಗಳೂರಿನತ್ತ ತೆರಳಿದ್ದಾರೆ. ಮಂಗಳವಾರ ಹೊಸ ವರ್ಷದ ಹಾಗೂ ಸಾಲು ಸಾಲು ರಜೆ ಮುಗಿಸಿ ಬೆಂಗಳೂರು ನಗರದತ್ತ ಜನರು ಬರುತ್ತಿರುವ ಹಿನ್ನೆಲೆಯಲ್ಲಿ ತುಮಕೂರು ಹೆದ್ದಾರಿಯಲ್ಲಿ ವಾಹನ ದಟ್ಟಣೆ ಜೋರಾಗಿತ್ತು.
Advertisement
Advertisement
ಭಾರೀ ಸಂಖ್ಯೆಯಲ್ಲಿ ವಾಹನಗಳು ರಸ್ತೆಗೆ ಇಳಿದ ಪರಿಣಾಮ ನೆಲಮಂಗಲದ ನವಯುಗ ಟೋಲ್ ಬಳಿ ಹೆಚ್ಚು ಟ್ರಾಫಿಕ್ ಉಂಟಾಗಿದೆ. ಹೀಗಾಗಿ ಸಿದ್ದರಾಮಯ್ಯ ಪ್ರಯಾಣಿಸುತ್ತಿದ್ದ ಕಾರು ಟ್ರಾಫಿಕ್ ನಲ್ಲಿ ಸಿಲುಕಿ ಕೆಲಕಾಲ ಪರದಾಡುವಂತಾಯಿತು. ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರಾಗಿರುವ ಸಿದ್ದರಾಮಯ್ಯ ಟ್ರಾಫಿಕ್‍ನಲ್ಲೇ ಸಾಮಾನ್ಯರಂತೆಯೇ ಪರದಾಡಿದರು. ಇದರಿಂದ ಸಾರ್ವಜನಿಕರ ಮೆಚ್ಚುಗೆಗೂ ಪಾತ್ರವಾಗಿದ್ದಾರೆ.
Advertisement
ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿಯ ಅಧ್ಯಕ್ಷರಾಗಿರುವ ಸಿದ್ದರಾಮಯ್ಯಗೆ ಸರ್ಕಾರ ಝೆಡ್ ಸೆಕ್ಯೂರಿಟಿಯ ಭದ್ರತೆ ಇತ್ತೀಚಿಗೆ ನೀಡಿತ್ತು. ಆದರೆ ಮಂಗಳವಾರ ಯಾವುದೇ ಸೆಕ್ಯೂರಿಟಿ ಇಲ್ಲದೇ ರಸ್ತೆಗಳಿದಿದ್ದರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv