ಬಳ್ಳಾರಿ: ಹೊಸ ವರ್ಷದ (New Year) ಮೊದಲ ದಿನದ ಹಿನ್ನೆಲೆ ಇಂದು ದಕ್ಷಿಣ ಕಾಶಿ ಹಂಪಿಗೆ (Hampi) ಪ್ರವಾಸಿಗರ ದಂಡು ಬರುತ್ತಿದೆ.ಇದನ್ನೂ ಓದಿ: ದಾವಣಗೆರೆ| ನ್ಯೂ ಇಯರ್ ಸಂಭ್ರಮದ ದಿನವೇ ಬೈಕ್ ಅಪಘಾತಕ್ಕೆ ಯುವಕ ಬಲಿ – ಮತ್ತೋರ್ವ ಗಂಭೀರ
Advertisement
ಹೊಸ ವರ್ಷ ಸಂಭ್ರಮಿಸಲು ಹಂಪಿಗೆ ಆಗಮಿಸ್ತಿರುವ ಪ್ರವಾಸಿಗರು ಬೆಳ್ಳಂಬೆಳಗ್ಗೆ ಹಂಪಿಯ ಮಾತಂಗ ಬೆಟ್ಟದಲ್ಲಿ ಜಮಾಯಿಸಿದ್ದಾರೆ. ಬೆಟ್ಟದ ತುತ್ತ ತುದಿ ಏರಿರುವ ಪ್ರವಾಸಿಗರು, ವರ್ಷದ ಮೊದಲ ಸೂರ್ಯೋದಯ ಕಣ್ತುಂಬಿಕೊಂಡರು. ರಾಜ್ಯ ಅಲ್ಲದೇ ದೇಶ-ವಿದೇಶಗಳಿಂದ ಬಂದಿದ್ದ ಪ್ರವಾಸಿಗರು ಸೂರ್ಯೋದಯ ವೀಕ್ಷಣೆ ಮಾಡಿ, ಬೆಟ್ಟದಲ್ಲೇ ದ್ಯಾನಕ್ಕೆ ಕುಳಿತರು.
Advertisement
Advertisement
ಜಮಾಯಿಸಿದ್ದ ಪ್ರವಾಸಿಗರು ಬೆಟ್ಟದ ಮೇಲಿಂದ ಹಂಪಿಯ ಪ್ರಕೃತಿ ಸೌಂದರ್ಯ ಸವಿದರು. ಮತ್ತೊಂದೆಡೆ ತಂಡವಾಗಿ ಹಂಪಿಗೆ ಬರುತ್ತಿರುವ ಪ್ರವಾಸಿಗರು, ಸ್ಮಾರಕಗಳ ಮುಂದೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು.ಇದನ್ನೂ ಓದಿ: ಇಂದು ಯೋಧ ದಿವೀನ್ ಅಂತ್ಯಕ್ರಿಯೆ – ಓದಿದ್ದ ಶಾಲೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ