“ಗುಡ್‍ಬೈ 2024, ವೆಲ್‍ಕಂ 2025”. ಹೊಸ ವರ್ಷಕ್ಕೆ (New Year) ಭಾರತ ಕಾಲಿಟ್ಟಿದ್ದು, ಕರ್ನಾಟಕ ಜನತೆ 2025ನ್ನು ಕುಣಿದು ಕುಪ್ಪಳಿಸಿ ಚಿಯರ್ಸ್ ಹೇಳಿ ಸ್ವಾಗತಿಸಿದ್ದಾರೆ.
ನಗರದಲ್ಲಿ ಯುವಕ, ಯುವತಿಯರು ರಸ್ತೆಗಳಲ್ಲಿ ಕುಣಿದು ಕುಪ್ಪಳಿಸಿದರು. ಪರಸ್ಪರ ಹೊಸ ವರ್ಷದ ಶುಭಾಶಯ ಕೋರಿದರು. ಹೊಸ ವರ್ಷದ ಸೆಂಟರ್ ಆಫ್ ಅಟ್ರ್ಯಾಕ್ಷನ್ ಕೇಂದ್ರಗಳಾದ ಬೆಂಗಳೂರಿನ (Bengaluru) ಎಂ.ಜಿ ರೋಡ್, ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್, ಇಂದಿರಾ ನಗರ, ಕೋರಮಂಗಲ ವರ್ಣರಂಜಿತವಾಗಿ ಮಿರಿ ಮಿರಿ ಮಿಂಚುತ್ತಿದ್ದವು. ಇದನ್ನೂ ಓದಿ: ಸರ್ಕಾರ ನಡೀತಿರೋದೆ ಮದ್ಯಪ್ರಿಯರಿಂದ, ಆದ್ರೂ ಏನ್ ಅನ್ಯಾಯ ಗುರು? – ಯುವಕನ ಮಾತು
ಮೊಬೈಲ್‌ಗಳಂತೂ (Mobile) ಫುಲ್ ಬ್ಯೂಸಿಯಾಗಿದ್ದವು. ತಮ್ಮ ಆತ್ಮೀಯರಿಗೆ, ಸ್ನೇಹಿತರಿಗೆ, ಹಿರಿಯರಿಗೆ, ಕಿರಿಯರಿಗೆ ಹೊಸ ವರ್ಷದ ಶುಭಾಶಯದ ಸಂದೇಶಗಳನ್ನು ಕಳುಹಿಸುವುದರಲ್ಲಿ ಜನರು ತಲ್ಲಿನರಾಗಿದ್ದರು. ಪರಿಣಾಮ ಹಲವು ಸ್ಥಳಗಳಲ್ಲಿ ನೆಟ್‌ವರ್ಕ್ ಜಾಮ್ ಆಗಿತ್ತು. ನೆಟ್‌ವರ್ಕ್ ಒತ್ತಡದಿಂದ ಮೆಸೇಜ್ ತಡವಾಗಿ ತಲುಪುತ್ತಿದ್ದವು.
ಬಾರ್, ಪಬ್‌ಗಳು ವಿಶೇಷ ಆಫರ್ ನೀಡಿದ್ದವು. ಪರಿಣಾಮ ಪಾನ ಪ್ರಿಯರು ರಾತ್ರಿಯಿಂದಲೇ ಪಾರ್ಟಿ ಮಾಡುತ್ತಾ ಡಿಜೆ ಹಾಡಿಗೆ ನೃತ್ಯ ಮಾಡುತ್ತಿದ್ದರು. ಇದರಿಂದ ಭರ್ಜರಿ ವ್ಯಾಪಾರವೂ ನಡೆಯಿತು. ಜಿಲ್ಲಾ ಕೇಂದ್ರ ಸ್ಥಳಗಳಲ್ಲಿ ಸಂಗೀತ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿತ್ತು.
ಬೇಕರಿಗಳಲ್ಲಿ ಹೊಸ ವರ್ಷದ ಕೇಕ್‌ಗಳಿಗೆ ಭಾರೀ ಬೇಡಿಕೆ ಇತ್ತು. ಬಡಾವಣೆಯ ಜನರು ರಾತ್ರಿ 12 ಗಂಟೆ ಆಗುತ್ತಿದ್ದಂತೆ ರಸ್ತೆಯಲ್ಲಿ ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ಹೊಸ ವರ್ಷವನ್ನು ಬರ ಮಾಡಿಕೊಂಡರು.
ಬೆಂಗಳೂರಿನಲ್ಲಿ ಪೊಲೀಸರು ಟೈಟ್ ಸೆಕ್ಯೂರಿಟಿ ಮಾಡಿಕೊಂಡಿದ್ದರು. ಪೊಲೀಸರು ಇಲ್ಲ ಎಂದುಕೊಂಡರೂ ಚಲನವಲನ, ಕಿಡಿಗೇಡಿ ಕೆಲಸಗಳು ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿವೆ.
ಹೊಸ ವರ್ಷಕ್ಕೆ ಕ್ಯಾಲೆಂಡರ್ ಬದಲಾಯಿಸಿದ್ದು ಆಯ್ತು. ಈಗ ಸಂಭ್ರಮಿಸುವ, ಕುಣಿದು ಕುಪ್ಪಳಿಸುವ ಘಳಿಗೆ. ಹೊಸ ವರ್ಷದಲ್ಲಿ ಹೊಸ ತುಡಿತವಿರಲಿ. ಪಾಸಿಟಿವ್ ಆಲೋಚನೆಗಳಿರಲಿ. ಯಶಸ್ಸು ಕಡೆಗೆ ದಿಟ್ಟ ನಿಲುವಿರಲಿ. ಎಲ್ಲರೊಟ್ಟಿಗೆ ಪ್ರೀತಿ-ವಿಶ್ವಾಸದಿಂದ ಸಾಗುವ ಭಾವನೆ ಇರಲಿ. ಎಲ್ಲರೂ ಒಟ್ಟಾಗಿ ಹೊಸ ವರ್ಷವನ್ನು ಸ್ವಾಗತಿಸೋಣ.