ರಾಯಚೂರು: ಹೊಸ ವರ್ಷಾಚರಣೆ ಹಿನ್ನೆಲೆ ಮಂತ್ರಾಲಯ ಗುರುರಾಘವೇಂದ್ರ ಸ್ವಾಮಿ ಮಠಕ್ಕೆ (Raghavendra Swamy Mutt) ಭಕ್ತರ ದಂಡು ಹರಿದು ಬಂದಿದೆ. ಬೆಳಗಿನ ಜಾವದಿಂದಲೂ ಸರತಿ ಸಾಲಿನಲ್ಲಿ ನಿಂತು ಭಕ್ತರು ರಾಯರ ದರ್ಶನ ಪಡೆಯುತ್ತಿದ್ದಾರೆ.ಇದನ್ನೂ ಓದಿ: ಇಲಿಯಾನಾ ಮತ್ತೆ ಪ್ರೆಗ್ನೆಂಟಾ?- ಹೊಸ ವರ್ಷದಂದು ಸುಳಿವು ಕೊಟ್ರಾ ನಟಿ?
Advertisement
ಹೊಸ ವರ್ಷದ (New Year) ಆರಂಭದ ಹಿನ್ನೆಲೆ ರಾಯರ ದರ್ಶನಕ್ಕೆ ವಿವಿಧೆಡೆಯಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದಾರೆ. ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಸೇರಿ ದೇಶದ ಮೂಲೆ ಮೂಲೆಯಿಂದ ಭಕ್ತರ ಸಾಗರ ಹರಿದು ಬಂದಿದೆ. ಮಂಚಾಲಮ್ಮ ದೇವಿ ಹಾಗೂ ರಾಯರ ವೃಂದಾವನಕ್ಕೆ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ.
Advertisement
ಭಕ್ತರ ಸಂಖ್ಯೆ ಹೆಚ್ಚಾದ ಹಿನ್ನೆಲೆ ಮಂತ್ರಾಲಯದಲ್ಲಿ ಸುಮಾರು ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಉಂಟಾಗಿದ್ದು, ಭಕ್ತರು ಪರದಾಟವೂ ನಡೆಸಿದ್ದರು. ಸತತ ರಜೆ ಹಾಗೂ ಹೊಸ ವರ್ಷಾಚರಣೆ ಹಿನ್ನಲೆ ಕಳೆದ ನಾಲ್ಕೈದು ದಿನಗಳಿಂದ ಭಕ್ತರ ಸಂಖ್ಯೆ ಹೆಚ್ಚಳವಾಗಿದ್ದು, ಮಠದ ರೂಂಗಳ ಆನ್‌ಲೈನ್ ಬುಕ್ಕಿಂಗ್ ಬಂದ್ ಮಾಡಲಾಗಿದೆ. ಮಠದ ಆಡಳಿತ ಮಂಡಳಿ ಕೇವಲ ಆಫ್‌ಲೈನ್‌ನಲ್ಲಿ ರೂಂ ನೀಡುತ್ತಿದೆ.ಇದನ್ನೂ ಓದಿ: ತಾಯಿಗೆ ಮಕ್ಕಳಿಂದ ಪಾದಪೂಜೆ – ವಿನೂತನವಾಗಿ ಹೊಸ ವರ್ಷ ಆಚರಣೆ