ಚಾಮರಾಜನಗರ: ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಇಂದು ಮತ್ತು ನಾಳೆ ಬಂಡೀಪುರದಲ್ಲಿ (Bandipur) ಅರಣ್ಯ ಇಲಾಖೆಗೆ ಸೇರಿದ ಕಾಟೇಜ್, ಗೆಸ್ಟ್‌ಹೌಸ್ ಹಾಗೂ ರೂಮ್‌ಗಳಲ್ಲಿ ಕೊಠಡಿಗಳಲ್ಲಿ ಪ್ರವಾಸಿಗರ ವಾಸ್ತವ್ಯ ನಿರ್ಬಂಧಿಸಲಾಗಿದೆ. ಆದರೆ ಎಂದಿನಂತೆ ಸಫಾರಿ ಇರಲಿದೆ.
ಹೊಸ ವರ್ಷದ ಮೋಜು, ಮಸ್ತಿ ಹೆಸರಿನಲ್ಲಿ ಪರಿಸರಕ್ಕೆ ಧಕ್ಕೆಯಾಗಬಾರದೆಂಬ ಕಾರಣಕ್ಕೆ ವಾಸ್ತವ್ಯ ನಿರ್ಬಂಧಿಸಿರುವ ಅರಣ್ಯ ಇಲಾಖೆ ಖಾಸಗಿ ರೆಸಾರ್ಟ್‌ಗಳಲ್ಲೂ ಡಿಜೆ ಹಾಕುವಂತಿಲ್ಲ, ಪಾರ್ಟಿಗಳನ್ನು ಜೋರಾಗಿ ಆಯೋಜನೆ ಮಾಡುವಂತಿಲ್ಲ ಎಂದು ಸೂಚಿಸಲಾಗಿದೆ. ಪ್ರವಾಸಿಗರು ಮಾಸ್ಕ್ (Mask) ಧರಿಸಿ ಕೋವಿಡ್ (Covid19) ಮಾರ್ಗಸೂಚಿ ಪಾಲಿಸುತ್ತ ಸಫಾರಿ (Safari) ಮಾಡಬಹುದು ಎಂದು ಬಂಡೀಪುರ ಡಿಸಿಎಫ್ ರಮೇಶ್‌ಕುಮಾರ್ ತಿಳಿಸಿದ್ದಾರೆ. ಇದನ್ನೂ ಓದಿ: ಹೊಸ ವರ್ಷಾಚರಣೆ; ದಶಪಥ ಹೆದ್ದಾರಿಯ ರಾಮನಗರ- ಚನ್ನಪಟ್ಟಣ ಬೈಪಾಸ್ ಬಂದ್

ಇನ್ನೂ ಹೊಸ ವರ್ಷಕ್ಕೂ ಮುನ್ನಾ ದಿನ ಸಫಾರಿಗೆ ಬಂಡೀಪುರಕ್ಕೆ ಪ್ರವಾಸಿಗರ ದಂಡೇ ಹರಿದುಬರುತ್ತಿದೆ. ನಾಳೆಯು ಹೆಚ್ಚಿನ ಪ್ರಮಾಣದ ಪ್ರವಾಸಿಗರು ಬರುವ ನಿರೀಕ್ಷೆ ಇದೆ. ಇನ್ನೊಂದೆಡೆ ನಾಳೆ ಮಲೆ ಮಹದೇಶ್ವರ ಬೆಟ್ಟಕ್ಕೆ ಒಂದು ಲಕ್ಷ ಜನರು ಬರುವ ನಿರೀಕ್ಷೆಯಿದ್ದು, ಮಲೆ ಮಹದೇಶ್ವರ ಬೆಟ್ಟದಲ್ಲೂ ರೂಂಗಳ ಮುಂಗಡ ಬುಕ್ಕಿಂಗ್ ಇರುವುದಿಲ್ಲ. ಮೊದಲು ಬಂದವರಿಗೆ ಆದ್ಯತೆಯ ಮೇರೆಗೆ ಕೊಠಡಿ ಕೊಡಲಾಗುತ್ತಿದೆ. ಇದನ್ನೂ ಓದಿ: ಕಾಂಗ್ರೆಸ್ ತುಕ್ಡೆ ತುಕ್ಡೆ ಗ್ಯಾಂಗ್ ಜೊತೆ ಹೊಂದಾಣಿಕೆ ಮಾಡಿಕೊಂಡಿದೆ: ಅಮಿತ್ ಶಾ

