ಬೆಂಗಳೂರು: ಹೊಸ ವರ್ಷಾಚರಣೆಯ (New Year) ಹಿನ್ನೆಲೆಯಲ್ಲಿ ಬೆಂಗಳೂರು ನಗರದ (Bengaluru City) ಎಲ್ಲಾ ಫ್ಲೈ ಓವರ್ (Flyover) ರಸ್ತೆಗಳನ್ನು ಪೊಲೀಸರು ಬಂದ್ ಮಾಡಿದ್ದಾರೆ.
ರಾತ್ರಿ 10 ಗಂಟೆ ಆಗುತ್ತಿದ್ದಂತೆ ಪೊಲೀಸರು ಫ್ಲೈ ಓವರ್ ಪ್ರವೇಶಿಸುವ ದಾರಿಗೆ ಬ್ಯಾರಿಕೇಡ್ ಹಾಕಿ ವಾಹನಗಳನ್ನು ತಡೆದು ಸರ್ವಿಸ್ ರಸ್ತೆಯನ್ನು ಹೋಗುವಂತೆ ಸೂಚಿಸುತ್ತಿದ್ದಾರೆ.
ಅಪಘಾತಗಳು ಮತ್ತು ವೀಲಿಂಗ್ ಸ್ಟಂಟ್ ತಡೆಗಟ್ಟುವ ಕ್ರಮವಾಗಿ ಡಿಸೆಂಬರ್ 31 ರ ರಾತ್ರಿ 10 ರಿಂದ ಮರುದಿನ ಬೆಳಿಗ್ಗೆ 6 ರವರೆಗೆ ವಿಮಾನ ನಿಲ್ದಾಣ ಫ್ಲೈಓವರ್ ಹೊರತುಪಡಿಸಿ ನಗರದ ಎಲ್ಲಾ 50 ಫ್ಲೈಓವರ್‌ಗಳನ್ನು ಪ್ರತಿ ವರ್ಷ ಬಂದ್ ಮಾಡಲಾಗುತ್ತದೆ.
ಬೆಂಗಳೂರಿನಲ್ಲಿ ಮಧ್ಯರಾತ್ರಿ 1 ಗಂಟೆಯವರೆಗೆ ಮಾತ್ರ ಸಂಭ್ರಮಾಚರಣೆಗೆ ಅವಕಾಶವಿದೆ. ನಂತರ ಪಬ್, ಕ್ಲಬ್ ಎಲ್ಲಾವನ್ನು ಬಂದ್ ಮಾಡಬೇಕೆಂದು ನಗರ ಪೊಲೀಸರು ಸೂಚನೆ ನೀಡಿದ್ದಾರೆ.

