Connect with us

Bengaluru City

‘ವೆಲ್’ಕಂ 2019- ಆರೋಗ್ಯಕರ ರೀತಿಯಲ್ಲಿ ವರ್ಷಾಚರಣೆ

Published

on

– ಹ್ಯಾವ್ ಎ ಹ್ಯಾಪಿ ಅಂಡ್ ಸೇಫ್ ನ್ಯೂ ಇಯರ್ ಸೆಲಬ್ರೆಷನ್

-ಸುನಿತಾ ಎ.ಎನ್.

ನ್ನೇನು 2018ಕ್ಕೆ ಬೈ ಬೈ ಹೇಳಿ.. 2019ಕ್ಕೆ ಹಾಯ್.. ಹಲೋ ಹೇಳೋ ಕಾಲ ಬಂದೇ ಬಿಡ್ತು.. ನ್ಯೂ ಇಯರ್ ನ ಗ್ರ್ಯಾಂಡ್ ಆಗಿ ವೆಲ್‍ಕಂ ಮಾಡಲು ಈಗಾಗಲೇ ಸಾಕಷ್ಟು ತಯಾರಿ ನಡೆಸಿದ್ದೀರಿ ಅಲ್ವಾ. ಈ ಬಾರಿ ಹಲವು ಪಬ್, ರೆಸ್ಟೋರೆಂಟ್, ಹೋಟೆಲ್‍ಗಳು ಪ್ರೋಗ್ರಾಂ ಅರೆಂಜ್ ಮಾಡಿವೆ. ಸಾವಿರಾರು ರೂಪಾಯಿಗೆ ಎಂಟ್ರಿ ಟಿಕೆಟ್ ಅನ್ನು ನೀಡ್ತಿದೆ. ಆನ್‍ಲೈನ್ ಬುಕ್ಕಿಂಗ್‍ನಲ್ಲೂ ಟಿಕೆಟ್‍ಗಳು ಸೇಲ್ ಆಗ್ತಿವಿ. ನೀವು ನ್ಯೂ ಇಯರ್ ಆಚರಣೆ ಮಾಡ್ಬೇಡಿ ಅಂತ ನಾವ್ ಹೇಳ್ತಿಲ್ಲ. ಬದಲಿಗೆ ಆರೋಗ್ಯಕರ ರೀತಿಯಲ್ಲಿ ಆಚರಣೆ ಮಾಡಿ ಎನ್ನುವುದೇ ನಮ್ಮ ಕಳಕಳಿ.

ನ್ಯೂ ಇಯರ್ ಆಚರಿಸಿ ರಾತ್ರಿ ನಿದ್ದೆಗೆಟ್ಟು ಹಗಲು ಮನೆಗೆ ಹೋಗೋಕೆ ಆಗದೇ ವೆಹಿಕಲ್‍ಗಳು ಅಪಘಾತವಾಗಿ ಸಾವು-ನೋವು ಸಂಭವಿಸುತ್ತಲೇ ಇರುತ್ತದೆ. ಇದರಿಂದ ಆಚರಣೆ ಇನ್ನೊಂದು ಸಲ ಬೇಕಾದರೆ ಮಾಡಬಹುದು. ನಿಮ್ಮ ಜೀವ ಎಲ್ಲಕ್ಕಿಂತಲೂ ಅತ್ಯಮೂಲ್ಯವಾಗಿದ್ದು, ಬೆಲೆ ಕಟ್ಟಲು ಸಾಧ್ಯವಿಲ್ಲದ ರತ್ನ. ಎಲ್ಲಕ್ಕೂ ಮಿಗಿಲಾಗಿ ಒಮ್ಮೆ ಕಳೆದುಕೊಂಡರೆ ಮತ್ತೆಂದೂ ಸಿಗಲ್ಲ. ವರ್ಷದ ಕೊನೆ ದಿನ. ಹೊಸ ವರ್ಷದ ಆರಂಭದ ದಿನ ನೆನಪಿನಲ್ಲಿ ಉಳಿಯಬೇಕು ಅಂದುಕೊಳ್ಳುವುದು ನಿಜ. ಅದೇ ಆಚರಣೆಯಿಂದ ಜೀವ, ಜೀವನ ಅಂತ್ಯವಾಗದಿರಲಿ. ಆರೋಗ್ಯಕರ ಆಚರಣೆಯಿಂದ ಜೀವನದಲ್ಲಿ ನಗು ತುಂಬಿರಲಿ. ಹೀಗಾಗಿ ನ್ಯೂ ಇಯರ್ ಈವ್. ಹೊಸ ವರ್ಷಾಚರಣೆ ಮಾಡುವ ಮುನ್ನ ಒಂದಲ್ಲ ನೂರು ಬಾರಿ ಯೋಚಿಸಿ ನೋಡಿ.

ಬೆಂಗಳೂರಿನ ಬಿಗ್ರೇಡ್ ರೋಡ್. ಎಂ. ಜಿ ರೋಡ್‍ನಲ್ಲಿ ರಾತ್ರಿ ವೇಳೆ ಕತ್ತಲೆ ಬೆಳಕಿನ ಆಟದಲ್ಲಿ ಮೈ ಮರೆತು ಕುಣಿದು ಕುಪ್ಪಳಿಸುವುದು. ಮದ್ಯ, ಕೂಲ್ ಡ್ರಿಂಕ್ಸ್ ಕುಡಿದು ಮಜಾ ಮಾಡೋದು. ಪರಸ್ಪರ ವಿಶ್ ಮಾಡೋದು.. ಓ.. ಎಂದು ಕೂಗೋದು ನೋಡ್ತೀರಿ, ಕೇಳ್ತೀರಿ.. ಮಿಗಿಲಾಗಿ ಹಲವರು ಭಾಗಿ ಆಗಿ ಎಂಜಾಯ್ ಮಾಡಿರ್ತೀರಿ. ಈ ರೀತಿ ಮಾಡಿದ್ರೆನೇ ಮಾತ್ರ ನ್ಯೂ ಇಯರ್ ಸೆಲೆಬ್ರಿಷನ್ ಅಲ್ಲ. ನಾವು ಹೇಳುವ ರೀತಿಯಲ್ಲಿ ಮಾಡಿನೋಡಿ.. ಡಬಲ್ ಖುಷಿ ನಿಮ್ಮದಾಗುತ್ತೆ.. ಅದಕ್ಕೂ ಮುನ್ನ ನಾವ್ ಯಾಕೆ ಈ ರೀತಿ ಹೇಳ್ತೀದ್ದಿವಿ ಅಂತಾ ನೋಡ್ಬಿಡಿ..

ಮೈ ಮರೆತರೆ ಅನಾಹುತ ಕಟ್ಟಿಟ್ಟ ಬುತ್ತಿ..!
* ಈಗಿನ ಕಾಲದ ಯುವಕ ಯುವತಿಯರಿಗೆ ಲೇಟ್ ನೈಟ್ ಪಾರ್ಟಿ ಅಂದ್ರೆ ಫುಲ್ ಕ್ರೇಜ್. ಅದೇ ಲೇಟ್ ನೈಟ್‍ನಲ್ಲಿ ಮೈ ಮರೆತರೆ ನೀವು `ಲೇಟ್’ ಆಗ್ಬಹುದು.. ಎಚ್ಚರ ಇರಲಿ..
* ಮಬ್ಬು ಬೆಳಕು.. ಕಲರ್ ಕಲರ್ ಲೈಟಿಂಗ್ಸ್.. ಮೈ ಮನ ಕುಣಿಸುವ ಮ್ಯೂಸಿಕ್ ನಡುವೆ ನಾವೂ ಹುಚ್ಚೆದ್ದು ಕುಣಿಯಬೇಕು ಅನ್ನಿಸುತ್ತೆ. ನಿಮಗೆ ನಿಮ್ಮ ಮೇಲೆ ಎಚ್ಚರ ಇರಲಿ. ಕಂಟ್ರೋಲ್ ಇರಲಿ
* ಯುವತಿಯರು ಪಾರ್ಟಿಗೆ ಹೋಗುವ ಮುನ್ನ ತಮ್ಮ ಉಡುಗೆ- ತೊಡುಗೆಯ ಬಗ್ಗೆ ಎಚ್ಚರಿಕೆ ವಹಿಸಬೇಕು. ನಿಮಗೆ ಯಾವುದು ಕಂಫರ್ಟ್ ಆಗಿರೊತ್ತೋ ಅಂತಹ ಡ್ರೆಸ್ ಧರಿಸಿ. ಇಲ್ಲವಾದಲ್ಲಿ ಪಾರ್ಟಿ ತುಂಬೆಲ್ಲಾ ಇರಿಸು ಮುರಿಸು ಖಚಿತ. ಹೀಗಾಗಿ ಡ್ರೆಸ್ ಸೆನ್ಸ್ ಬಗ್ಗೆ ಎಚ್ಚರ ಇರಲಿ.

* ಪಾರ್ಟಿಯಲ್ಲಿ ಪರಸ್ಪರ ವಿಶ್ ಎಕ್ಸ್ ಚೇಂಜ್ ಮಾಡಿಕೊಳ್ಳುವಾಗ, ಮಾತಾಡುವಾಗ, ಖುಷಿ ವ್ಯಕ್ತಪಡಿಸುವ ವೇಳೆ ನಿಮ್ಮ ಮಾತಿನ ಮೇಲೆ ಎಚ್ಚರ ಇರಲಿ.
* ತಡರಾತ್ರಿಯ ಪಾರ್ಟಿಯಲ್ಲಿ ಡ್ರಿಂಕ್ಸ್ ಕಾಮನ್. ನೀವು ಡ್ರಿಂಕ್ಸ್ ಮಾಡುವಾಗ ಎಚ್ಚರದಿಂದಿರಿ. ನಿಮ್ಮ ಡ್ರಿಂಕ್ಸ್ ಲಿಮಿಟ್ ಮೀರಿದ್ರೇ ನಿಮಗೆ ಅಪಾಯ.
* ನ್ಯೂ ಇಯರ್ ಪಾರ್ಟಿ ಮಧ್ಯರಾತ್ರಿ 12 ಗಂಟೆಗೆ ಶುರುವಾದರೂ 12 ಗಂಟೆ ದಾಟಿದ ಮೇಲೆ ಪಾರ್ಟಿ ಡಲ್ ಹೊಡೆಯುತ್ತೆ. ಹೀಗಾಗಿ ಮಧ್ಯರಾತ್ರಿ 1, 2, 3 ಅಂತ ತಡರಾತ್ರಿವರೆಗೂ ಇರಲೇಬೇಡಿ.

* ಪಾರ್ಟಿ ಅಂದ ಮೇಲೆ ಪರಿಚಯ ಇರೋರು, ಇಲ್ಲದೇ ಇರೋರು, ಫ್ರೆಂಡ್ಸ್ ಸೇರಿದಂತೆ ಎಲ್ಲರೂ ಬರ್ತಾರೆ. ಹಾಗಂತ ಎಲ್ಲರನ್ನೂ ಮಾತಾಡಿಸಿ. ಫ್ರೆಂಡ್ಸ್ ಮಾಡಿಕೊಳ್ಳೋಕೆ ಹೋಗಬೇಡಿ. ಅಪರಿಚಿತರೊಂದಿಗೆ ಮಾತಾಡುವಾಗ ಎಚ್ಚರ ಇರಲಿ.
* ಪಾರ್ಟಿ ಮುಗಿಸಿಕೊಂಡು ಹೋಗುವಾಗ ತಡ ಆಗೋದು ಗ್ಯಾರಂಟಿ. ಹಾಗಂತ ಫ್ರೆಂಡ್ಸ್ ಡ್ರಾಪ್ ಮಾಡ್ತಾರೆ. ನನ್ನ್ ಫ್ರೆಂಡ್‍ನ ಫ್ರೆಂಡ್ ಬಿಡ್ತಾರೆ.. ನನ್ನ ಮನೆ ಬಳಿಯೇ ಈತ/ಈಕೆ ಇರೋದು ಅಂತೆಲ್ಲಾ ಹೋಗಲೇಬೇಡಿ.
* ನೀವು ಡ್ರಿಂಕ್ಸ್ ಮಾಡಿ ವಾಹನ ಚಲಾಯಿಸಲು ಯೋಗ್ಯರಿದ್ದರೇ ಮಾತ್ರ ನಿಮ್ಮ ವಾಹನವನ್ನು ಚಲಾಯಿಸಿಕೊಂಡು ಹೋಗಿ. ಇಲ್ಲವಾದಲ್ಲಿ ಸುರಕ್ಷೆಗಾಗಿ ಸಾರ್ವಜನಿಕ ವಾಹನ ಬಳಸಿ.

* ಈ ಲೇಟ್ ನೈಟ್ ಪಾರ್ಟಿಗೆ ಸ್ಟಾರ್ಟ್ ಅನ್ನೋದು ಇರಲ್ಲ. ಎಂಡ್ ಅನ್ನೋದು ಇರಲ್ಲ. ಆವರೆಡನ್ನೂ ನಾವೇ ಪ್ಲಾನ್ ಮಾಡಬೇಕು. ಹೀಗಾಗಿ ಮಧ್ಯರಾತ್ರಿಯಿಂದ ತಡರಾತ್ರಿ ಅಥವಾ ತಡರಾತ್ರಿಯಿಂದ ಮುಂಜಾನವರೆಗೂ ಅಂತಾ ಪಾರ್ಟಿಯಲ್ಲಿರಬೇಡಿ. ನಿಮ್ಮ ಸುರಕ್ಷೆಗಾಗಿ ಆದಷ್ಟೂ ಬೇಗ ಮನೆ ಸೇರಿಕೊಳ್ಳಿ.
* ಯಾವುದೇ ಅನಾಹುತ ಆಗುವ ಮುನ್ನ ಎಚ್ಚೆತ್ತುಕೊಂಡರೆ ಲೈಫ್ ಇಸ್ ಸೇಫ್. ಅದೇ ವೈಸ್.

ಹಾಗಾದ್ರೆ, ಯಾವೆಲ್ಲಾ ರೀತಿಯಲ್ಲಿ ಹೊಸ ವರ್ಷವನ್ನು ಸ್ವಾಗತಿಸಬಹುದು..
* ಸಿಂಪಲ್ ಆಗಿ ಮನೆಯಲ್ಲೇ ಕೇಕ್ ಕಟ್ ಮಾಡಿ.. ಮನೆ ಮಂದಿ ಎಲ್ಲಾ ಸಂಭ್ರಮಿಸಿ.
* ಕುಟುಂಬಸ್ಥರೊಂದಿಗೆ ಸಂತೋಷದಿಂದ ಕಾಲ ಕಳೆಯಿರಿ.
* ಕಲ್ಚರಲ್ ಪ್ರೋಗ್ರಾಂನಲ್ಲಿ ಆಸಕ್ತಿ ಇರೋರು ಮ್ಯೂಸಿಕ್ ಕೇಳಿ, ಡ್ಯಾನ್ಸ್ ಮಾಡಿ ಸಂಭ್ರಮಿಸಿ.
* ರಾತ್ರಿ ನೀವು ವಾಸ ಇರುವ ಕಡೆ ಕೇಕ್ ಕಟ್ ಮಾಡಿ. ಬೆಳಗ್ಗೆ ಎದ್ದು ದೇಗುಲಗಳಿಗೆ ಭೇಟಿ ನೀಡಿ. ಇದ್ರಿಂದ ಮನಃಶಾಂತಿ ಸಿಗುತ್ತೆ. ದೇವರ ಆಶೀರ್ವಾದವೂ ಸಿಗುತ್ತದೆ.


* ಹೋಟೆಲ್‍ನಲ್ಲಿ ಕ್ಯಾಂಡಲ್‍ಲೈಟ್ ಡಿನ್ನರ್ ಮಾಡಿ.
* ಫ್ರೆಂಡ್ಸ್ ಜೊತೆ ಮನೆಯಲ್ಲಿ ಗೆಟ್ ಟು ಗೆದರ್ ಮಾಡಿ ಸಂತಸ ಹಂಚಿಕೊಳ್ಳಿ.
* ಒಂದೆಡೆ ಸೇರಿ ನಿಮ್ಮ ಜೀವನದ ಖುಷಿ ಕ್ಷಣಗಳನ್ನು ಶೇರ್ ಮಾಡಿ ಸಂಭ್ರಮಿಸಿ.

ಟೋಟಲಿ.. ನಾವ್ ಹೇಳೋದು ಇಷ್ಟೇ.. ಹ್ಯಾವ್ ಎ ಹ್ಯಾಪಿ ಅಂಡ್ ಸೇಫ್ ನ್ಯೂ ಇಯರ್ ಸೆಲಬ್ರೆಷನ್. ಅಂಡ್ ಹ್ಯಾಪಿ ನ್ಯೂ ಇಯರ್

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Click to comment

Leave a Reply

Your email address will not be published. Required fields are marked *