ಬೆಂಗಳೂರು: ಸಿಕ್ಕಿಂ ಗಡಿಯಲ್ಲಿ ಚೀನಾ ಗಡಿಕ್ಯಾತೆ ಮುಂದುವರಿಸುತ್ತಲೇ ಇದೆ. ಅಲ್ಲದೇ ಇಡೀ ದೇಶವೇ ಚೀನಾದ ವಿರುದ್ಧ ತಿರುಗಿಬಿದ್ದಿದೆ. ಆದ್ರೆ ಬೆಂಗಳೂರಿನ ಬಳ್ಳಾರಿ ರಸ್ತೆಯಲ್ಲಿರುವ ಡೆಲ್ಲಿ ಪಬ್ಲಿಕ್ ಸ್ಕೂಲ್‍ಗೆ ಮಾತ್ರ ಚೀನಾ ಮೇಲೆ ಎಲ್ಲಿಲ್ಲದ ಪ್ರೀತಿ.
ಶುಕ್ರವಾರ ಚೀನಾ ನ್ಯೂ ಇಯರ್ ಸೆಲೆಬ್ರೇಷನ್‍ಗಾಗಿ ಮಕ್ಕಳಿಗೆ ಚೀನಾ ಡ್ರೆಸ್ ಹಾಕಿಕೊಂಡು ಬರಬೇಕೆಂದು ಹೇಳಿದೆ. ಅಷ್ಟೇ ಅಲ್ಲದೇ ಊಟಕ್ಕೆ ನೂಡಲ್ಸ್, ಫ್ರೈಡ್ ರೈಸ್, ಮಂಚೂರಿಯಂತಹ ಚೈನೀಸ್ ಫುಡ್ ತರಬೇಕು ಎಂದು ಆಗಸ್ಟ್ ಮೂರನೇ ತಾರೀಕಿನಂದು ಡೆಲ್ಲಿ ಪಬ್ಲಿಕ್ ಸ್ಕೂಲ್ ಸುತ್ತೋಲೆ ಹೊರಡಿಸಿದೆ.
ಈ ಬಗ್ಗೆ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಉತ್ತರ ವಲಯ 4 ಬಿಇಓ ನಾರಾಯಣ, ಡೆಲ್ಲಿ ಪಬ್ಲಿಕ್ ಸ್ಕೂಲ್ ನಲ್ಲಿ ನಾಳಿನ ಚೀನಾ ನ್ಯೂ ಇಯರ್ ಕ್ರಾರ್ಯಕ್ರಮವನ್ನ ರದ್ದು ಮಾಡಿಸ್ತೀವಿ. ಕಾರ್ಯಕ್ರಮ ನಡೆಯುವ ಬಗ್ಗೆ ನಮಗೆ ಮಾಹಿತಿ ಇಲ್ಲ. ಇದಕ್ಕೆ ನಮ್ಮ ಅನುಮತಿ ಪಡೆದಿಲ್ಲ. ಮಾಧ್ಯಮಗಳಲ್ಲಿ ನೋಡಿ ವಿಷಯ ಗೊತ್ತಾಗಿದೆ. ಶಾಲೆ ಹೊರಡಿಸಿರುವ ಸುತ್ತೋಲೆ ಗಮನಿಸಿದ್ದೇನೆ. ಕೂಡಲೇ ಕಾರ್ಯಕ್ರಮವನ್ನು ರದ್ದು ಮಾಡಿಸ್ತೀನಿ ಅಂತ ಹೇಳಿದ್ರು.