– ವಿವಿಧ ಜಿಲ್ಲೆಗಳಲ್ಲಿ ವಿವಿಧ ರೀತಿಯಲ್ಲಿ 2018ಕ್ಕೆ ಸ್ವಾಗತ
ಬೆಂಗಳೂರು: ಇಂದು ಹೊಸ ವರ್ಷಕ್ಕೆ ಇಡೀ ಭಾರತ ಕಾಲಿಟ್ಟಿದೆ. ಸಿಲಿಕಾನ್ ಸಿಟಿಯಲ್ಲಿ ಸಂಭ್ರಮದಿಂದಲೇ ಜನ 2018ನ್ನು ಬರಮಾಡಿಕೊಂಡಿದ್ದಾರೆ.
ನಗರದ ಪ್ರಮುಖ ರಸ್ತೆಗಳಾದ ಬ್ರಿಗೇಡ್ ರೋಡ್, ಎಂಜಿ ರೋಡ್, ಚರ್ಚ್ ಸ್ಟ್ರೀಟ್‍ನಲ್ಲಿ ಸಂಭ್ರಮ ಮನೆಮಾಡಿತ್ತು. ರಾತ್ರಿ ಸುಮಾರು 10.30 ಯಿಂದಲೇ ಜನ ಬ್ರಿಗೇಡ್ ರೋಡ್, ಎಂಜಿ ರೋಡ್‍ಗೆ ಆಗಮಿಸಿ ಭರ್ಜರಿ ಡ್ಯಾನ್ಸ್ ನಲ್ಲಿ ತೊಡಗಿದ್ದರು. ಡಿಜೆ ಸಾಂಗ್‍ಗಳಿಗೆ ಮಸ್ತಿ ಮಾಡಿದ ಜನ 2017ಕ್ಕೆ ವಿದಾಯ ಹೇಳಿ 2018ನ್ನು ಸ್ವಾಗತಿಸಿದರು. ಸಾವಿರಾರು ಜನ ಹೊಸ ವರ್ಷದ ಅಲೆಯಲ್ಲಿ ತೇಲಿಹೋಗಿದ್ದರು.
Advertisement
Advertisement
ಸಿಲಿಕಾನ್ ಸಿಟಿಯ ಸೆಂಟರ್ ಪ್ಲೇಸ್‍ನಲ್ಲೊಂದಾದ ಕೆ.ಆರ್ ಮಾರ್ಕೆಟ್‍ನಲ್ಲಿ ಹೊಸವರ್ಷವನ್ನು ಸಂಭ್ರಮದಿಂದ ಮತ್ತು ಅರ್ಥಪೂರ್ಣವಾಗಿ ಆಚರಿಸಲಾಗಿದೆ. ಭಾರತ ಅಂಧ ಕ್ರಿಕೆಟ್ ತಂಡದ ಮಾಜಿ ನಾಯಕ ಶೇಖರ್ ನಾಯ್ಕ್ ಯುವ ಜನತೆಗೆ ಮಾದರಿಯಾಗೋ ರೀತಿಯಲ್ಲಿ ಹೊಸವರ್ಷವನ್ನು ಆಚರಿಸಿದ್ದಾರೆ. ಕೆ.ಆರ್ ಮಾರ್ಕೆಟ್, ವಿವಿ ಪುರ, ಜೆಪಿ ನಗರದಲ್ಲಿ ನಿರಾಶ್ರಿತರಿಗೆ ತಿಂಡಿ ಹಾಗೂ ಹೊದಿಕೆಯನ್ನು ನೀಡುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ. ಚಳಿಯಲ್ಲಿ ಬೀದಿಯಲ್ಲೇ ಮಲಗಿರುವವರಿಗೆ ಹೊದಿಕೆ, ತಿಂಡಿ ನೀಡಿ ಹೊಸ ವರ್ಷಾಚರಣೆಯಲ್ಲೂ ಮಾನವೀಯತೆ ಮೆರೆದಿದ್ದಾರೆ.
Advertisement
ಇನ್ನೂ ಮಂಡ್ಯ, ರಾಯಚೂರು, ಚಿತ್ರದುರ್ಗ, ಉಡುಪಿ, ಧಾರವಾಡ ಸೇರಿದಂತೆ ವಯೋಮಿತಿ ಇಲ್ಲದೆ ಕುಣಿದು, ಕುಪ್ಪಳಿಸಿ ರಾಜ್ಯದೆಲ್ಲೆಡೆ ವಿವಿಧ ರೀತಿಯಲ್ಲಿ ಹೊಸ ವರ್ಷವನ್ನು ಸಂಭ್ರಮ ಸಡಗರದಿಂದ ಬರ ಮಾಡಿಕೊಂಡಿದ್ದಾರೆ.