ಸ್ಯಾಂಡಲ್‌ವುಡ್ ಜೋಡಿ ವಸಿಷ್ಠಸಿಂಹ- ಹರಿಪ್ರಿಯಾ (Haripriya) ಇದೀಗ ಅಭಿಮಾನಿಗಳಿಗೆ ಹೊಸ ವರ್ಷಕ್ಕೆ ಲವ್ಲಿ ವಿಶ್ಸ್ ತಿಳಿಸಿದ್ದಾರೆ. ಹೊರದೇಶದಲ್ಲಿ ನ್ಯೂ ಇಯರ್ (New Year 2024) ಸೆಲೆಬ್ರೇಟ್ ಮಾಡುತ್ತಿರೋ ಹರಿಪ್ರಿಯಾ ದಂಪತಿ ಚೆಂದದ ಫೋಟೋ ಶೇರ್ ಮಾಡಿ ಫ್ಯಾನ್ಸ್‌ಗೆ ಸ್ಪೆಷಲ್ ವಿಶ್ ಮಾಡಿದ್ದಾರೆ.
ಹೊಸ ವರ್ಷ ಎಲ್ಲರಿಗೂ ಹರುಷವನ್ನು ತರಲಿ. ನಾವು ಪಾರ್ಟಿಗೆ ತಡವಾಗಿ ಬಂದಿದ್ದೇವೆ ಎಂದು ತಿಳಿದಿದೆ. ಆದರೆ ನಿಮ್ಮೆಲ್ಲರಿಗೂ ಹೊಸ ವರ್ಷದ ಶುಭಾಶಯಗಳನ್ನು ಹೇಳಲು ತಡವಾಗಿಲ್ಲ. ಹೊಸ ಆರಂಭಕ್ಕೆ ಶುಭವಾಗಲಿ ಎಂದು ವಸಿಷ್ಠ- ಹರಿಪ್ರಿಯಾ ಇಬ್ಬರೂ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ಅಭಿಮಾನಿಗಳಿಗೆ ಶುಭಕೋರಿದ್ದಾರೆ.
View this post on Instagram
ವಸಿಷ್ಠ ಸಿಂಹ (Vasista Simha) ದಂಪತಿ ವಿದೇಶದಲ್ಲಿದ್ದಾರೆ. ಈ ವರ್ಷದ ಹೊಸ ಆರಂಭಕ್ಕೆ ವಿದೇಶದಲ್ಲಿ ಟ್ರಿಪ್ ಮಾಡುವ ಮೂಲಕ ಎಂಜಾಯ್ ಮಾಡ್ತಿದ್ದಾರೆ. ಇದನ್ನೂ ಓದಿ:ನಿಮ್ಮ ಬದುಕಲ್ಲಿ ಹೊಸ ವ್ಯಕ್ತಿಯ ಆಗಮನ- ನಮ್ರತಾಗೆ ಗುರೂಜಿ ಭವಿಷ್ಯ
ಕಳೆದ ವರ್ಷ ವಸಿಷ್ಠ-ಹರಿಪ್ರಿಯಾ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ವಸಿಷ್ಠ ಕನ್ನಡದ ಜೊತೆ ಸೌತ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ರೆ, ಹರಿಪ್ರಿಯಾ ಕೊಂಚ ಬಣ್ಣದ ಬದುಕಿನಿಂದ ದೂರಸರಿದಿದ್ದಾರೆ. ಮತ್ತೆ ಸಿನಿಮಾ ಮಾಡ್ತಾರಾ ಹರಿಪ್ರಿಯಾ? ಈ ಬಗ್ಗೆ ಮುಂದಿನ ದಿನಗಳವರೆಗೂ ಕಾಯಬೇಕಿದೆ. ಸದ್ಯ ವೈಯಕ್ತಿಕ ಬದುಕಿನಲ್ಲಿ ನಟಿ ಬ್ಯುಸಿಯಾಗೊದ್ದಾರೆ.