ಬೆಂಗಳೂರು: ಸಂಜೆ ಆಗುತ್ತಿದ್ದಂತೆ ಬೆಂಗಳೂರು ನಗರ (Bengaluru City) ಹೊಸ ವರ್ಷವನ್ನು (New Year) ಸ್ವಾಗತಿಸಲು ಸಜ್ಜಾಗುತ್ತಿದೆ.
ಎಂಜಿ ರೋಡ್, ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್, ಇಂದಿರಾನಗರ, ಕೋರಮಂಗಲದಲ್ಲಿ ನಿಧಾನವಾಗಿ ಜನ ಸೇರುತ್ತಿದ್ದಾರೆ.
Advertisement
ಕೋರಮಂಗಲದಲ್ಲಿ ಸಂಭ್ರಮಾಚರಣೆ ವೇಳೆ ಪಾನಮತ್ತರಾಗಿ ಪ್ರಜ್ಞೆ ತಪ್ಪುವವರಿಗೆ ಖಾಸಗಿ ಆಸ್ಪತ್ರೆಯಲ್ಲಿ (Private Hospital) ಬೆಡ್ ಬುಕ್ಕಿಂಗ್ (Bed Booking) ಮಾಡಲಾಗಿದೆ. ಪಾನಮತ್ತರಾಗಿ ಬಿದ್ದವರನ್ನು ಆಸ್ಪತ್ರೆಗೆ ಸಾಗಿಸಲು ಅಂಬುಲೆನ್ಸ್ (Ambulance) ವ್ಯವಸ್ಥೆ ಕೂಡ ಮಾಡಲಾಗಿದೆ ಎಂದು ಪಬ್ಲಿಕ್ ಟಿವಿಗೆ ಆಗ್ನೇಯ ವಿಭಾಗದ ಡಿಸಿಪಿ ಸಿ.ಕೆ ಬಾಬಾ ತಿಳಿಸಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ, ಕಾಂಗ್ರೆಸ್‌ನವರ ರಕ್ತದ ಕಣಕಣದಲ್ಲೂ ಹಿಂದೂ ವಿರೋಧಿ ಭಾವನೆ: ಆರ್ ಅಶೋಕ್
Advertisement
Advertisement
ಇಂದಿರಾನಗರದ 80 ಫೀಟ್, 100 ಫೀಟ್ ರಸ್ತೆಗಳು ಜಗಮಗವಾಗುತ್ತಿದ್ದು, ಪ್ರತಿ ರಸ್ತೆಯಲ್ಲೂ ಮಹಿಳಾ ಸುರಕ್ಷತಾ ತಾಣ ನಿರ್ಮಿಸಲಾಗಿದೆ.
Advertisement
ಮಹಿಳಾ ಸುರಕ್ಷತೆಗೆ ಈ ಬಾರಿ ಪೊಲೀಸ್ ಇಲಾಖೆ ಹೆಚ್ಚು ಒತ್ತು ನೀಡಿದೆ. ಮಹಿಳಾ ಸುರಕ್ಷತೆಗಾಗಿ ಐ ಲ್ಯಾಂಡ್ ಸ್ಥಾಪನೆ ಮಾಡಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಭದ್ರತೆ ಕಲ್ಪಿಸಲಾಗಿದೆ. ರಸ್ತೆಯ ಎರಡೂ ಕಡೆ ಫೋಕಸ್ ಲೈಟ್‌ಗಳನ್ನು ಅಳವಡಿಸಲಾಗಿದೆ.