ಬೆಂಗಳೂರು: ಹೊಸ ವರ್ಷ ಇಂದು ಆರಂಭವಾಗಿದ್ದು, 2020ರ ಸ್ವಾಗತಕ್ಕೆ ನೂರಾರೂ ಸಂಖ್ಯೆಯಲ್ಲಿ ಸಾರ್ವಜನಿಕರು ಸಾಕ್ಷಿಯಾದರು. ನಗರದ ಬ್ರಿಗೇಡ್ ರೋಡ್‍ನಲ್ಲಿ ಹೊಸ ವರ್ಷವನ್ನು ಸಂಭ್ರಮದಿಂದ ಆಚರಿಸಿದರು. ಇಂದು ಬೆಳ್ಳಂಬೆಳಗ್ಗೆ ಆಚರಣೆ ಮುಗಿದ ಬೆನ್ನಲ್ಲೇ ಎಂಜಿ ರೋಡ್, ಬ್ರಿಗೇಡ್ ರೋಡ್ ಹಾಗೂ ಚರ್ಚ್ ಸ್ಟ್ರೀಟ್ ರಸ್ತೆಗಳು ಬಣಗುಡುತ್ತಿದ್ದವು.
ಮೋಜು ಮಸ್ತಿ ಮಾಡಿ ರಸ್ತೆ ಅಂದ ಹಾಳು ಮಾಡಿದ್ದನ್ನ ಪೌರಕಾರ್ಮಿಕರು ಸ್ವಚ್ಛತೆಗೊಳಿಸಿದ್ದಾರೆ. ಸುಮಾರು 50ಕ್ಕೂ ಹೆಚ್ಚು ಜನ ಮುಂಜಾನೆಯೇ ರಸ್ತೆ ಸ್ವಚ್ಛತೆಯನ್ನು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಈ ಬಾರಿ ಹೊಸ ವರ್ಷಕ್ಕೆ ಹೊಸ ಟಾಸ್ಕ್ ತೆಗೆದುಕೊಂಡಿತ್ತು.
Advertisement
Advertisement
ಅದೇನೆಂದರೆ ಎಂಜಿ ರೋಡ್, ಬ್ರಿಗೇಡ್ ರೋಡ್‍ನಲ್ಲಿ ಕಸ ಹುಡುಕಿದವರಿಗೆ ಬಹುಮಾನ ಎಂಬ ಸ್ಪರ್ಧೆ ಸಹ ಆಯೋಸಿತ್ತು. ಅಷ್ಟರ ಮಟ್ಟಿಗೆ ಬಿಬಿಎಂಪಿ ಪೌರಕಾರ್ಮಿಕರು ಸಂಪೂರ್ಣ ಕ್ಲೀನ್ ಮಾಡಿದ್ದಾರೆ ಎಂದು ಆತ್ಮವಿಶ್ವಾಸದಿಂದ ಸ್ಪರ್ಧೆ ಆಯೋಜಿಸಿದವರು ಹೇಳಿದ್ದಾರೆ.
Advertisement
ಮತ್ತೊಂದೆಡೆ ನಗರದ ದೇವಾಲಯಗಳಲ್ಲಿ ಹೊಸ ವರ್ಷದ ಹಿನ್ನೆಲೆಯಲ್ಲಿ ವಿಶೇಷ ಪೂಜೆ ಮಾಡಲಾಗುತ್ತಿದೆ. ಇದರಿಂದ ದೇವರ ದರ್ಶನ ಮಾಡಲು ನೂರಾರು ಸಂಖ್ಯೆಯಲ್ಲಿ ಜನರು ಆಗಮಿಸುತ್ತಿದ್ದಾರೆ.