ಬೆಂಗಳೂರು: 2025 ರ ವರ್ಷ ಮುಗಿದು, 2026ರ ಕ್ಯಾಲೆಂಡರ್ ಇಯರ್ (New Year 2026) ಶುರು ಆಗೋಕೆ ಕೆಲವೇ ಕ್ಷಣ ಬಾಕಿಯಿದೆ. ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಯುವಜನತೆ ಸಂಭ್ರಮದಲ್ಲಿದೆ. ನ್ಯೂ ಇಯರ್ ಸೆಲಬ್ರೇಷನ್‌ನ ಕೇಂದ್ರಬಿಂದು ಎಂ.ಜಿ ರೋಡ್, ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್, ಕಮರ್ಷಿಯಲ್ ಸ್ಟ್ರೀಟ್ ವರ್ಣರಂಜಿತವಾಗಿವೆ. ಕತ್ತಲಲ್ಲೂ ಕಾಮನಬಿಲ್ಲು ಎಂಬಂತೆ ವಿದ್ಯುತ್ ದೀಪಾಲಂಕಾರಗಳಿಂದ ಬೆಂಗಳೂರು ಝಗಮಗಿಸುತ್ತಿದೆ.
ಈಗಾಗಲೇ ಪೊಲೀಸ್ ಸರ್ಪಗಾವಲನ್ನೇ ಭದ್ರತೆಗೆ ನೇಮಿಸಲಾಗಿದೆ. ಇದರ ಹೊರತಾಗಿಯೂ ಖುದ್ದು ಪೊಲೀಸ್ ಆಯುಕ್ತರೇ ಫೀಲ್ಡಿಗಿಳಿದಿದ್ದಾರೆ.
ಎಂ.ಜಿ ರಸ್ತೆಯಲ್ಲಿ ಕ್ರೌಡ್ ಹೆಚ್ಚಾಗುತ್ತಿದ್ದಂತೆ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಫೀಲ್ಡಿಗಿಳಿದಿದ್ದಾರೆ. ಈ ವೇಳೆ ಗುಂಪಲ್ಲಿ ಜೋರಾಗಿ ಚೀರಾಡುತ್ತಾ ಕಿರಿಕಿರಿ ಮಾಡ್ತಿದ್ದ ಯುವಕನೊಬ್ಬನನ್ನ ವಶಕ್ಕೆ ಪಡೆದು ವಾರ್ನಿಂಗ್ ಕೂಡ ಮಾಡಿದ್ದಾರೆ.


