ಬೆಂಗಳೂರು: 2025ರ ಹೊಸ ವರ್ಷ (New Year 2025) ಸ್ವಾಗತಕ್ಕೆ ಕೆಲವೇ ನಿಮಿಷಗಳು ಬಾಕಿಯಿದೆ. ರಾಜಧಾನಿ ಬೆಂಗಳೂರಿನಲ್ಲಿ ಸಂಭ್ರಮಾಚರಣೆಗೆ ನೆರೆದಿರುವ ಜನಸಮೂಹ 2024ಕ್ಕೆ ಗುಡ್‌ಬೈ ಹೇಳಿ 2025ಕ್ಕೆ ಹಾಯ್ ಹೇಳಲು ತುದಿಗಾಲಲ್ಲಿ ನಿಂತಿದ್ದಾರೆ. ಕೆಲವರು ಆಗಲೇ ಎಣ್ಣೆ ಹೊಡೆದು ಜೋಶ್‌ನಲ್ಲಿ ತೇಲಾಡುತ್ತಿದ್ದಾರೆ.
“ಸರ್ಕಾರ ನಡೆಯುತ್ತಿರುವುದೇ ಮದ್ಯಪ್ರಿಯರಿಂದ”#Bengaluru #NewYear #HappyNewYear #Karnataka pic.twitter.com/C5TwANAgjb
— PublicTV (@publictvnews) December 31, 2024
ಈ ನೆಡುವೆ ಯುವ ಸಮೂಹ ʻಪಬ್ಲಿಕ್ ಟಿವಿʼ ಜೊತೆಗೆ ಮಾತನಾಡಿದ್ದು, ಮದ್ಯದ ದರ ಏರಿಕೆ ಮಾಡಿರುವುದಕ್ಕೆ ಆಕ್ರೋಶ ಹೊರಹಾಕಿದೆ. ಒಂದೆಡೆ ಅಭಿಮಾನಿಗಳು ಆರ್‌ಸಿಬಿ… ಆರ್‌ಸಿಬಿ… ಈ ಸಲ ಕಪ್ ನಮ್ದೇ ಅಂತ ಜೈಕಾರ ಹಾಕುತ್ತಿದ್ದರೆ, ಮತ್ತೊಂದೆಡೆ, ಮದ್ಯದ ದರ ಏರಿಕೆಯಾಗಿದೆ ಎಂದು ಬೇಸರ ಹೊರಹಾಕಿದ್ದಾರೆ.
ಇದೇ ವೇಳೆ ಯುವಕನೊಬ್ಬ ಮಾತನಾಡುತ್ತಾ, ಮದ್ಯಪ್ರಿಯರಿಗೆ ಬಂದಿರುವ ಕಷ್ಟ ಏನಂದ್ರೆ? ಗುರು… ಅಲ್ಲಿ ಮಾರೋದು 500 ರೂಪಾಯಿ, ಇಲ್ಲಿ ಮಾರೋದು 300 ರೂಪಾಯಿ, ಆಚೆ ಹೋದ್ರೆ 150 ರೂಪಾಯಿ… ಏನ್ ಅನ್ಯಾಯ ಗುರು..? ಸರ್ಕಾರ ನಡೀತಿರೋದೇ ಮದ್ಯಪ್ರಿಯರಿಂದ ಆದ್ರೆ, ಎಣ್ಣೆ ರೇಟ್ ಜಾಸ್ತಿ ಮಾಡಿದ್ದಾರೆ, ನಾವೇನ್ ಹೊರದೇಶದಿಂದ ಬಂದವರಾ ಎಂದೆಲ್ಲಾ ಅಲವತ್ತುಕೊಂಡಿದ್ದಾರೆ.