–
– ಎಲ್ಲಿ ಹತ್ತಿ, ಇಳಿದರೂ 50 ರೂ. ಪೇಪರ್ ಟಿಕೆಟ್ ಫಿಕ್ಸ್
ಬೆಂಗಳೂರು: ಹೊಸ ವರ್ಷಕ್ಕೆ ರಾಜಧಾನಿ ಬೆಂಗಳೂರು (Bengaluru) ರೆಡಿಯಾಗ್ತಿದ್ದು, ಡಿ.31ರ ರಾತ್ರಿ ನೇರಳೆ ಮತ್ತು ಹಸಿರು ಮಾರ್ಗ ಮೆಟ್ರೋ ರೈಲು ಸೇವೆಗಳ (Namma Metro Train Service) ವಿಸ್ತರಣೆ ಮಾಡಲಾಗಿದೆ. ಇದನ್ನೂ ಓದಿ: ಅಂತ್ಯಕ್ರಿಯೆ ಸ್ಥಳದಲ್ಲೇ ತಲೆಯೆತ್ತಲಿದೆಯೇ ಸಿಂಗ್ ಸ್ಮಾರಕ? – ಪ್ರಧಾನಿ ಮೋದಿಗೆ ಕಾಂಗ್ರೆಸ್ ಪತ್ರ!
ಜನವರಿ-1 ರಂದು ಮುಂಜಾನೆ 2 ಗಂಟೆಗೆ ಎಲ್ಲಾ ಟರ್ಮಿನಲ್‌ನಿಂದ ಮೆಟ್ರೋ ಸಂಚರಿಸಲಿದೆ. ಮೆಜೆಸ್ಟಿಕ್‌ನಿಂದ ಕೊನೆಯ ರೈಲು ಎಲ್ಲಾ 2.40 ಗಂಟೆಗೆ ಕೊನೆಯ ರೈಲು ಹೊರಡಲಿದೆ. 31 ಡಿಸೆಂಬರ್ ರಾತ್ರಿ 11 ರಿಂದ 10 ನಿಮಿಷಕ್ಕೊಮ್ಮೆ ಟ್ರೈನ್ ಸೇವೆ ಲಭ್ಯವಿರಲಿದೆ. ಇದನ್ನೂ ಓದಿ: ಮಧ್ಯಪ್ರದೇಶದ ಕುನೋ ಪಾರ್ಕ್‌ನ ಚಿರತೆ ಶಿಯೋಪುರ್ ರಸ್ತೆಯಲ್ಲಿ ಪತ್ತೆ – ನಿವಾಸಿಗಳಲ್ಲಿ ಆತಂಕ
ಡಿ. 31ರಂದು ರಾತ್ರಿ 11 ಗಂಟೆಯಿಂದ ಎಂಜಿ ರಸ್ತೆ ಮೆಟ್ರೋ ನಿಲ್ದಾಣದ ಪ್ರವೇಶ ಮತ್ತು ನಿರ್ಗಮನದ ದ್ವಾರಗಳನ್ನು ಮುಚ್ಚಲಾಗುತ್ತದೆ. ಹತ್ತಿರದ ಟ್ರಿನಿಟಿ ಮತ್ತು ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣಗಳಲ್ಲಿ ರೈಲುಗಳು ನಿಲ್ಲುತ್ತವೆ. ಎಲ್ಲಿ ಹತ್ತಿ ಇಳಿದರೂ 50 ರೂ. ಪೇಪರ್ ಟಿಕೆಟ್ ಫಿಕ್ಸ್ ಇರಲಿದೆ. ಇದನ್ನೂ ಓದಿ: ನೆಲಮಂಗಲ | ರೈಲಿಗೆ ಸಿಲುಕಿ 24 ಮೇಕೆಗಳ ದಾರುಣ ಸಾವು, 4 ಲಕ್ಷ ನಷ್ಟ