– ತಪ್ಪಿಸಿಕೊಂಡ ಮಗುವನ್ನು ತಾಯಿ ಮಡಿಲು ಸೇರಿಸಿದ ಖಾಕಿ
ಬೆಂಗಳೂರು: ಹೊಸ ವರ್ಷ (New Year 2025) ಸಂಭ್ರಮಾಚರಣೆಗೆ ಜನ ಸಾಗರವೇ ನೆರೆದಿದ್ದ ಎಂ.ಜಿ ರಸ್ತೆಯಲ್ಲಿ ಹತ್ತಾರು ಅವಾಂತರಗಳು ಉಂಟಾಗಿದೆ. ಸರಿಯಾಗಿ 12 ಗಂಟೆಗೆ ಅದ್ಧೂರಿಯಾಗಿ ಹೊಸ ವರ್ಷ ಕೊಂಡಾಡಿದ ಜನ ಸಮೂಹ ಬಳಿಕ ಮನೆಗೆ ತೆರಳಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಮತ್ತೊಂದೆಡೆ ಚರ್ಚ್‌ಸ್ಟ್ರೀಟ್‌ನಲ್ಲಿ ಕೆಲ, ಯುವಕ, ಯುವತಿಯರು ಕುಡಿದು ಮದ್ಯದ ಅಮಲಿನಲ್ಲಿ ತೇಲಾಡುತ್ತಿರುವ ದೃಶ್ಯಗಳೂ ಕಂಡುಬಂದಿವೆ.
ಮುನ್ನೆಚ್ಚರಿಕಾ ಕ್ರಮವಾಗಿ ರಾತ್ರಿ 11 ಗಂಟೆಗೆ ಎಂ.ಜಿ ರಸ್ತೆಯಿಂದ ಮೆಟ್ರೋ ಸಂಚಾರ ಬಂದಾದ ಹಿನ್ನೆಲೆ ಸಮೀಪದ ಟ್ರಿನಿಟಿ ಅಥವಾ ಕಬ್ಬನ್ ಪಾರ್ಕ್ ನಿಲ್ದಾಣದಿದ ತೆರಳಬೇಕಿತ್ತು. ಇದರಿಂದ ಎಂ.ಜಿ ರಸ್ತೆಯಲ್ಲಿ ಜನದಟ್ಟಣೆ ಉಂಟಾಯಿತು. ನೆರೆದಿದ್ದ ಜನರನ್ನ ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ಸಹ ನಡೆಸಿದ್ದಾರೆ.
ಇದೇ ವೇಳೆ ಯುವಕನೊಬ್ಬ ಕುಣಿಯುವ ಜೋಶ್‌ನಲ್ಲಿ ಕಾಲಿಗೆ ಪೆಟ್ಟುಮಾಡಿಕೊಂಡು ತೀವ್ರ ರಕ್ತಸ್ರಾವವಾದ ದೃಶ್ಯವೂ ಕಂಡುಬಂದಿತು. ಕೊನೆಗೆ ರಕ್ತಸ್ತ್ರಾವವಾಗುತ್ತಲೇ ಅಲ್ಲಿಂದ ಯುವಕ ಕಾಲ್ಕಿತ್ತಿದ್ದಾನೆ.
ತಪ್ಪಿಸಿಕೊಂಡ ಮಗು ತಾಯಿ ಮಡಿಲು ಸೇರಿತು:
ಇನ್ನು ಹೊಸ ವರ್ಷ ಸಂಭ್ರಮಾಚರಣೆ ವೇಳೆ ಕೋರಮಂಗಲ ಪಬ್ ಸ್ಟ್ರೀಟ್‌ನಲ್ಲಿ ಮಗುವೊಂದು ತಪ್ಪಿಸಿಕೊಂಡಿತು. ಕೂಡಲೇ ಎಚ್ಚೆತ್ತ ಪೊಲೀಸರು ಕೆಲವೇ ಕ್ಷಣಗಳಲ್ಲಿ ಮಗುವನ್ನು ಪತ್ತೆಮಾಡಿ ಹೆತ್ತವರ ಮಡಿಸಲು ಸೇರಿಸುವಲ್ಲಿ ಯಶಸ್ವಿಯಾದರು.