ಹೊಸ ವರ್ಷವನ್ನು ಯಾವ ದೇಶ ಮೊದಲು ಆಚರಿಸುತ್ತೆ ಗೊತ್ತಾ?

Public TV
3 Min Read
new year 2023

ನವದೆಹಲಿ: ಹೊಸ ವರ್ಷ 2023 (New Year 2023) ಸಂಭ್ರಮಾಚರಣೆಗೆ ಕ್ಷಣಗಣನೆ ಶುರುವಾಗಿದೆ. ಹಳೆ ವರ್ಷದ ಸುಖ-ದುಃಖ, ನೋವು ನಲಿವನ್ನು ನೆನೆದು ಎಲ್ಲದಕ್ಕೂ ಗುಡ್‌ಬೈ ಹೇಳಿ, ಸಿಹಿ ಕನಸುಗಳನ್ನು ಹೊತ್ತು ನ್ಯೂ ಇಯರ್‌ ಸೆಲಬ್ರೇಟ್‌ ಮಾಡಲು ಎಲ್ಲರೂ ಕಾತರರಾಗಿದ್ದಾರೆ.

ಸ್ನೇಹಿತರು, ಕುಟುಂಬದವರು, ಪ್ರೀತಿ ಪಾತ್ರರೊಡನೆ ಮೋಜು-ಮಸ್ತಿ ಮಾಡುತ್ತಾ ಹೊಸ ವರ್ಷ ಸ್ವಾಗತಿಸುವುದು ವಾಡಿಕೆ. ಆದರೆ ಎಲ್ಲಾ ದೇಶಗಳಲ್ಲೂ ಒಂದೇ ಸಮಯದಲ್ಲಿ ಹೊಸ ವರ್ಷ ಆಚರಣೆ ಮಾಡುವುದಿಲ್ಲ. ದೇಶದಿಂದ ದೇಶಕ್ಕೆ ಕಾಲಮಾನದಲ್ಲಿ ವ್ಯತ್ಯಾಸವಿರುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಹೀಗಾಗಿ ಕೆಲವು ದೇಶಗಳಲ್ಲಿ ನ್ಯೂ ಇಯರ್‌ ಸಂಭ್ರಮಾಚರಣೆ ಸಮಯ ಮೊದಲೇ ಬರುತ್ತೆ. ಕೆಲವು ದೇಶಗಳಿಗೆ ಕೊನೆಯಲ್ಲಿ ಬರುತ್ತೆ. ಇದನ್ನೂ ಓದಿ: ಹೊಸವರ್ಷ ಸಂಭ್ರಮಾಚರಣೆಗೆ ರಂಗೇರಿದ ಬೆಂಗಳೂರು

new year celebration

ಅಷ್ಟೇ ಅಲ್ಲದೇ, ಇನ್ನೂ ಕೆಲವು ದೇಶಗಳು ವರ್ಷದ ಕೊನೆಯಲ್ಲಿ ಸಂಭ್ರಮಾಚರಣೆ ಮಾಡುವುದಿಲ್ಲ. ಬದಲಾಗಿ ತಮ್ಮ ದೇಶದ ಸಂಪ್ರದಾಯ, ಹಬ್ಬಗಳಿಗೆ ಅನುಸಾರವಾಗಿ ಹೊಸ ವರ್ಷವನ್ನು ಸ್ವಾಗತಿಸುತ್ತವೆ. ಉದಾಹರಣೆಗೆ ಭಾರತಕ್ಕೆ ಹೊಸ ವರ್ಷವೆಂದರೆ ಅದು ಯುಗಾದಿ ಸಂದರ್ಭ.

ಹಾಗಾದರೆ ಡಿಸೆಂಬರ್‌ 31ರ ಮಧ್ಯರಾತ್ರಿ 12 ಗಂಟೆಯಲ್ಲಿ ಹೊಸ ವರ್ಷವನ್ನು ಮೊದಲು ಆಚರಿಸುವ ಅಥವಾ ಕೊನೆಯಲ್ಲಿ ಆಚರಿಸುವ ದೇಶಗಳು ಯಾವುವು? ಇಲ್ಲಿದೆ ನೋಡಿ ಮಾಹಿತಿ.

ಯಾವ ದೇಶ ಮೊದಲು ಹೊಸ ವರ್ಷ ಆಚರಿಸುತ್ತೆ?
ಓಷಿಯಾನಿಯಾವು ವಿಶ್ವದದಲ್ಲೇ ಹೊಸ ವರ್ಷಾಚರಣೆಯನ್ನು ಮೊದಲು ಆಚರಿಸುತ್ತದೆ. ಟೊಂಗಾ, ಕಿರಿಬಾಟಿ ಮತ್ತು ಸಮೋವಾಟಿನಿ ಪೆಸಿಫಿಕ್ ದ್ವೀಪ ರಾಷ್ಟ್ರಗಳು ಎಲ್ಲಾ ದೇಶಗಳಿಗಿಂತಲೂ ಮೊದಲು ಹೊಸ ವರ್ಷವನ್ನು ಸ್ವಾಗತಿಸುತ್ತವೆ. ಭಾರತೀಯ ಕಾಲಮಾನದ ಪ್ರಕಾರ ಡಿ.31ರಂದು ಬೆಳಗ್ಗೆ 10ಗಂಟೆಗೆ ಈ ದೇಶಗಳು ಹೊಸ ವರ್ಷವನ್ನು ಸಂಭ್ರಮಿಸುತ್ತವೆ (ಅಂದರೆ ಈಗಾಗಲೇ ಸಂಭ್ರಮಾಚರಣೆ ಮಾಡಿವೆ). ಇದನ್ನೂ ಓದಿ: ಬಂಡೀಪುರದಲ್ಲಿ ಹೊಸ ವರ್ಷದ ಸಂಭ್ರಮಾಚರಣೆಗೆ ಅವಕಾಶವಿಲ್ಲ – ಪ್ರವಾಸಿಗರಿಗೆ ಕಾಟೇಜ್ ಕೊಡದಿರಲು ನಿರ್ಧಾರ

ಯಾವ ದೇಶ ಕೊನೆಯಲ್ಲಿ ನ್ಯೂ ಇಯರ್‌ ಆಚರಿಸುತ್ತೆ?
ಯುನೈಟೆಡ್ ಸ್ಟೇಟ್ಸ್ ಹತ್ತಿರದ ಜನವಸತಿಯಿಲ್ಲದ ದ್ವೀಪಗಳಾದ ಬೇಕರ್ ಐಲ್ಯಾಂಡ್ ಮತ್ತು ಹೌಲ್ಯಾಂಡ್‌ನಲ್ಲಿ ಕೊನೆಯಲ್ಲಿ ನ್ಯೂ ಇಯರ್‌ ಆಚರಿಸಲಾಗುತ್ತೆ. ಇಲ್ಲಿ ಭಾರತೀಯ ಕಾಲಮಾನದ ಪ್ರಕಾರ ಜನವರಿ 1 ರಂದು ಸಂಜೆ 5:30 ಕ್ಕೆ ಹೊಸ ವರ್ಷವನ್ನು ಸ್ವಾಗತಿಸಲಾಗುತ್ತದೆ.

ಯಾವ್ಯಾವ ದೇಶಗಳು ಯಾವ ಸಮಯದಲ್ಲಿ ನ್ಯೂ ಇಯರ್‌ ಆಚರಿಸುತ್ತವೆ? (ಡಿ.31)
ಭಾರತದಲ್ಲಿ ಡಿ.31ರಂದು ಸಾಯಂಕಾಲ 3:45 ಸಮಯವಾಗಿದ್ದಾಗ, ನ್ಯೂಜಿಲೆಂಡ್‌ನಲ್ಲಿ ಮಧ್ಯರಾತ್ರಿ 12 ಗಂಟೆಯಾಗಿರುತ್ತದೆ. ಹೀಗಾಗಿ ನ್ಯೂಜಿಲೆಂಡ್‌ನಲ್ಲಿ ಭಾರತೀಯ ಕಾಲಮಾನದಂತೆ ಡಿ.31ರ ಸಾಯಂಕಾಲ 3:45ಕ್ಕೆ ನ್ಯೂ ಇಯರ್‌ ಆಚರಿಸಲಾಗುತ್ತದೆ. ಅಂತೆಯೇ ಆಸ್ಟ್ರೇಲಿಯಾದಲ್ಲಿ ಭಾರತೀಯ ಕಾಲಮಾನದಂತೆ ಸಂಜೆ 6:30ಕ್ಕೆ ಹೊಸ ವರ್ಷ ಸಂಭ್ರಮಿಸಲಾಗುತ್ತದೆ (ಅಂದರೆ ಈಗಾಗಲೇ ಸೆಲಬ್ರೇಷನ್‌ ಆಗಿದೆ). ಜಪಾನ್‌, ದಕ್ಷಿಣ ಕೊರಿಯಾ ಮತ್ತು ಉತ್ತರ ಕೊರಿಯಾದಲ್ಲಿ ಭಾರತೀಯ ಕಾಲಮಾನದ ಪ್ರಕಾರ ರಾತ್ರಿ 8:30ಕ್ಕೆ ನ್ಯೂ ಇಯರ್‌ ಸಂಭ್ರಮಿಸಲಿದ್ದಾರೆ.

ಚೀನಾ, ಫಿಲಿಪಿನ್ಸ್‌, ಸಿಂಗಾಪುರದಲ್ಲಿ ಭಾರತೀಯ ಕಾಲಮಾನದಂತೆ ರಾತ್ರಿ 9:30ಕ್ಕೆ ಸಂಭ್ರಮಾಚರಣೆ ಮಾಡಲಾಗುವುದು. ಬಾಂಗ್ಲದೇಶದಲ್ಲಿ ಭಾರತೀಯ ಕಾಲಮಾನದ ಪ್ರಕಾರ ರಾತ್ರಿ 11:30ಕ್ಕೆ, ನೇಪಾಳದಲ್ಲಿ ಭಾರತೀಯ ಕಾಲಮಾನದಂತೆ ರಾತ್ರಿ 11:45ಕ್ಕೆ, ಪಾಕಿಸ್ತಾನದಲ್ಲಿ ಭಾರತೀಯ ಕಾಲಮಾನದಂತೆ ಮಧ್ಯರಾತ್ರಿ 12:30ಕ್ಕೆ ನ್ಯೂ ಇಯರ್‌ ಆಚರಿಸಲಾಗುವುದು. ಭಾರತ ಮತ್ತು ಶ್ರೀಲಂಕಾ ದೇಶಗಳ ಸಮಯ ಒಂದೇ ಆಗುರುತ್ತೆ. ಹೀಗಾಗಿ ಈ ಎರಡು ದೇಶಗಳಲ್ಲಿ ಒಂದೇ ಸಮಯಕ್ಕೆ ನ್ಯೂ ಇಯರ್‌ ಸಂಭ್ರಮಿಸಲಾಗುವುದು. ಇದನ್ನೂ ಓದಿ: ಹೊಸ ವರ್ಷಕ್ಕೆ ಅಭಿಮಾನಿಗಳಿಗೆ ಸ್ಪೆಷಲ್ ಗಿಫ್ಟ್ ಕೊಟ್ಟ ಸ್ಯಾಂಡಲ್ ವುಡ್ ಕ್ವೀನ್

ಜನವರಿ 1
ಈ ಕೆಳಗೆ ಹೆಸರಿಸಲಾದ ದೇಶಗಳಲ್ಲಿ ಡಿ.31 ಮಧ್ಯರಾತ್ರಿ 12 ಗಂಟೆಯಾಗಿದ್ದರೆ, ಭಾರತದಲ್ಲಿ ಜನವರಿ 1 ಆಗಿರುತ್ತದೆ. ಹೀಗಾಗಿ ಈ ದೇಶಗಳಲ್ಲಿ ಮೇಲೆ ಹೆಸರಿಸಲಾದ ದೇಶಗಳಿಗಿಂತ ತುಂಬಾ ತಡವಾಗಿ ಹೊಸ ವರ್ಷವನ್ನು ಆಚರಿಸಲಾಗುತ್ತದೆ.

ಭಾರತೀಯ ಕಾಲಮಾನ ಜನವರಿ 1, ಬೆಳಗ್ಗೆ 7:30 ಆಗಿದ್ದರೆ, ಬ್ರೆಜಿಲ್‌ನಲ್ಲಿ ಡಿಸೆಂಬರ್‌ 31, ಮಧ್ಯರಾತ್ರಿ 12 ಗಂಟೆಯಾಗಿರುತ್ತದೆ. ಆದ್ದರಿಂದ ಭಾರತಕ್ಕಿಂತ ಒಂದು ದಿನ ತಡವಾಗಿ ಈ ದೇಶದಲ್ಲಿ ಸಂಭ್ರಮಾಚರಿಸಲಾಗುವುದು. ಅರ್ಜೆಂಟೀನಾ, ಚಿಲಿ, ಪೆರುಗ್ವೇ ದೇಶಗಳಲ್ಲಿ ಭಾರತೀಯ ಕಾಲಮಾನದಂತೆ ಜ.1ರ ಬೆಳಗ್ಗೆ 8:30ಕ್ಕೆ ನ್ಯೂ ಇಯರ್‌ ಆಚರಿಸಲಾಗುತ್ತದೆ.

ನ್ಯೂಯಾರ್ಕ್‌, ವಾಷಿಂಗ್ಟನ್‌ ದೇಶಗಳಲ್ಲಿ ಭಾರತೀಯ ಕಾಲಮಾನದಂತೆ ಜ.1ರ ಬೆಳಗ್ಗೆ 10:30ಕ್ಕೆ, ಚಿಕಾಗೋದಲ್ಲಿ ಬೆಳಗ್ಗೆ 11:30ಕ್ಕೆ, ಕೊಲೊರ‍್ಯಾಡೊ, ಅರಿಜೋನಾದಲ್ಲಿ ಮಧ್ಯಾಹ್ನ 12:30ಕ್ಕೆ, ನೆವಾಡದಲ್ಲಿ ಮಧ್ಯಾಹ್ನ 1:30ಕ್ಕೆ, ಅಲಸ್ಕಾದಲ್ಲಿ ಮಧ್ಯಾಹ್ನ 2:30ಕ್ಕೆ, ಹವಾಯಿಯಲ್ಲಿ ಮಧ್ಯಾಹ್ನ 3:30ಕ್ಕೆ, ಅಮೆರಿಕನ್‌ ಸಮೊವಾದಲ್ಲಿ ಸಾಯಂಕಾಲ 4:30ಕ್ಕೆ, ಹೌಲ್ಯಾಂಡ್‌ ಮತ್ತು ಬೇಕರ್‌ ಇಸ್‌ಲ್ಯಾಂಡ್‌ನಲ್ಲಿ ಭಾರತೀಯ ಕಾಲಮಾನದ ಜ.1ರ ಸಂಜೆ 5:30ಕ್ಕೆ ಹೊಸ ವರ್ಷವನ್ನು (ಅಂದರೆ ಕೊನೆಯದಾಗಿ) ಆಚರಿಸಲಾಗುತ್ತದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *