ಬೆಂಗಳೂರು: ಹೊಸ ವರುಷ.. ಹೊಸ ಹರುಷ.. (Newyear) ಇಡೀ ಜಗತ್ತು 2022ರ ವರ್ಷಕ್ಕೆ ಗುಡ್‌ಬೈ ಹೇಳಿ 2023ಕ್ಕೆ ಹಾಯ್ ಹಾಯ್ ಹೇಳಿದೆ. ಅದ್ರಲ್ಲೂ ಸಿಲಿಕಾನ್ ಸಿಟಿ ನಮ್ಮ ಬೆಂಗಳೂರಿನಲ್ಲಂತೂ ಮಧ್ಯರಾತ್ರಿ 12 ಗಂಟೆ ಆಗ್ತಿದ್ದಂತೆ ನ್ಯೂ ಇಯರ್‌ಗೆ ಗ್ರ್ಯಾಂಡ್ ವೆಲ್‌ಕಂ ಸಿಕ್ಕಿದೆ. ಎಂ.ಜಿ ರಸ್ತೆ, ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್‌ನಲ್ಲಂತೂ ಜನಸಾಗರವೇ ಹರಿದುಬಂದಿತ್ತು.
Advertisement
ಹಾಡು, ಕುಣಿತ, ಮೋಜು ಮಸ್ತಿ ಮಾಡಿ, ಪಟಾಕಿ ಸಿಡಿಸಿ ಹೊಸ ವರ್ಷವನ್ನು ಬರಮಾಡಿಕೊಂಡ್ರು. ಬಾರ್, ಪಬ್, ಕ್ಲಬ್‌ಗಳಲ್ಲಿ ಸೇರಿದ್ದ ಮದ್ಯ (Liquor) ಪ್ರಿಯರು ಪಾರ್ಟಿಗಳಲ್ಲಿ ಕುಡಿದು ತೂರಾಡಿ ಸಖತ್ ಎಂಜಾಯ್ ಮಾಡಿದ್ದಾರೆ. ಬಂದಿರುವ ಹೊಸ ವರ್ಷ ಹರುಷ ತರುವ ಜೊತೆಗೆ ಭರ್ಜರಿ ಆದಾಯವನ್ನೂ ತಂದುಕೊಟ್ಟಿದೆ. ಕಳೆದ 9 ದಿನಗಳಲ್ಲಿ ಅತ್ಯಧಿಕ ಮದ್ಯ ಸೇಲ್ ಆಗಿದ್ದು, ಅಬಕಾರಿ ಇಲಾಖೆಗೆ (Excise Department) 657 ಕೋಟಿ ರೂ. ಆದಾಯ ತಂದುಕೊಟ್ಟಿದೆ.
Advertisement
Advertisement
ಯಾವ ದಿನ ಎಷ್ಟು ಮಾರಾಟ?
Advertisement
- ಡಿಸೆಂಬರ್ 27 – 3.57 ಲಕ್ಷ ಲೀಟರ್ ಐಎಂಎಫ್ಎಲ್ (ಇಂಡಿಯನ್ ಮೇಡ್ ಫಾರೀನ್ ಲಿಕ್ಕರ್), 2.41 ಲಕ್ಷ ಲೀಟರ್ ಬಿಯರ್
- ಡಿಸೆಂಬರ್ 28 – 2.31 ಲಕ್ಷ ಲೀಟರ್ ಐಎಂಎಫ್ಎಲ್, 1.67 ಲಕ್ಷ ಲೀಟರ್ ಬಿಯರ್
- ಡಿಸೆಂಬರ್ 29 ರಂದು 2.31 ಲಕ್ಷ ಲೀಟರ್ ಐಎಂಎಫ್ಎಲ್, 1.93 ಲಕ್ಷ ಲೀಟರ್ ಬಿಯರ್
- ಡಿಸೆಂಬರ್ 30 ರಂದು 2.93 ಲಕ್ಷ ಲೀಟರ್ ಐಎಂಎಫ್ಎಲ್, 2.59 ಲಕ್ಷ ಲೀಟರ್ ಬಿಯರ್
- ಡಿಸೆಂಬರ್ 31 ರಂದು 3.00 ಲಕ್ಷ ಲೀಟರ್ ಐಎಂಎಫ್ಎಲ್, 2.41 ಲಕ್ಷ ಲೀಟರ್ ಬಿಯರ್
- ಸೆಂಬರ್ 31ರ ಒಂದೇ ದಿನ 3 ಲಕ್ಷ ಲೀಟರ್ ಐಎಂಎಫ್ಎಲ್, 2.41 ಲಕ್ಷ ಲೀಟರ್ ಬಿಯರ್
ಡಿ.23 ರಿಂದ 31ರ ವರೆಗೆ 20.66 ಲಕ್ಷ ಲೀಟರ್ ಐಎಂಎಲ್ ಮದ್ಯ ಹಾಗೂ 15.04 ಲಕ್ಷ ಲೀಟರ್ ಬಿಯರ್ ಮಾರಾಟವಾಗಿದೆ. ಇದರಿಂದ ಡಿಸೆಂಬರ್ 31ರ ಒಂದೇ ದಿನ ಬರೋಬ್ಬರಿ 181 ಕೋಟಿ ರೂ. ಮದ್ಯ ಮಾರಾಟವಾಗಿದ್ದು, ಕಳೆದ 9 ದಿನಗಳಲ್ಲಿ ಅಂದ್ರೆ ಡಿ. 23 ರಿಂದ ಡಿ.31ರ ವರೆಗೆ 1,262 ಕೋಟಿ ಮೊತ್ತದ ಮದ್ಯ ಮಾರಾಟವಾಗಿದ್ದರಿಂದ ಅಬಕಾರಿ ಇಲಾಖೆ ಬೊಕ್ಕಸಕ್ಕೆ 657 ಕೋಟಿ ಆದಾಯ ಹರಿದುಬಂದಿದೆ.