ರಾಯಚೂರು: ಹೊಸ ವರ್ಷದ ಆರಂಭ ಹಿನ್ನೆಲೆ ರಾಯಚೂರಿನ ವಿವಿಧ ದೇವಾಲಯಗಳಲ್ಲಿ ಬೆಳಗ್ಗೆಯಿಂದ ವಿಶೇಷ ಪೂಜೆಗಳನ್ನು ನೆರವೇರಿಸಲಾಯಿತು. ರಾಯರ ಸನ್ನಿಧಿ ಮಂತ್ರಾಲಯದಲ್ಲೂ ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ ಭಕ್ತರ ದಂಡು ಹರಿದು ಬಂದಿತ್ತು.
Advertisement
ಹೊಸ ವರ್ಷದ ಹಿನ್ನೆಲೆ ರಾಯರಿಗೆ ಪ್ರಾರ್ಥನೆಯನ್ನು ಸಲ್ಲಿಸಿದರು. ರಾಜ್ಯದ ಮೂಲೆ ಮೂಲೆಯಿಂದ ಭಕ್ತರು ಬಂದಿದ್ದರು. ಸಹಸ್ರಾರು ಭಕ್ತರು ತುಂಗೆಯಲ್ಲಿ ಮಿಂದೆದ್ದು ಪುಣ್ಯಸ್ನಾನ ಮಾಡಿ, ರಾಯರ ದರ್ಶನ ಪಡೆದರು. ಇದನ್ನೂ ಓದಿ: PM ಕಿಸಾನ್ ಯೋಜನೆ 10ನೇ ಕಂತಿನಡಿ ಕರ್ನಾಟಕಕ್ಕೆ 685 ಕೋಟಿ ರೂ.ಗೂ ಹೆಚ್ಚಿನ ಹಣ ಬಿಡುಗಡೆ
Advertisement
Advertisement
ನಗರದ ಚಂದ್ರಮೌಳೇಶ್ವರ ದೇವಾಲಯ, ನಂದೀಶ್ವರ ದೇವಾಲಯ ಸೇರಿದಂತೆ ಹಲವೆಡೆ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ಹೊಸ ವರ್ಷಾಚರಣೆ ಹಿನ್ನೆಲೆ ದೇವಾಲಯಗಳಲ್ಲಿ ವಿಶೇಷ ಪೂಜಾಲಂಕಾರ, ರುದ್ರಾಭಿಷೇಕ ಸೇರಿ ವಿಶೇಷ ಪೂಜೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಇದನ್ನೂ ಓದಿ: ಜ್ವರ, ಕೆಮ್ಮು, ತಲೆನೋವು ಇದ್ದರೂ ಕೋವಿಡ್ ಟೆಸ್ಟ್ ಮಾಡಿಸಿ: ಕೇಂದ್ರ ಸೂಚನೆ
Advertisement