Connect with us

Cricket

2020ಕ್ಕೆ ಗೆಳತಿಯನ್ನು ಪರಿಚಯಿಸಿದ ಹಾರ್ದಿಕ್ ಪಾಂಡ್ಯ

Published

on

ನವದೆಹಲಿ: ಸರ್ಬಿಯನ್ ಮಾಡೆಲ್, ನಟಿ ನತಾಶಾ ಸ್ಟಾಂಕೋವಿಕ್‍ರೊಂದಿಗೆ ಹಲವು ದಿನಗಳಿಂದ ಡೇಟಿಂಗ್ ನಡೆಸಿದ್ದ ಟೀಂ ಇಂಡಿಯಾ ಆಲ್‍ರೌಂಡರ್ ಹಾರ್ದಿಕ್ ಪಾಂಡ್ಯ, ತಮ್ಮ ಬಹುದಿನಗಳ ಸಂಬಂಧಕ್ಕೆ ಅಧಿಕೃತ ಮುದ್ರೆ ಒತ್ತಿದ್ದಾರೆ.

ಹೊಸ ವರ್ಷದ ಸಂಭ್ರಮದಲ್ಲಿರುವ ವೇಳೆಯೇ ಈ ಕುರಿತು ಸ್ಪಷ್ಟನೆ ನೀಡಿರುವ ಹಾರ್ದಿಕ್, ತಮ್ಮ ಇನ್‍ಸ್ಟಾದಲ್ಲಿ ನತಾಶಾ ಸ್ಟಾಂಕೋವಿಕ್‍ರೊಂದಿಗೆ ಇರುವ ಫೋಟೋವನ್ನು ಹಂಚಿಕೊಂಡು ಸ್ಪಷ್ಟನೆ ನೀಡಿದ್ದಾರೆ. ಈ ಬಾರಿಯ ಹೊಸ ವರ್ಷವನ್ನು ತಮ್ಮ ‘ಫೈರ್ ವರ್ಕ್’ನೊಂದಿಗೆ ಆರಂಭಿಸುತ್ತಿರುವುದಾಗಿ ಹೇಳಿದ್ದಾರೆ.

 

View this post on Instagram

 

Starting the year with my firework ❣️

A post shared by Hardik Pandya (@hardikpandya93) on

ಹಲವು ದಿನಗಳ ಹಿಂದೆಯೇ ಹಾರ್ದಿಕ್ ಪಾಂಡ್ಯ, ನತಾಶಾ ಜೋಡಿ ಮದುವೆಯಾಗಲಿದೆ ಎಂಬ ಸುದ್ದಿ ಹರಿದಾಡಿತ್ತು. ಈ ಎಲ್ಲಾ ಸುದ್ದಿಗಳಿಗೂ ಹಾರ್ದಿಕ್ ಫುಲ್ ಸ್ಟಾಪ್ ಹಾಕಿದ್ದಾರೆ. ಹಾರ್ದಿಕ್‍ರ ಈ ಪೋಸ್ಟ್ ಗೆ ಅವರ ಕುಟುಂಬ ಸದಸ್ಯರು ಸೇರಿದಂತೆ ಟೀಂ ಇಂಡಿಯಾದ ಹಲವು ಕ್ರಿಕೆಟ್ ಆಟಗಾರರು ಲೈಕ್ ಮಾಡಿ ಕಾಮೆಂಟ್ ಮಾಡಿದ್ದಾರೆ.

ಹಾರ್ದಿಕ್‍ರ ಈ ಆಪ್‍ಡೇಡ್ ನಿಂದ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದು, ಕಾಮೆಂಟ್ ಮಾಡಿ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ. ಅಂದಹಾಗೆ, ಹಾರ್ದಿಕ್ ಪಾಂಡ್ಯ ಗಾಯದ ಸಮಸ್ಯೆಯಿಂದ ಟೀಂ ಇಂಡಿಯಾ ತಂಡದಿಂದ ಹೊರಗುಳಿದಿದ್ದು, ಕಮ್ ಬ್ಯಾಕ್ ಮಾಡಲು ಸಿದ್ಧತೆ ನಡೆಸಿದ್ದಾರೆ. ಬೆನ್ನು ನೋವಿನ ಸಮಸ್ಯೆಯಿಂದ ಬಳುತ್ತಿದ್ದ ಹಾರ್ದಿಕ್ 2019ರಲ್ಲಿ ನಡೆದಿದ್ದ ದಕ್ಷಿಣ ಆಫ್ರಿಕಾ ಟೆಸ್ಟ್, ಬಾಂಗ್ಲಾದೇಶ ಹಾಗೂ ವೆಸ್ಟ್ ಇಂಡೀಸ್ ವಿರುದ್ಧ ತವರಿನಲ್ಲಿ ನಡೆದಿದ್ದ ಟೂರ್ನಿಗಳಿಗೆ ಅಲಭ್ಯರಾಗಿದ್ದರು.

2016ರಲ್ಲಿ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ್ದ ಹಾರ್ದಿಕ್ ಪಾಂಡ್ಯ ತಮ್ಮ ಆಲ್‍ರೌಂಡ್ ಪ್ರದರ್ಶನದಿಂದ ತಂಡದಲ್ಲಿ ಸ್ಥಾನ ಪಡೆದಿದ್ದರು. 2019ರ ವಿಶ್ವಕಪ್ ಟೂರ್ನಿಯ ತಂಡದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು.

Click to comment

Leave a Reply

Your email address will not be published. Required fields are marked *