ಬೆಂಗಳೂರು: ಶೀಘ್ರವಾಗಿ ರಾಜ್ಯಕ್ಕೆ ಹೊಸ ಗವರ್ನರ್ ಬರಲಿದ್ದು, ಕಳೆದ 5 ವರ್ಷದಿಂದ ರಾಜ್ಯದಲ್ಲಿರುವ ವಜುಭಾಯ್ ವಾಲಾರ ಸ್ಥಾನಕ್ಕೆ ಹೊಸ ಮಹಿಳಾ ಗವರ್ನರ್ ಬರಲಿದ್ದಾರೆ ಎಂದು ತಿಳಿದುಬಂದಿದೆ.
24 ವರ್ಷಗಳ ನಂತರ ಹೊಸ ರಾಜ್ಯಪಾಲರಲ್ಲಿ ವಿಶೇಷತೆಯೊಂದನ್ನು ಕಾಣಬಹುದು. ಎರಡೂವರೆ ದಶಕದ ಹಿಂದಿನ ನೆನಪು ಮರುಕಳಿಸುವಂತವರೇ ಗವರ್ನರ್ ಆಗಿ ಬರುವುದು ಬಹುತೇಕ ಖಚಿತವಾಗಿದೆ. ರಾಜ್ಯದ ಗವರ್ನರ್ ಗಳ ಸಂಭವನೀಯ ಪಟ್ಟಿಯಲ್ಲಿ ಮೂರು ಜನರ ಹೆಸರು ಇದೆ.
ಹಿರಿಯ ಬಿಜೆಪಿ ನಾಯಕಿಯರಾದ ಸುಷ್ಮಾ ಸ್ವರಾಜ್, ಉಮಾ ಭಾರತಿ ಹಾಗೂ ಸುಮಿತ್ರ ಮಹಾಜನ್ ಈ ಮೂವರ ಹೆಸರು ರಾಜ್ಯ ರಾಜ್ಯಪಾಲರ ಹುದ್ದೆಗೆ ಹೆಸರುಗಳು ಕೇಳಿಬಂದಿವೆ. ಆದರೆ ಅದರಲ್ಲಿ ಅಂತಿಮವಾಗಿ ಯಾರು ರಾಜ್ಯಕ್ಕೆ ರಾಜ್ಯಪಾಲರಾಗಿ ಬರುತ್ತಾರೆ ಅನ್ನೋದೆ ಕುತೂಹಲಕಾರಿ ಸಂಗತಿಯಾಗಿದೆ.
ಒಟ್ಟಿನಲ್ಲಿ ರಾಜ್ಯಕ್ಕೆ ಶೀಘ್ರವಾಗಿ ನೂತನ ಮಹಿಳಾ ಗವರ್ನರ್ ಬರಲಿದ್ದಾರೆ. 25 ವರ್ಷದ ಹಿಂದೆ ರಾಮಾದೇವಿಯವರು ರಾಜ್ಯದ ಮಹಿಳಾ ಗವರ್ನರ್ ಆಗಿ ಸೇವೆ ಸಲ್ಲಿಸಿದ್ದರು. ಎರಡೂವರೆ ದಶಕದ ನಂತರ ಮತ್ತೋರ್ವ ಮಹಿಳಾ ರಾಜ್ಯಪಾಲರು ರಾಜ್ಯಕ್ಕೆ ಬರುವುದು ಖಚಿತವಾಗಿದೆ.
ಒಟ್ಟಾರೆ ಈ ಬಾರಿ ರಾಜ್ಯಕ್ಕೆ ಬರಲಿರುವ ರಾಜ್ಯಪಾಲರು ಮಹಿಳಾ ರಾಜ್ಯಪಾಲರಾಗಿರುತ್ತಾರೆ ಅನ್ನೋದು ಖಚಿತವಾಗಿದೆ.