ನವದೆಹಲಿ: ದಕ್ಷಿಣ ಅಫ್ರಿಕಾದಲ್ಲಿ ಪತ್ತೆಯಾಗಿರುವ ಕೊರೊನಾ ವೈರಾಣುವಿನ ಹೊಸ ತಳಿ ಬಿ.1.1.529 ವಿರುದ್ಧ ಕೋವಿಡ್‍ನ ಲಸಿಕೆಗಳು ಪರಿಣಾಮ ಬೀರುವ ಸಾಧ್ಯತೆ ಅತ್ಯಂತ ಕಡಿಮೆ ಎಂದು ಬ್ರಿಟನ್‍ನ ಆರೋಗ್ಯ ಸಚಿವಾಲಯ ತಿಳಿಸಿದ್ದು, ಲಸಿಕೆ ಪಡೆದವರಲ್ಲೂ ಹೊಸ ತಳಿ ಪತ್ತೆಯಾಗಿ ಆತಂಕ ಮೂಡಿಸಿದೆ.
Advertisement
ದಕ್ಷಿಣ ಆಫ್ರಿಕಾದಲ್ಲಿ ಹೊಸ ರೂಪಾಂತರಿ ತಳಿಯ ಒಮಿಕ್ರಾನ್ ಅಥವಾ ಬಿ.1.1.529 ಎಂದು ಹೆಸರಿಟ್ಟಿರುವ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಆತಂಕಕ್ಕೆ ಎಡೆ ಮಾಡಿದೆ. ಈ ತಳಿಯಿಂದ ಒಬ್ಬ ವ್ಯಕ್ತಿಯಿಂದ ಉಳಿದವರಿಗೆ ಸೋಂಕು ಹಬ್ಬುವ ಪ್ರಮಾಣ ಉಳಿದ ರೂಪಾಂತರಿಗಿಂತ ಅಧಿಕವಾಗಿದೆ. ಈಗಾಗಲೇ ದಕ್ಷಿಣ ಆಫ್ರಿಕಾದಲ್ಲಿ 77 ಮಂದಿಯಲ್ಲಿ ಕಾಣಿಸಿಕೊಂಡಿದ್ದು, ವಿಶ್ವಾದ್ಯಂತ 87 ಮಂದಿಯಲ್ಲಿ ಕಾಣಿಸಿಕೊಂಡಿದೆ. ಇದನ್ನೂ ಓದಿ: ಕೊರೊನಾ ಹೊಸ ವೈರಸ್ B.1.1.529 ಪತ್ತೆ – ಭಾರತದಲ್ಲಿ ಆತಂಕ
Advertisement
Advertisement
ವಿಶ್ವಾದ್ಯಂತ 87 ಮಂದಿಗೆ ಸೋಂಕು ಕಾಣಿಸಿಕೊಂಡ ಬಳಿಕ ಈಗ ಭಾರತದಲ್ಲಿ ಕಟ್ಟೆಚ್ಚರ ವಹಿಸಲು ಪೂರ್ವಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಲಸಿಕೆಯ ಎರಡು ಡೋಸ್‍ಗಳನ್ನು ಪಡೆದುಕೊಂಡಿದ್ದವರಿಗೂ ಕೊರೊನಾ ಹೊಸ ರೂಪಾಂತರ ತಳಿ ತಗುಲಿದೆ. ಲಸಿಕೆಗಳು ಸೃಷ್ಟಿಸಿರುವ ಪ್ರತಿಕಾಯಗಳನ್ನು ಭೇದಿಸಿ ದೇಹವನ್ನು ಅಟಕಾಯಿಸಿಕೊಳ್ಳುತ್ತಿರುವ ತಳಿ ಅಂತಾ ಜಿನೋಮ್ ಸೀಕ್ವೆನ್ಸ್ ನಲ್ಲಿ ಪತ್ತೆಯಾಗಿದೆ. ಇದನ್ನೂ ಓದಿ: ಹೊಸ ರೂಪಾಂತರಿ ವೈರಸ್ ಪೀಡಿತ ದೇಶಗಳಿಂದ ವಿಮಾನ ಹಾರಾಟ ನಿಲ್ಲಿಸಿ – ಮೋದಿಗೆ ಕೇಜ್ರಿವಾಲ್ ಮನವಿ
Advertisement
ಹೊಸ ತಳಿ ಆತಂಕ ಯಾಕೆ?
ಮೂಲ ಕೊರೊನಾ ವೈರಾಣುವಿನಲ್ಲಿದ್ದ ಸ್ಪೈಕ್ ಪ್ರೊಟೀನ್‍ಗಳು ಮನುಷ್ಯನ ದೇಹವನ್ನು ಸೇರಲು ನೆರವಾಗುವ ಮುಳ್ಳುಗಳ ಸಂಖ್ಯೆ ಕಡಿಮೆ ಇತ್ತು. ಆದರೆ ಆಲ್ಫಾ ತಳಿಯಲ್ಲಿ ಈ ಸಂಖ್ಯೆ ಸ್ವಲ್ಪ ಹೆಚ್ಚಾಗಿತ್ತು. ಡೆಲ್ಟಾ ಮತ್ತು ಡೆಲ್ಟಾ ಪ್ಲಸ್ ತಳಿಗಳಲ್ಲಿ ಇವುಗಳ ಸಂಖ್ಯೆ ಅಪಾಯಕಾರಿ ಮಟ್ಟಕ್ಕೆ ಏರಿಕೆಯಾಗಿತ್ತು. ಇವುಗಳ ಸಂಖ್ಯೆ ಹೆಚ್ಚಿದ್ದಷ್ಟೂ, ಸೂಪರ್ ಸ್ಪ್ರೆಡ್ ಆಗುತ್ತದೆ. ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿರುವ ಬಿ.1.1.529 ತಳಿಯ ಪ್ರತೀ ವೈರಾಣುವಿನಲ್ಲಿ ಇಂತಹ 50 ಸ್ಪೈಕ್ ಪ್ರೊಟೀನ್‍ಗಳು ಇವೆ. ಹೀಗಾಗಿ ಇದು ಡೇಂಜರ್ ಎನ್ನಲಾಗಿದೆ.