ಬೆಂಗಳೂರು: ಹೊಸ ಮೋಟಾರು ವಾಹನ ಕಾಯ್ದೆ ಜಾರಿಯಾಗಿದ್ದು, ಮೊದಲ ಬಾರಿಗೆ ಬೈಕ್ ಸವಾರ 17 ಸಾವಿರ ದಂಡ ಪಾವತಿ ಮಾಡಿದ್ದಾನೆ.
ಮೋಟಾರು ವಾಹನ ಕಾಯ್ದೆ ಜಾರಿಯ ಆದೇಶ ಪ್ರತಿ ಸಿಕ್ಕ 24 ಗಂಟೆಯಲ್ಲಿ ಮೊದಲ ಬಾರಿಗೆ ಭಾರೀ ದಂಡ ವಿಧಿಸಲಾಗಿದೆ. ಸವಾರ ಆಕಾಶ್ ಹೆಲ್ಮೆಟ್ ಧರಿಸದೇ ಕುಡಿದು ವಾಹನ ಚಲಾಯಿಸಿದ್ದಾನೆ.
Advertisement
Advertisement
ಈ ವೇಳೆ ಕುಮಾರಸ್ವಾಮಿ ಲೇಔಟ್ ಸಂಚಾರಿ ಪೊಲೀಸರು ಆಕಾಶ್‍ನನ್ನು ತಡೆದು ಪರಿಶೀಲನೆ ನಡೆಸಿದ್ದು, ಡಿಎಲ್ ಕೂಡ ಇಲ್ಲದಿರುವುದರಿಂದ ದಂಡ ವಿಧಿಸಿದ್ದಾರೆ. ನಿಯಮಗಳ ಅನ್ವಯ ಕುಡಿದು ವಾಹನ ಚಲಾಯಿಸಿದ ಹಿನ್ನೆಲೆಯಲ್ಲಿ 10 ಸಾವಿರ, ಡಿಎಲ್ ಇಲ್ಲದಿದ್ದಕ್ಕೆ 5 ಸಾವಿರ ರೂ. ಹಾಗೂ ಹೆಲ್ಮೆಟ್ ಧರಿಸಿದ ಕಾರಣ ಇಬ್ಬರಿಗೆ ತಲಾ 1 ಸಾವಿರದಂತೆ 2 ಸಾವಿರ ರೂ. ದಂಡ ಬಿಲ್ ನೀಡಿದ್ದಾರೆ.
Advertisement
ಕುಮಾರಸ್ವಾಮಿ ಲೇಔಟ್ ಸಂಚಾರಿ ಪೊಲೀಸ್ ಠಾಣೆಯ ಎಎಸ್‍ಐ ಶಿವಣ್ಣ ಅವರು ಬೈಕ್ ಸವಾರನಿಗೆ ದಂಡ ವಿಧಿಸಿದ್ದು, ದಂಡದ ಮೊತ್ತ ಕಂಡ ಆಕಾಶ್ ಕಂಗಾಲಾಗಿದ್ದಾರೆ. ಇದರೊಂದಿಗೆ ನಗರದಲ್ಲೂ ವಾಹನ ಸವಾರರಿಗೆ ಹೊಸ ನಿಯಮಗಳ ಬಿಸಿ ತಟ್ಟಿದೆ. ನಿನ್ನೆ ಸಂಜೆಯಷ್ಟೇ ರಾಜ್ಯ ಸರ್ಕಾರಕ್ಕೆ ಹೊಸ ಕಾಯ್ದೆ ಜಾರಿಯ ಆದೇಶ ಪ್ರತಿ ಲಭಿಸಿತ್ತು.
Advertisement
ಇತ್ತ ಮಂಗಳವಾರ ದೆಹಲಿಯ ಗೀತಾ ಕಾಲೋನಿಯ ನಿವಾಸಿ ಗುರುಗ್ರಾಮದಲ್ಲಿ 23 ಸಾವಿರ ರೂ. ದಂಡ ಪಾವತಿಸಿದ್ದಾರೆ. ಗುರುಗ್ರಾಮದ ಸೆಕ್ಟರ್ 25ರ ಬಿಸ್ಟಲ್ ಚೌಕದ ಬಳಿ ಆಟೋ ಡ್ರೈವರ್ ಗೆ ಸಂಚಾರಿ ಪೊಲೀಸರು 32 ಸಾವಿರ ದಂಡ ವಿಧಿಸಿದ್ದರು.