ಜಾಗತಿಕ ತಾಪಮಾನ ಈ ಜಗತ್ತಿಗೆ ಅಂಟಿರೋ ಬಹುದೊಡ್ಡ ಪಿಡುಗು. ವಿಶ್ವಕ್ಕೆ ಕಂಟಕ ಪ್ರಾಯವಾಗಿರುವ ಇದನ್ನು ನಿರ್ವಹಿಸಲು ಎಲ್ಲಾ ರಾಷ್ಟ್ರಗಳು ಕೈಜೋಡಿಸಿವೆ. ಜಾಗತಿಕ ತಾಪಮಾನ ನಿರ್ವಹಿಸುವ ವಿಚಾರವಾಗಿ ಜಾಗತಿಕ ಮಟ್ಟದಲ್ಲಿ ಸಭೆ-ಸಮಾರಂಭಗಳು ನಡೆಯುತ್ತಲೇ ಇವೆ. ವಿಶ್ವ ನಾಯಕರು ಪಾಲ್ಗೊಂಡು ಗಂಭೀರ ಚರ್ಚೆಗಳನ್ನು ನಡೆಸುತ್ತಲೇ ಇದ್ದಾರೆ. ಆದರೆ ಈ ಗಂಡಾಂತರಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಇನ್ನೂ ಸಾಧ್ಯವಾಗಿಲ್ಲ. ಹೀಗಿರುವಾಗಲೇ ಪ್ರಾಕೃತಿಕ ವಿಕೋಪಗಳು ಒಂದಲ್ಲಾ ಒಂದು ರೀತಿ ಅನೇಕ ರಾಷ್ಟ್ರಗಳನ್ನು ಕಾಡುತ್ತಲೇ ಇವೆ.
ಜಾಗತಿಕ ತಾಪಮಾನ ಪರಿಣಾಮ ಕುರಿತು ಹೊಸ ಅಧ್ಯಯನವೊಂದು ಬಹಿರಂಗಪಡಿಸಿರುವ ವರದಿಯು ಭಾರತ, ಪಾಕಿಸ್ತಾನ ರಾಷ್ಟ್ರಗಳಿಗೆ ಭೀತಿ ಹುಟ್ಟಿಸಿದೆ. ಈ ಅಧ್ಯಯನದ ಪ್ರಕಾರ, ಹಿಮಗಳು ಕರಗುತ್ತಿರುವುದರಿಂದ ಭಾರತ, ಪಾಕಿಸ್ತಾನ ಸೇರಿದಂತೆ 4 ರಾಷ್ಟ್ರಗಳಲ್ಲಿ 15 ಮಿಲಿಯನ್‌ಗೂ (1.5 ಕೋಟಿ) ಅಧಿಕ ಜನರು ಅಪಾಯಕ್ಕೆ ಸಿಲುಕುವ ಸಾಧ್ಯತೆಯಿದೆ.
Advertisement
Advertisement
ಹೌದು, ಬ್ರಿಟನ್ ನ್ಯೂಕ್ಯಾಸಲ್ ವಿಶ್ವವಿದ್ಯಾನಿಲಯದ ವಿಜ್ಞಾನಿಗಳ ನೇತೃತ್ವದ ಅಂತಾರಾಷ್ಟ್ರೀಯ ತಂಡವು ಈ ಕುರಿತು ಅಧ್ಯಯನ ನಡೆಸಿದೆ. ಗ್ಲೇಶಿಯಲ್ ಲೇಕ್ (Glacial Lakes) ಔಟ್‌ಬರ್ಸ್ಟ್ ಫ್ಲಡ್‌ಗಳಿಂದ (GLOFs) ಹೆಚ್ಚಿನ ಅಪಾಯ ಉಂಟಾಗಲಿದೆ. ಹಿಮಾಲಯದಲ್ಲಿ 1 ಸಾವಿರಕ್ಕೂ ಅಧಿಕ ಹಿಮ ಸರೋವರಗಳು ಕರಗುತ್ತಿವೆ. ಇದರ ಪರಿಣಾಮವಾಗಿ ಭಾರತ (India), ಚೀನಾ (China), ಪಾಕಿಸ್ತಾನ (Pakistan), ಪೇರು ರಾಷ್ಟ್ರಗಳಲ್ಲಿ ಭೀಕರ ಪ್ರವಾಹ ಉಂಟಾಗಲಿದೆ.
Advertisement
ಹಿಮ ಸರೋವರದ ಪ್ರವಾಹವು ಜನರ ಭೀತಿಗೆ ಕಾರಣವಾಗಿದೆ. ಈ ಗ್ಲೇಶಿಯಲ್ ಸರೋವರದಲ್ಲಿ ಹಿಮ ಕರಗಿದಂತೆ ಅವು ತಗ್ಗು ಪ್ರದೇಶಗಳಲ್ಲಿ ಪ್ರವಾಹವನ್ನು ಉಂಟು ಮಾಡುತ್ತವೆ. ಇದನ್ನು ‘ಹಿಮ ಸರೋವರದ ದಿಢೀರ್ ಪ್ರವಾಹ’ ಎಂದು ಕರೆಯಲಾಗುತ್ತದೆ. ಹವಾಮಾನ ಬದಲಾವಣೆಯಿಂದಾಗಿ ಅಪಾಯವು ಬಹುಪಟ್ಟು ಹೆಚ್ಚಾಗಿದೆ ಎಂದು ಅಧ್ಯಯನವು ತಿಳಿಸಿದೆ.
Advertisement
ಪ್ರವಾಹ ಉಂಟಾಗುವುದು ಹೇಗೆ?: ಭೂಮಿಯ ಹವಾಮಾನವು ಹೆಚ್ಚು ಬಿಸಿಯಾಗುತ್ತಿರುವ ಕಾರಣದಿಂದ ಹಿಮಗಳು ಕರಗಿ ನೀರಾಗಿ ಸಂಗ್ರಹಗೊಳ್ಳುತ್ತಿದೆ. ಇದರಿಂದ ಸರೋವರಗಳು ಉಂಟಾಗುತ್ತವೆ. ಈ ಸರೋವರಗಳು ಇದ್ದಕ್ಕಿದ್ದಂತೆ ಒಡೆದು ವೇಗವಾಗಿ ಹರಿದು ಪ್ರವಾಹವನ್ನು ಉಂಟುಮಾಡಬಹುದು. ಅದು ಮೂಲಜಾಗದಿಂದ ಹೆಚ್ಚಿನ ದೂರದವರೆಗೆ ಹರಡಬಹುದು. ಇದು ಕೆಲವು ಸಂದರ್ಭಗಳಲ್ಲಿ 120 ಕಿಮೀಗಿಂತ ಹೆಚ್ಚು ದೂರಕ್ಕೂ ಹರಿಯಬಹುದು. ಪ್ರವಾಹಗಳು ಹೆಚ್ಚು ವಿನಾಶಕಾರಿಯಾಗಬಹುದು. ಆಸ್ತಿ, ಮೂಲಸೌಕರ್ಯ ಮತ್ತು ಕೃಷಿ ಭೂಮಿಯನ್ನು ಹಾನಿಗೊಳಿಸಬಹುದು. ಜೊತೆಗೆ ಜೀವಹಾನಿಯೂ ಆಗಬಹುದು.
ಅಧ್ಯಯನ ಹೇಳೋದೇನು?: ಜಿಎಲ್‌ಓಎಫ್‌ಗಳಿಂದ ಹೆಚ್ಚು ಅಪಾಯದಲ್ಲಿರುವ ಪ್ರದೇಶಗಳನ್ನು ಗುರುತಿಸಲು ಸಂಶೋಧಕರು, ಹಿಮನದಿಯ ಸರೋವರಗಳ ವಿವಿಧ ಸ್ಥಳಗಳ ಕುರಿತು ಉಪಗ್ರಹದ ಮೂಲಕ ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ಹಿಮನದಿ ಸರೋವರದಿಂದ 50 ಕಿ.ಮೀ ಮತ್ತು ಅದು ಹುಟ್ಟುವ ಒಂದು ಕಿ.ಮೀ ವ್ಯಾಪ್ತಿಯಲ್ಲಿ ವಾಸಿಸುವ ಜನರ ಬದುಕಿನ ಮೇಲೆ ಪರಿಣಾಮ ಬೀರಬಹುದು.
ಭಾರತಕ್ಕೆ ಕಾದಿದ್ಯಾ ಅಪಾಯ?: ಅಧ್ಯಯನದ ಪ್ರಕಾರ, ಭಾರತದಲ್ಲಿನ 3 ಮಿಲಿಯನ್ ಜನರು ಅಂದರೆ ಸುಮಾರು 30 ಲಕ್ಷ ಮಂದಿ ಹಿಮ ಸರೋವರಗಳಿಂದ ಉಂಟಾಗುವ ಪ್ರವಾಹಕ್ಕೆ ತುತ್ತಾಗುವ ಸಾಧ್ಯತೆ ಇದೆ. ಇದು ವಿಶ್ವದಲ್ಲೇ ಅತಿ ಹೆಚ್ಚು ಎಂದು ಪರಿಗಣಿತವಾಗಿದೆ. ಇನ್ನೂ ಪಾಕಿಸ್ತಾನದಲ್ಲಿ 2 ಮಿಲಿಯನ್ ಜನರು ಪ್ರವಾಹದ ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎಂದು ಅಂದಾಜಿಸಿದೆ.
ಗ್ಲೇಶಿಯಲ್ ಸರೋವರದ 50 ಕಿ.ಮೀ ವ್ಯಾಪ್ತಿಯಲ್ಲಿ 15 ಮಿಲಿಯನ್ ಜನರು ವಾಸಿಸುತ್ತಿದ್ದಾರೆ. ಕಿರ್ಗಿಸ್ತಾನ್‌ನಿಂದ ಚೀನಾದವರೆಗೆ ಟಿಬೆಟ್‌ನ್ನು ಆವರಿಸಿರುವ ಹೈಮೌಂಟೇನ್ ಏಷ್ಯಾ, ಅತ್ಯಧಿಕ ಗ್ಲೇಶಿಯಲ್ ಲೇಕ್ ಔಟ್‌ಬರ್ಸ್ಟ್ ಫ್ಲಡ್ ಅಪಾಯ ಸಂಭವಿಸುವ ವಲಯವಾಗಿದೆ. ಇಲ್ಲಿ 9.3 ಮಿಲಿಯನ್ ಜನರು ಅಪಾಯದಲ್ಲಿದ್ದಾರೆ ಎಂದು ಸಂಶೋಧನೆಗಳು ಹೇಳಿವೆ. ಇದನ್ನೂ ಓದಿ: PublicTV Explainer: ಕ್ಷಣ ಕಾಲ ನಿಂತು ವಿರುದ್ಧ ದಿಕ್ಕಿನಲ್ಲಿ ತಿರುಗುತ್ತಾ ಭೂಮಿ? – ಭೂಗರ್ಭದ ರಹಸ್ಯ ಬಿಚ್ಚಿಟ್ಟ ವಿಜ್ಞಾನಿಗಳು
ಚಮೋಲಿ ಪ್ರವಾಹ ಕರಾಳತೆ: ಫೆ. 2021ರಲ್ಲಿ ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಉಂಟಾಗಿದ್ದ ಹಠಾತ್ ಪ್ರವಾಹದಿಂದ ಸುಮಾರು 80 ಜನರು ಮೃತಪಟ್ಟಿದ್ದರು. ಈ ಪ್ರವಾಹದಲ್ಲಿ ಅನೇಕರು ಕಾಣೆಯಾದರು. ಹವಾಮಾನ ಬದಲಾವಣೆಯ ಪರಿಣಾಮವಾಗಿ 1990ರಿಂದ ಗ್ಲೇಶಿಯಲ್ ಸರೋವರಗಳ ಸಂಖ್ಯೆಯು ವೇಗವಾಗಿ ಬೆಳೆಯುತ್ತಿದೆ. ಅದೇ ಸಂದರ್ಭದಲ್ಲಿ ಈ ಜಲಾನಯನ ಪ್ರದೇಶಗಳಲ್ಲಿ ವಾಸಿಸುವ ಜನರ ಸಂಖ್ಯೆಯೂ ಗಮನಾರ್ಹವಾಗಿ ಹೆಚ್ಚಾಗಿದೆ.
GLOFs ಅಪಾಯ ನಿಯಂತ್ರಿಸಬಹುದೇ?: GLOFs ಅಪಾಯವನ್ನು ಕಡಿಮೆ ಮಾಡುವುದು ತುಂಬಾ ಕಷ್ಟ. ಯಾವುದೇ ಪರಿಹಾರವು ಕಾರ್ಯನಿರ್ವಹಿಸುವುದಿಲ್ಲ. ಹವಾಮಾನ ಬದಲಾವಣೆಯನ್ನು ಮಿತಿಗೊಳಿಸಬೇಕಷ್ಟೆ. ತಾಪಮಾನವು ಯಾವಾಗಲೂ 1.5 ಡಿಗ್ರಿ ಸೆಲ್ಸಿಯಸ್ ಒಳಗೇ ಇರುವಂತೆ ನೋಡಿಕೊಳ್ಳಬೇಕು. ಇದು ಹಿಮ ಸರೋವರಗಳ ಬೆಳವಣಿಗೆಯನ್ನು ನಿಧಾನಗೊಳಿಸಲು ಸಹಾಯ ಮಾಡುತ್ತದೆ. ಇದನ್ನೂ ಓದಿ: Public TV Explainer: ಭಾರತದಲ್ಲಿ ಲ್ಯಾಬ್‌ನಲ್ಲೇ ತಯಾರಾಗುತ್ತಾ ವಜ್ರ? – ಕೃತಕ ವಜ್ರ ಹೇಗೆ ತಯಾರಿಸ್ತಾರೆ ಗೊತ್ತಾ?