ಅಯೋಧ್ಯೆ: ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ (Arun Yogiraj) ನಿರ್ಮಿಸಿದ ಬಾಲರಾಮನ ಮೂರ್ತಿ ಅಯೋಧ್ಯೆ ರಾಮಮಂದಿರದ ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆಯಾಗಲಿದೆ.
ಹೌದು. ನೂತನವಾಗಿ ನಿರ್ಮಾಣವಾಗಿರುವ ಅಯೋಧ್ಯೆಯ ಶ್ರೀರಾಮ ಮಂದಿರದ (Ayodhya Ram Mandir) ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆಯಾಗುವ ಮೂರ್ತಿ ಯಾವುದು ಎಂಬ ಪ್ರಶ್ನೆಗೆ ಇಂದು ಉತ್ತರ ಸಿಕ್ಕಿದೆ.
ಈಗಾಗಲೇ 3 ಮೂರ್ತಿಗಳ ಕೆತ್ತನೆ ಕಾರ್ಯ ಮುಗಿದಿದ್ದು ಡಿ.29 ರಂದು ಮತದಾನ ಪ್ರಕ್ರಿಯೆ ಮೂಲಕ ಆಯ್ಕೆ ನಡೆದಿತ್ತು. ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಟ್ರಸ್ಟಿನ 11 ಸದಸ್ಯರು ಅತ್ಯುತ್ತಮ ಮೂರ್ತಿಯನ್ನು ಆಯ್ಕೆ ಮಾಡಿದ್ದಾರೆ. ಇದನ್ನೂ ಓದಿ: Ayodhya Ram Mandir: ರಾಮನೂರಿನಲ್ಲಿ ತಲೆಎತ್ತಲಿದೆ ದೇಶದ ಮೊದಲ 7 ಸ್ಟಾರ್ ಸಸ್ಯಹಾರಿ ಹೋಟೆಲ್
ಒಂದು ಮೂರ್ತಿಯನ್ನು ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆ ಮಾಡಿದರೆ ಇನ್ನುಳಿದ ಎರಡು ಮೂರ್ತಿಯನ್ನು ರಾಮ ದೇಗುಲದ ಆವರಣದಲ್ಲಿಯೇ ಇಡುವುದಾಗಿ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಹೇಳಿದೆ.
ಮೂರು ಮೂರ್ತಿಯ ಮಾದರಿಗಳು ಈಗಾಗಲೇ ಪೂರ್ಣಗೊಂಡಿದ್ದರೂ ಅದರ ಫೋಟೋ ಮತ್ತು ವಿಡಿಯೋ ಎಲ್ಲಿಯೂ ಲಭ್ಯವಿಲ್ಲ. ಇದನ್ನೂ ಓದಿ: ರಾಮಮಂದಿರ ಪ್ರಾಣಪ್ರತಿಷ್ಠೆಗೆ 55 ರಾಷ್ಟ್ರಗಳ 100ಕ್ಕೂ ಹೆಚ್ಚು ಗಣ್ಯರಿಗೆ ಆಹ್ವಾನ – ಯಾವ್ಯಾವ ದೇಶಕ್ಕೆ ಆಮಂತ್ರಣ?
ರಾಮಮಂದಿರದಲ್ಲಿ ಪ್ರತಿಷ್ಠಾಪಿಸಲು ಶಿಲ್ಪಿಗಳಾದ ಕರ್ನಾಟಕ ರಾಜ್ಯ ಮೈಸೂರು ಮೂಲದ ಅರುಣ್ ಯೋಗಿರಾಜ್ (Arun Yogiraj), ಗಣೇಶ್ ಭಟ್ ಮತ್ತು ಜೈಪುರದ ಸತ್ಯನಾರಾಯಣ ಪಾಂಡೆ ಅವರ ಮೂರ್ತಿಗಳನ್ನ ಕೆತ್ತನೆ ಮಾಡಿದ್ದಾರೆ. ಕರ್ನಾಟಕ ಇಬ್ಬರು ಶಿಲ್ಪಿಗಳು ಮೈಸೂರಿನ ಕೃಷ್ಣಶಿಲೆಯನ್ನು ಬಳಕೆ ಮಾಡಿ ಮೂರ್ತಿ ಕೆತ್ತನೆ ಮಾಡಿದ್ದಾರೆ. ಸತ್ಯನಾರಾಯಣಪಾಂಡೆ ಅವರು ರಾಜಸ್ಥಾನದಿಂದ ತರಿಸಲಾಗಿದ್ದ ಕಲ್ಲನ್ನು ಬಳಕೆ ಮಾಡಿದ್ದಾರೆ ಇದನ್ನೂ ಓದಿ: ಅಯೋಧ್ಯೆಯ ಬಾಲ ರಾಮನ ಮೂರ್ತಿಗೆ ಬಳಸಿದ್ದು ಮೈಸೂರಿನ ಕೃಷ್ಣ ಶಿಲೆ
ಅಂತಿಮವಾಗಿ ಪ್ರತಿಷ್ಠಾಪಿಸಬೇಕಾದ ರಾಮಲಲ್ಲಾ ಮೂರ್ತಿಯನ್ನು ಆಯ್ಕೆ ಮಾಡುವ ಮುನ್ನ ಅದರ ದೀರ್ಘಾವಧಿ ಬಾಳಿಕೆ ಕುರಿತು ತಾಂತ್ರಿಕ ವರದಿ ಪಡೆಯಲಾಗಿದೆ. ನಂತರ ಆಯ್ಕೆಯಾಗುವ ಮೂರ್ತಿಯನ್ನ ಜನವರಿ 22ರಂದು ನಡೆಯಲಿರುವ ಸಮಾರಂಭದಲ್ಲಿ ಪ್ರತಿಷ್ಠಾಪಿಸಲಾಗುತ್ತದೆ.
ಬಾಲರಾಮನ ಆಯ್ಕೆಗೆ ಮಾನದಂಡ ಏನು?
ವಿಗ್ರಹ ಕಡೆಯಲು ಬಳಸಿದ ಶಿಲೆಯ ಗುಣಮಟ್ಟ, ರಾಮನ ಬಾಲ್ಯದ ನೋಟ, ವಿಗ್ರಹಕ್ಕೆ ಇರುವ ಸೌಂದರ್ಯ, ಆಕರ್ಷಣೆ, ವಿಗ್ರಹಕ್ಕೆ ಇರುವ ದೈವತ್ವದ ಕಳೆ, ಭಾವ, ವಿಗ್ರಹದ ರಚನಾತ್ಮಕ ಸ್ವರೂಪ, ಕೆತ್ತನೆಯ ಗುಣಮಟ್ಟ ಎಲ್ಲವನ್ನು ಪರಿಗಣಿಸಲಾಗಿದೆ.
ಈ ಹಿಂದೆ ಅರುಣ್ ಯೋಗಿರಾಜ್ ಕೇದಾರನಾಥದಲ್ಲಿ ಪ್ರತಿಷ್ಠಾಪಿಸಲಾದ ಶಂಕರಾಚಾರ್ಯರು ಹಾಗೂ ದೆಹಲಿಯ ಇಂಡಿಯಾ ಗೇಟ್ ಬಳಿ ಪ್ರತಿಷ್ಠಾಪಿಸಲಾದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆಯನ್ನು ಕೂಡಾ ಕೆತ್ತುವ ಮೂಲಕ ಪ್ರಧಾನಿ ಮೋದಿ ಸೇರಿದಂತೆ ಇಡೀ ದೇಶದ ಮೆಚ್ಚುಗೆಗೆ ಪಾತ್ರರಾಗಿದ್ದರು