ನವದೆಹಲಿ : ಕೊರೊನಾ ವೈರಸ್ ಮೂರನೇ ಅಲೆ ಇಲ್ಲ ಅಂತ ಸಂತಸ ಪಡುವ ಹೊತ್ತಿನಲ್ಲಿಯೇ ಆಫ್ರಿಕಾದಲ್ಲಿ ಹೊಸ ರೂಪಾಂತರ ತಳಿ ಪತ್ತೆಯಾಗಿದ್ದು ಜನರಲ್ಲಿ ಆತಂಕ ಸೃಷ್ಟಿಸಿದೆ.
ಕೊರೊನಾ ಎರಡನೇ ಅಲೆಯ ನಂತರ ಮೂರನೇ ಅಲೆ ಬರುತ್ತದೆ ಎಂದು ಹೇಳಲಾಗುತ್ತಿತ್ತು. ಆದರೆ ವ್ಯಾಕ್ಸಿನ್ ಪಡೆದ ನಂತರ ಕೊರೊನಾ ಪ್ರಕರಣಗಳ ಸಂಖ್ಯೆ ದೇಶದಲ್ಲಿ ಇಳಿಕೆ ಕಂಡಿತು. ಇದೀಗ ಜನರಲ್ಲಿ ಕೋವಿಡ್ ಆತಂಕ ಮತ್ತೆ ಮನೆಮಾಡಿದೆ. ಅತ್ಯಂತ ಅಪಾಯಕಾರಿ ಕೋವಿಡ್ ವೈರಸ್‍ನ ರೂಪಾಂತರ ತಳಿ ಪತ್ತೆ ಆಗಿದ್ದು, ಈ ಕುರಿತಂತೆ ಕಟ್ಟೆಚ್ಚರ ವಹಿಸುವಂತೆ ಕೇಂದ್ರ ಆರೋಗ್ಯ ಸಚಿವಾಲಯ ಎಲ್ಲ ರಾಜ್ಯಗಳಿಗೂ ಪತ್ರ ಬರೆದಿದೆ. ಇದನ್ನೂ ಓದಿ: ಮಂಜು ಪಾವಗಡ ಜೊತೆ ಶುಭಾ ಮತ್ತೊಮ್ಮೆ ಟ್ರಿಪ್
Advertisement
Advertisement
`ಹಲವು ರೂಪಾಂತರಗಳನ್ನು ಹೊಂದಿರುವ ಕೋವಿಡ್ ವೈರಸ್‍ನ ಹೊಸ ತಳಿ ದಕ್ಷಿಣ ಆಫ್ರಿಕಾ, ಬೋಟ್ಸಾವಾನ, ಹಾಂಕಾಂಗ್‍ನಲ್ಲಿ ಪತ್ತೆ ಆಗಿದೆ. ಅಂತಾರಾಷ್ಟ್ರೀಯ ಪ್ರಯಾಣಕ್ಕೆ ವೀಸಾ ಸಡಿಲಿಕೆಯಿಂದ ಈ ರೂಪಾಂತರ ತಳಿ ಆ ದೇಶಗಳಲ್ಲಿ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಸೃಷ್ಟಿಸಿದೆ. ಈ ಹಿನ್ನೆಲೆಯಲ್ಲಿ ಈ ಹೈ ರಿಸ್ಕ್ ರಾಷ್ಟ್ರಗಳಿಂದ ಬರುವ ಪ್ರಯಾಣಿಕರನ್ನು ವಿಮಾನ ನಿಲ್ದಾಣಗಳಲ್ಲಿ ತೀವ್ರ ತಪಾಸಣೆಗೆ ಒಳಪಡಿಸಬೇಕು. ಕೋವಿಡ್ ಲಸಿಕೆಯ ವಿತರಣೆಯನ್ನು ತೀವ್ರಗೊಳಿಸಬೇಕು’ ಎಂದು ಆರೋಗ್ಯ ಸಚಿವಾಲಯ ಸೂಚಿಸಿದೆ.
Advertisement
Advertisement
ಹೊಸ ರೂಪಾಂತರ ತಳಿಯಿಂದಾಗಿ ದಕ್ಷಿಣ ಆಫ್ರಿಕಾದಲ್ಲಿ ಕೋವಿಡ್ ವೈರಸ್ ಪ್ರಮಾಣ 10 ಪಟ್ಟು ಏರಿಕೆ ಆಗಿದ್ದು, ದಕ್ಷಿಣ ಆಫ್ರಿಕಾ, ಬೋಟ್ಸಾವಾನಾ, ಜಿಂಬಾಬ್ವೆ, ನಮಿಬೀಯಾದಿಂದ ಬರುವ ವಿಮಾನಗಳಿಗೆ ಬ್ರಿಟನ್ ನಿಷೇಧ ಹೇರಿದೆ. ಇದನ್ನೂ ಓದಿ: ಇಂದಿನಿಂದ 3 ದಿನ ಚಂಡಮಾರುತ ಮಳೆ – ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಕಟ್ಟೆಚ್ಚರ