ಪುನೀತ್ ರಾಜ್ ಕುಮಾರ್ ಹುಟ್ಟು ಹಬ್ಬವನ್ನು ನಾನಾ ರೀತಿಯಲ್ಲಿ ಆಚರಿಸಲು ಸ್ಯಾಂಡಲ್‌ವುಡ್ ಸಿದ್ಧತೆ ಮಾಡಿಕೊಂಡಿದೆ. ಅಂದೇ ಅವರ ನಟನೆಯ ಜೇಮ್ಸ್ ಸಿನಿಮಾ ಬಿಡುಗಡೆ ಆಗುತ್ತಿರುವುದರಿಂದ ಈಗಾಗಲೇ ಥಿಯೇಟರ್‌ಗಳು ಸಿಂಗಾರಗೊಂಡಿವೆ. ಕೆಲವು ಕಡೆ ಪುನೀತ್ ಹೆಸರಿನಲ್ಲಿ ರಕ್ತದಾನ, ಅಂಗಾಂಗ ದಾನ, ಅನ್ನ ಸಂತರ್ಪಣೆ ಹೀಗೆ ಅನೇಕ ಕೆಲಸಗಳು ನಡೆಯುತ್ತಿವೆ. ಈ ನಡುವೆ ನಿರ್ದೇಶಕ ಸಂತೋಷ್ ಆನಂದ್ ರಾಮ್ ಹಾಡೊಂದನ್ನು ಬರೆದದ್ದು, ಪುನೀತ್ ವ್ಯಕ್ತಿತ್ವವನ್ನು ಸಾರುವಂತಹ ಗೀತೆ ಅದಾಗಿದೆ. ಆ ಹಾಡನ್ನು ಪುನೀತ್ ಅವರ ಹುಟ್ಟು ಹಬ್ಬದ ದಿನದಂದು (ಮಾ.17) ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ : ಕಿರುತೆರೆಯ ನಟ, ನಿರ್ದೇಶಕ ರವಿಕಿರಣ್ ಪುತ್ರ ಸಿನಿಮಾಗೆ ರಂಗಕ್ಕೆ ಎಂಟ್ರಿ
ಈ ಗೀತೆಯನ್ನು ವಿಜಯ ಪ್ರಕಾಶ್ ಹಾಡಿದ್ದು, ತಮನ್ನಾ ಅವರ ಸಂಗೀತ ಸಂಯೋಜನೆಯಲ್ಲಿ ಮೂಡಿ ಬರಲಿದೆ. ವಿಜಯ್ ಪ್ರಕಾಶ್ ಮತ್ತು ಸಂತೋಷ್ ಆನಂದ್ ರಾಮ್ ಕಾಂಬಿನೇಷನ್ ನಲ್ಲಿ ಮೂಡಿ ಬಂದಿದ್ದ ‘ಗೊಂಬೆ ಹೇಳತೈತೆ’ ಹಾಡು ದಾಖಲೆ ರೀತಿಯಲ್ಲಿ ಕೇಳುಗರನ್ನು ತಲುಪಿತ್ತು. ಈ ಹಾಡು ಕೂಡ ಅದೇ ಮಾದರಿಯಲ್ಲಿಯೇ ಬರಲಿದೆಯಂತೆ. ಇದನ್ನೂ ಓದಿ : ಪೂಜಾ ಹೆಗ್ಡೆ ಅವಕಾಶ ಕಿತ್ತುಕೊಂಡ ರಶ್ಮಿಕಾ ಮಂದಣ್ಣ
ಸಂತೋಷ್ ಆನಂದ್ ರಾಮ್ ಮತ್ತು ಪುನೀತ್ ರಾಜ್ ಕುಮಾರ್ ಕಾಂಬಿನೇಷನ್ ನಲ್ಲಿ ಎರಡು ಸಿನಿಮಾಗಳು ಬಂದಿದ್ದು, ಎರಡೂ ಚಿತ್ರಗಳು ಹಿಟ್ ಆಗಿವೆ. ಅಲ್ಲದೇ, ಹಾಡು ಮತ್ತು ಡಾನ್ಸ್ ಮೂಲಕ ಅತೀ ಹೆಚ್ಚು ಜನರನ್ನು ತಲುಪಿವೆ. ಇನ್ನೇನು ಮೂರನೇ ಸಿನಿಮಾ ಕೂಡ ಮೂಡಿ ಬರಬೇಕಿತ್ತು. ಅಷ್ಟರಲ್ಲಿ ಪುನೀತ್ ಅಗಲಿದರು. ಈಗ ಹಾಡಿನ ಮೂಲಕ ಪುನೀತ್ ಅವರನ್ನು ನೆನಪಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ ಸಂತೋಷ್ ಆನಂದ್ ರಾಮ್ .