ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಹೆಣ್ಮಕ್ಕಳನ್ನು ಚೂಡಾಯಿಸುವ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ನಿಟ್ಟಿನಲ್ಲಿ ಬೆಂಗಳೂರಿನ ಇಂದಿರಾನಗರ ಪಾರ್ಕ್‌ನಲ್ಲಿ (Indiranagar Park) ಮಹಿಳೆಯರ ಹಾಗೂ ಹಿರಿಯರ ಸುರಕ್ಷತೆಗಾಗಿ ಹೊಸ ರೂಲ್ಸ್‌ಗಳನ್ನು ಜಾರಿ ಮಾಡಿದೆ.
ಟ್ರಾಫಿಕ್ ಜಂಜಾಟ, ರಣ ಬಿಸಿಲಿಗೆ ಬೆಂಗಳೂರಿಗರು ರೋಸಿ ಹೋಗಿದ್ದಾರೆ. ಜನರಿಗೆ ಆರೋಗ್ಯ ಸಮಸ್ಯೆ ಕಾಡ್ತಿದೆ. ಹೊಟ್ಟೆ ಬೊಜ್ಜು ಕರಗಿಸಲು ಜನರು ಬೆಳಗ್ಗೆ ಮತ್ತು ಸಂಜೆ ಪಾರ್ಕ್‌ನಲ್ಲಿ ಜಾಗಿಂಗ್ ಮಾಡೋದು ಸಾಮಾನ್ಯ. ಆದರೆ ಇಂದಿರಾನಗರದ ಬಿಬಿಎಂಪಿಯ ಪಾರ್ಕ್‌ನಲ್ಲಿ ಜಾಗಿಂಗ್ ನಿಷೇಧ ಹೇರಲಾಗಿದ್ದು, ವಾಕಿಂಗ್‌ಗೂ ರೂಲ್ಸ್ ಮಾಡಲಾಗಿದೆ. ಪಾರ್ಕ್‌ನಲ್ಲಿ `ಜಾಗಿಂಗ್, ಆಟ ಆಡುವುದು, ಪಾಶ್ಚಿಮಾತ್ಯ ಉಡುಪು, ಎದುರು ಬದುರು ಜಾಗಿಂಗ್ ನಿಷೇಧ’ ಎಂದು ಬೋರ್ಡ್ ಹಾಕಲಾಗಿದೆ. ಇದನ್ನೂ ಓದಿ: ಅಭಿಮಾನಿಗಳ ಪ್ರೀತಿ ನೋಡಿದ್ರೆ ಅಪ್ಪು ಚಿಕ್ಕಪ್ಪ ಇಲ್ಲೇ ಇದ್ದಾರೆ ಅನಿಸುತ್ತೆ: ಯುವ
ಇಂದಿರಾನಗರ ಪಾರ್ಕ್ನಲ್ಲಿ ಹೆಣ್ಣುಮಕ್ಕಳು ವಾಕ್ ಮಾಡುವಾಗ ಕೆಲ ಪುರುಷರು ಕೆಟ್ಟ ಉದ್ದೇಶದಿಂದಲೇ ವಿರುದ್ಧ ದಿಕ್ಕಿನಲ್ಲಿ ವಾಕ್ ಮಾಡುತ್ತಿದ್ದರು. ಹೆಣ್ಣುಮಕ್ಕಳು ಮುಖಕ್ಕೆ ನೇರವಾಗಿ ವಾಕಿಂಗ್ ಮಾಡುತ್ತಿದ್ದರು. ಇದರಿಂದ ಹೆಣ್ಣಮಕ್ಕಳಿಗೆ ಅಭದ್ರತೆ ಕಾಡುತ್ತಿತ್ತು. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲೂ ಕೂಡ ಕೆಲವರು ಅಳಲು ತೋಡಿಕೊಂಡಿದ್ದರು. ಹಾಗಾಗಿ ಎದುರು ಬದುರಾಗಿ ವಾಕಿಂಗ್‌ಗೆ ನಿಷೇಧ ಹೇರಲಾಗಿದೆ. ಪಾರ್ಕ್‌ನಲ್ಲಿ ಕ್ಲಾಕ್ ವೈಸ್ ಡೈರೆಕ್ಷನ್‌ನಲ್ಲಿ ಮಾತ್ರ ವಾಕ್ ಮಾಡುವಂತೆ ನಿಯಮ ಮಾಡಲಾಗಿದೆ. ಜೊತೆಗೆ ವೆಸ್ಟರ್ನ್ ಡ್ರೆಸ್ ಸಹ ಹಾಕದಂತೆ ಸೂಚನೆ ನೀಡಲಾಗಿದೆ. ಇದನ್ನೂ ಓದಿ: ಜಾತಿನಿಂದನೆ, ಲೈಂಗಿಕ ಕಿರುಕುಳ ಆರೋಪ – ಗ್ರಾಮ ಪಂಚಾಯತಿ ಸದಸ್ಯ ಅರೆಸ್ಟ್
ಈ ಪಾರ್ಕ್‌ಗೆ ಹಿರಿಯರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದರು. ಹಿರಿಯರು ವಾಕ್ ಮಾಡುವಾಗ, ಬೇರೆಯವರು ಜಾಗಿಂಗ್ ಮಾಡಿದರೆ ಸಮಸ್ಯೆಯಾಗುತ್ತದೆ ಎನ್ನುವ ಕಾರಣಕ್ಕೆ ಜಾಗಿಂಗ್‌ಗೆ ನಿಷೇಧ ಹೇರಲಾಗಿದೆ. ಇದನ್ನೂ ಓದಿ: ಆಸ್ತಿ ಬರೆಸಿ ವೃದ್ಧ ಪೋಷಕರನ್ನು ಆಸ್ಪತ್ರೆಯಲ್ಲಿ ಬಿಟ್ಟು ಹೋಗುತ್ತಿದ್ದಾರೆ ಮಕ್ಕಳು!
ಪಾರ್ಕ್‌ನಲ್ಲಿ ಬಂದು ಕಾರ್ಡ್ ಆಡ್ತಾರೆ ಎನ್ನುವ ಕಾರಣಕ್ಕೆ ಪಾರ್ಕಿಂಗ್‌ನಲ್ಲಿ ಗೇಮಿಂಗ್ ಆಕ್ಟಿವಿಟೀಸ್‌ಗೆ ನಿಷೇಧ ಹೇರಲಾಗಿದೆ. ಸದ್ಯ ಬಿಬಿಎಂಪಿ ಹಾಗೂ ಇಂದಿರಾನಗರದ ಸಾಮಾಜಿಕ ಸೌಲಭ್ಯಗಳ ಸಂಘ ಮಾತುಕತೆ ಮಾಡಿ ಈ ರೀತಿಯ ನಿಯಮ ಮಾಡಿದೆ. ಹೊಸ ರೂಲ್ಸ್‌ನಿಂದ ಪಾರ್ಕ್‌ನಲ್ಲಿ ನೆಮ್ಮದಿಯಾಗಿ ವಾಕ್ ಮಾಡಬಹುದು ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.