ಬೆಂಗಳೂರು: 2025ರ ಹೊಸ ವರ್ಷ (New Year 2025) ಆಚರಣೆ ದಿನಗಣನೆ ಆರಂಭವಾಗಿದೆ. ಹಾಗಾಗಿ ಪೊಲೀಸರು ಈ ಬಾರಿ ಸಂಭ್ರಮಾಚರಣೆ ವೇಳೆ ಹದ್ದಿನ ಕಣ್ಣಿಡಲು ಸಕಲ ತಯಾರಿ ಮಾಡಿಕೊಂಡಿದ್ದಾರೆ. ಈಗಾಗಲೇ ಅದಕ್ಕೆ ಬೇಕಾದ ಸಿದ್ಧತೆಗಳನ್ನ ಮಾಡಿಕೊಂಡಿದ್ದರು ಸುಮಾರು 36 ಅಂಶಗಳನ್ನು ಒಳಗೊಂಡ ಗೈಡ್ ಲೈನ್ಸ್ ಅನ್ನು ಬೆಂಗಳೂರು ಪೊಲೀಸ್ ಆಯುಕ್ತರು (Bengaluru Police Commissioner) ಬಿಡುಗಡೆ ಮಾಡಿದ್ದಾರೆ.
Advertisement
ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಸೂಚನೆಯಂತೆ ಸಿದ್ಧತೆ ಮಾಡಿಕೊಳ್ಳಲು ಆಯಾ ಡಿಸಿಪಿಗಳಿಗೆ ಸೂಚನೆ ಕೊಡಲಾಗಿದೆ. ಪ್ರಮುಖವಾಗಿ ಇತ್ತೀಚಿಗೆ ಭಯೋತ್ಪಾದಕ ಚಟುವಟಿಕೆಗಳು ಹಾಗೂ ಕೆಲವು ಸಮಾಜ ಘಾತುಕ ಚಟುವಟಿಕೆಗಳು ಶಾಂತಿಗೆ ಭಂಗವನ್ನುಂಡುಮಾಡುವ ಸಾಧ್ಯತೆಗಳಿರುವುದರಿಂದ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಲಾಗಿದೆ.
Advertisement
Advertisement
ಸಂಭ್ರಮಾಚರಣೆ ವೇಳೆ ಕೆಲ ಕಿಡಿಗೇಡಿಗಳು ಅಟ್ಟಹಾಸ ಮೆರೆಯುವ ಸಾಧ್ಯತೆ ಇರುತ್ತೆ, ಅಂತವರ ಬಗ್ಗೆ ಹೆಚ್ಚು ಜಾಗ್ರತೆಯಿಂದ ಇರುವಂತೆ ಸೂಚನೆ ಕೊಡಲಾಗಿದೆ. ಹಾಗಾದರೆ ಬೆಂಗಳೂರು ಪೊಲೀಸರು ನ್ಯೂ ಇಯರ್ ಬಂದೋಬಸ್ತ್ಗೆ ಮಾಡಿಕೊಂಡಿರುವ ಬ್ಲೂ ಪ್ರೀಂಟ್ ಏನು ಎಂಬುದರ ಮಾಹಿತಿ ಇಲ್ಲಿದೆ.
Advertisement
ಹೊಸ ವರ್ಷಾಚರಣೆಗೆ ಟಫ್ ರೂಲ್ಸ್
- ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಿ
- ವರ್ಷಾಚರಣೆ ವಿರೋಧಿಸುವ ಸಂಘಸಂಸ್ಥೆಗಳ ಬಗ್ಗೆ ಮುಂಗಡವಾಗಿ ಮಾಹಿತಿ ಸಂಗ್ರಹ
- ಸಂಘಸಂಸ್ಥೆಗಳ ಚಲನವಲನಗಳ ಬಗ್ಗೆ ಗುಪ್ತ ಮಾಹಿತಿ ಸಂಗ್ರಹ
- ಮಾಲ್ ಸಿಸಿ ಕ್ಯಾಮೆರಾಗಳು ಸುಸ್ಥಿತಿಯಲ್ಲಿರುವಂತೆ ನೋಡಿಕೊಳ್ಳುವುದು
- ಎಲ್ಲಾ ಅಧಿಕಾರಿಗಳು ಸರ್ವಿಸ್ ರಿವಾಲ್ವರ್ ಕಡ್ಡಾಯವಾಗಿ ಹೊಂದಿರಬೇಕು
- ಸಿಬ್ಬಂದಿ ಹೆಲ್ಮೆಟ್ ಮತ್ತು ಲಾಠಿಗಳನ್ನು ಹೊಂದಿರಬೇಕು
- ಹೆಣ್ಮಕ್ಕಳನ್ನು ಚುಡಾಯಿಸುವವರು, ದಾಂದಲೆ ಮಾಡುವವರನ್ನ ಕೂಡಲೇ ವಶಕ್ಕೆ ಪಡೆದು ಕ್ರಮ
- ಮದ್ಯ ಮಾರಾಟ ಜಾಗದಲ್ಲಿ ಗಲಾಟೆ, ದೊಂಬಿ ನಡೆದರೆ ಮಾಲೀಕರೇ ಹೊಣೆ
- ಜನ ಸೇರುವ ರಸ್ತೆ ಮತ್ತು ಪ್ರದೇಶಗಳಲ್ಲಿ ಸಿಸಿಟಿವಿ ಅಳವಡಿಕೆ
- ಎಲ್ಲಾ ರಸ್ತೆಗಳಲ್ಲಿ ವಿದ್ಯುತ್ ದೀಪಗಳು ಆನ್ ಇರುವಂತೆ ನೋಡಿಕೊಳ್ಳುವುದು
- ಬ್ರಿಗೇಡ್ ರಸ್ತೆ, ಚರ್ಚ್ಸ್ಟ್ರೀಟ್, ಎಂ.ಜಿ ರಸ್ತೆ, ಇತರೆಡೆ ಜನರ ಆಗಮನ ಮತ್ತು ನಿರ್ಗಮನಕ್ಕೆ ಸೂಕ್ತ ಕ್ರಮ
- ರೌಡಿಗಳ ಚಟುವಟಿಕೆಗಳ ಮೇಲೆ ನಿಗಾ ವಹಿಸುವುದು
- ಪ್ರಮುಖ ರಸ್ತೆಗಳಲ್ಲಿ ವಾಹನ ನಿಲುಗಡೆ ನಿಷೇಧ
- ಪ್ರಮುಖ ಫ್ಲೈಓವರ್ಗಳ ಮೇಲೆ ವಾಹನ ಸಂಚಾರ ನಿಷೇಧಕ್ಕೆ ಕ್ರಮಕೈಗೊಳ್ಳಬೇಕು
- ಠಾಣೆಯ ಹೊಯ್ಸಳ ಮತ್ತು ಚೀತಾಗಳು ಚುರುಕಾದ ಗಸ್ತು ನಿರ್ವಹಿಸುವುದು ಎಂದು ರೂಲ್ಸ್ ಮಾಡಲಾಗಿದೆ.
- ಹೊಸ ವರ್ಷ 2025, ಬೆಂಗಳೂರು, ಬೆಂಗಳೂರು ಪೊಲೀಸ್, ಹೊಸ ವರ್ಷ ಗೈಡ್ಲೈನ್ಸ್