ಬೆಂಗಳೂರು: ಚೀನಾ (China) ದಲ್ಲಿ ದಾಂಗುಡಿ ಇಟ್ಟಿರುವ ಬಿಎಫ್.7 ಆತಂಕದ ಮಧ್ಯೆ ರಾಜ್ಯ ಸರ್ಕಾರ ಕೊರೊನಾ (Corona Virus) ಗೆ ಮೂಗುದಾರ ಹಾಕಲು ಮುಂದಾಗಿದೆ. ರಾಜ್ಯಾದ್ಯಂತ ಮತ್ತೆ ಮಾಸ್ಕ್ (Mask) ಕಡ್ಡಾಯ ರೂಲ್ಸ್ ಜಾರಿ ಮಾಡಲಾಗಿದೆ. ಹೊಸ ವರ್ಷಾಚರಣೆಯ ಸಂಭ್ರಮಕ್ಕೆ ಮತ್ತೆ ಕೆಲವೊಂದು ನಿರ್ಬಂಧಗಳನ್ನು ಹೇರಲಾಗಿದೆ.
Advertisement
ಹೊಸ ವರ್ಷದ ಆಚರಣೆಗೆ ಸರ್ಕಾರ ಮಾಸ್ಕ್ ಕಡ್ಡಾಯ ಮಾಡಿದ್ದಲ್ಲದೇ ಸಂಭ್ರಮಾಚರಣೆಗೆ ಮಧ್ಯರಾತ್ರಿ 1 ಗಂಟೆವರೆಗೆ ಡೆಡ್‍ಲೈನ್ ನೀಡಲಾಗಿದೆ. ಪಾರ್ಟಿಗಳಲ್ಲಿ ಹಿರಿಯರು, ಮಕ್ಕಳು, ಗರ್ಭಿಣಿಯರು ಭಾಗಿದಂತೆ ಪಾರ್ಟಿ ಆಯೋಜಕರು ನೋಡಿಕೊಳ್ಳಬೇಕು. ಮಧ್ಯರಾತ್ರಿ 1 ಗಂಟೆ ನಂತರ ಎಂಜಿ ರೋಡ್, ಬ್ರಿಗೇಡ್ ರೋಡ್ (Brigade Road) ಸೇರಿದಂತೆ ಇತರೆಡೆ ಯಾವುದೇ ಸಂಭ್ರಮಾಚರಣೆಗೆ ಅವಕಾಶ ಇರಲ್ಲ ಮತ್ತು ಪಬ್, ಹೋಟೆಲ್, ರೆಸ್ಟೋರೆಂಟ್ ಮಧ್ಯರಾತ್ರಿ 1 ಗಂಟೆ ನಂತರ ಬಂದ್ ಮಾಡುವುದು ಕಡ್ಡಾಯವಾಗಿದೆ.
Advertisement
Advertisement
ಬಾರ್ ಪಬ್‍ಗಳಲ್ಲಿ ಕೆಲವೊಂದು ನಿರ್ಬಂಧಗಳನ್ನು ಹೇರಲಾಗಿದ್ದು, ಟೇಬಲ್ ಇದ್ದಷ್ಟು ಮಾತ್ರ ಪಾರ್ಟಿಗೆ ಅವಕಾಶ ಕೊಡುವಂತೆ ಸೂಚನೆ ನೀಡಲಾಗಿದೆ. ಡಬಲ್ ಡೋಸ್ ಇಲ್ಲದಿದ್ದರೂ, ಒಳ ಪ್ರವೇಶಕ್ಕೆ ಅನುಮತಿ ನೀಡಬಾರದೆಂದು ಸೂಚಿಸಲಾಗಿದೆ. ಇದನ್ನೂ ಓದಿ: ಚೀನಾದಲ್ಲಿ ಕೊರೊನಾ ಆರ್ಭಟ – ಉದ್ಯೋಗ ಕಳ್ಕೊಂಡು ಬೀದಿಗೆ ಬಿದ್ದ 2 ಕೋಟಿ ಯುವಜನರು
Advertisement
ಕರ್ನಾಟಕಕ್ಕೆ ಯಾಕೋ ಡಿಸೆಂಬರ್ ಕೊರೊನಾ ಕಂಟಕ ಮಾಸವಾಗಿ ಪರಿಣಮಿಸಿದೆ. 2020, 2021, 2022 ಈ ಮೂರು ವರ್ಷಗಳು ಕೂಡ ವರ್ಷಾಚರಣೆಗೆ ಕೊರೊನಾ ಅಡ್ಡಿ ಆಗಿದೆ. ಈ ವರ್ಷವೂ ಕೊರೊನಾ ಅಬ್ಬರ ಮುಗಿಯಿತು ಅನ್ನೋವಷ್ಟರಲ್ಲಿ ವರ್ಷಾಂತ್ಯಕ್ಕೆ ಮತ್ತೆ ಕೊರೊನಾ ಟೆನ್ಷನ್ ಶುರುವಾಗಿದೆ. ಮುಂದಿನ 2-3 ತಿಂಗಳು ಕೊರೊನಾ ನಿರ್ಣಾಯಕವಾಗಿದ್ದು ಸದ್ಯ ಸರ್ಕಾರದ ರೂಲ್ಸ್ ಪಾಲಿಸುವುದು ಅನಿವಾರ್ಯವಾಗಿದೆ.
ಕೊರೊನಾಗಾಗಿ ಒಟ್ಟು 50,817 ಬೆಡ್‍ಗಳನ್ನು ಸರ್ಕಾರ ವ್ಯವಸ್ಥೆ ಮಾಡಿದೆ. ಒಟ್ಟಾರೆ ಹೊಸ ವರ್ಷಾಚರಣೆಗೆ ಸಿದ್ಧಗೊಂಡ ಬೆಂಗಳೂರಿಗೆ ಬಿಗ್ ಶಾಕ್ ಎದುರಾಗಿದೆ. ಬೇಕಾಬಿಟ್ಟಿ ಜನರ ಓಡಾಟಕ್ಕೆ ನಿರ್ಬಂಧ ಹೇರಿರೋ ಸರ್ಕಾರ, ಕೊರೊನಾ ಕಂಟ್ರೋಲಿಗೆ ಮುಂದಾಗಿದೆ.