ನವದೆಹಲಿ: 2018ರ ಎಪ್ರಿಲ್‍ನಲ್ಲಿ ಹೊಸ ವಿನ್ಯಾಸದ 100 ರೂ. ನೋಟುಗಳನ್ನು ಚಲಾವಣೆಗೆ ತರಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‍ಬಿಐ) ಮುಂದಾಗಿದೆ.
100 ರೂ. ಮುಖಬೆಲೆಯ ಹೊಸ ನೋಟುಗಳ ಮುದ್ರಣ ಪ್ರಕ್ರಿಯೆಯನ್ನು ಎಪ್ರಿಲ್ ವೇಳೆ ಆರಂಭಿಸಲಾಗುವುದು. 200 ರೂ.ಗಳ ಹೊಸ ನೋಟುಗಳ ಮುದ್ರಣ ಮುಗಿದ ನಂತರ ಹೊಸ ವಿನ್ಯಾಸ 100 ರೂ. ನೋಟುಗಳ ಮುದ್ರಣ ಆರಂಭವಾಗಲಿದೆ ಎಂದು ಆರ್‍ಬಿಐ ಮೂಲಗಳು ತಿಳಿಸಿವೆ.
Advertisement
ಆರ್‍ಬಿಐ ಆಗಸ್ಟ್ ತಿಂಗಳಿನಲ್ಲಿ 200 ರೂ. ಮುಖಬೆಲೆಯ ಹೊಸ ನೋಟುಗಳನ್ನು ಚಲಾವಣೆಗೆ ತಂದಿತ್ತು. ಆದರೆ ಈ ನೋಟುಗಳು ಇನ್ನೂ ಗ್ರಾಹಕರ ಕೈ ಸೇರಿಲ್ಲ. ಕೆಲ ಬ್ಯಾಂಕ್ ಗಳು 200 ರೂ. ನೋಟುಗಳನ್ನು ಹಾಕಲು ಎಟಿಎಂ ಯಂತ್ರಗಳನ್ನು ಪರಿವರ್ತನೆ ಮಾಡಲು ಸೂಚಿಸಿದೆ.
Advertisement
ಎಟಿಎಂ ಯಂತ್ರಗಳ ಮರು ಪರಿವರ್ತನೆಯನ್ನು ತಪ್ಪಿಸಲು ಹೊಸ ನೋಟುಗಳು ಸಮಾನ ಅಳತೆಯನ್ನು ಹೊಂದಿರಲಿದೆ ಎಂದು ಹೇಳಲಾಗಿದೆ.
Advertisement
ಮುಂದಿನ 6 ತಿಂಗಳ ಒಳಗಡೆ 200 ರೂ. ನೋಟುಗಳು ಎಲ್ಲ ಜನರ ಕೈಗೆ ಸಿಕ್ಕಿದ ಬಳಿಕ ಹೊಸ 100 ರೂ. ನೋಟುಗಳನ್ನು ಮುದ್ರಣ ಮಾಡಲು ಆರ್‍ಬಿಐ ಮುಂದಾಗಿದೆ. ಎಟಿಎಂನಲ್ಲಿರುವ ಒಟ್ಟು 4 ಕ್ಯಾಸೆಟ್ ಗಳಲ್ಲಿ ಒಂದರಲ್ಲಿ 100 ರೂ. ಮಾತ್ರ ಇರಲಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
Advertisement
ನವೆಂಬರ್ 8 ರಂದು 500, 1 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ನಿಷೇಧಿಸಿದ ಬಳಿಕ ಆರ್‍ಬಿಐ 2 ಸಾವಿರ ರೂ. ಮತ್ತು 500 ರೂ. ನೋಟುಗಳನ್ನು ಬಿಡುಗಡೆ ಮಾಡಿತ್ತು. ಇದಾದ ಬಳಿಕ 200 ರೂ. ಮತ್ತು 50 ರೂ. ನೋಟುಗಳನ್ನು ಬಿಡುಗಡೆ ಮಾಡಿತ್ತು.
ನೋಟು ಬ್ಯಾನ್ ಬಳಿಕ ಜನರಿಗೆ ಆಗಲಿರುವ ಸಮಸ್ಯೆಯನ್ನು ತಪ್ಪಿಸಲು ಬಿಡುಗಡೆಯಾಗಿದ್ದ 2 ಸಾವಿರ ರೂ. ನೋಟುಗಳ ಮುದ್ರಣ ಕಾರ್ಯವನ್ನು ಆರ್‍ಬಿಐ ಈಗ ಸಂಪೂರ್ಣ ಸ್ಥಗಿತಗೊಳಿಸಿದೆ.