ಬೆಂಗಳೂರು: ರೋಲರ್ ಸ್ಕೇಟಿಂಗ್ ಫೆಡರೇಷನ್ ಆಫ್ ಇಂಡಿಯಾ ಡಿ.15 ರಿಂದ 22 ರವರೆಗೆ ದೆಹಲಿಯಲ್ಲಿ ಆಯೋಜಿಸಿದ 59 ನೇ ರಾಷ್ಟಮಟ್ಟದ ರೋಲರ್ ಸ್ಕೇಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದ ಬೆಂಗಳೂರಿನ ಧನುಷ್ ಬಾಬು ನಾಲ್ಕು ಚಿನ್ನದ ಪದಕದ ಜೊತೆಗೆ ದೇಶದ ಅತ್ಯಂತ ವೇಗದ ಸ್ಕೇಟರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿ, ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.
Advertisement
17 ವರ್ಷಕ್ಕಿಂತ ಮೇಲ್ಪಟ್ಟ ಇನ್ ಲೈನ್ ಸ್ಕೇಟಿಂಗ್ ನ ಬಾಲಕರ ವಿಭಾಗದಲ್ಲಿ ಸ್ಪರ್ಧಿಸಿದ್ದ ಧನುಷ್ ಬಾಬು 200 ಮೀಟರ್ ಟೈಂಟ್ರಯಲ್ಸ್ ನಲ್ಲಿ 18.10 ಸೆಕೆಂಡ್ ನಲ್ಲಿ ಗುರಿಮುಟ್ಟಿ ಹೊಸ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದಾರೆ. ಭಾರತದಲ್ಲಿ ಇದೇ ಮೊದಲ ಬಾರಿಗೆ ಇಷ್ಟು ವೇಗದಲ್ಲಿ ಗುರಿಮುಟ್ಟಿದ್ದ ಏಕೈಕ ಸ್ಕೇಟರ್ ಎಂಬ ಹೆಗ್ಗಳಿಕೆಗೆ ಧನುಷ್ ಬಾಬು ಪಾತ್ರರಾಗಿದ್ದಾರೆ. 200 ಮೀಟರ್ ರಿಂಕ್ ರೇಸ್ ನಲ್ಲಿ ಚಿನ್ನದ ಪದಕ, ವನ್ ಲ್ಯಾಪ್ ರೋಡ್ ರೇಸ್ ನಲ್ಲಿ ಚಿನ್ನದ ಪದಕ, 100 ಮೀಟರ್ ರೋಡ್ ರೇಸ್ ನಲ್ಲಿ ಚಿನ್ನದ ಪದಕ ಹಾಗೂ ರಿಲೇಯಲ್ಲಿ ಚಿನ್ನದ ಪದಕ ಪಡೆಯುವುದರ ಮೂಲಕ ತಾನು ಭಾಗವಹಿಸಿದ ಎಲ್ಲಾ ನಾಲ್ಕು ಪಂದ್ಯದಲ್ಲೂ ನಾಲ್ಕೂ ಚಿನ್ನದ ಪದಕ ಪಡೆದು ರಾಷ್ಟ್ರೀಯ ಚಾಂಪಿಯನ್ ಆಗಿದ್ದಾರೆ. ಇದನ್ನೂ ಓದಿ: ಕಾಗವಾಡ ಮತಕ್ಷೇತ್ರದ ಬಿಜೆಪಿ ಶಾಸಕ ಶ್ರೀಮಂತ ಪಾಟೀಲ್‍ಗೆ ಕೊರೊನಾ
Advertisement
Advertisement
2022ರ ಜುಲೈನಲ್ಲಿ ಯುಎಸ್ ಎ ನಲ್ಲಿ ನಡೆಯಲಿರುವ ವಲ್ರ್ಡ್ ಗೇಮ್ಸ್ ನಲ್ಲೂ ಭಾಗವಹಿಸಲು ಅರ್ಹತೆ ಪಡೆದಿದ್ದು, ವಲ್ರ್ಡ್ ಗೇಮ್ಸ್ ಗೆ 17 ವರ್ಷಕ್ಕಿಂತ ಮೇಲ್ಪಟ್ಟ ವಿಭಾಗದಲ್ಲಿ ಭಾರತದಿಂದ ಆಯ್ಕೆಯಾದ ಮೊದಲ ಬಾಲಕ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಬೆಂಗಳೂರಿನ ನಿವಾಸಿಯಾದ ಬಾಲಾಜಿ ಬಾಬು ಹಾಗೂ ಸುಧಾ ಬಾಬು ದಂಪತಿಯ ಪುತ್ರನಾಗಿರುವ ಧನುಷ್ ಬಾಬು, ಸಿಟಿ ಸ್ಕೇಟರ್ಸ್ ಕ್ಲಬ್ ನಿಂದ ತನ್ನ ತಂದೆ ಬಾಲಾಜಿ ಬಾಬು ಅವರಿಂದಲೇ ತರಬೇತಿ ಪಡೆಯುತ್ತಿದ್ದಾರೆ.