ಬೆಂಗಳೂರು: 2019ರ ಐಪಿಎಲ್ ಆವೃತ್ತಿಯಲ್ಲಿ ಆಡಿರುವ 6 ಪಂದ್ಯಗಳಲ್ಲೂ ಸೋಲು ಕಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಕೊಹ್ಲಿ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಮಂದಿ ಟ್ರೋಲ್ ಮಾಡಿದ್ದಾರೆ. ಇದರ ಬೆನ್ನಲ್ಲೇ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಸಿಎಸ್‍ಕೆ ತಂಡವನ್ನು ಬೆಂಬಲಿಸಿದ್ದಾರೆ ಎಂದು ಅರ್ಥ ಬರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅನುಷ್ಕಾ ಶರ್ಮಾರ ಫೋಟೋಶಾಪ್ ಮಾಡಿದ ಫೋಟೋ ಇದಾಗಿದ್ದು, ಈ ಹಿಂದೆ ಹಳದಿ ಬಣ್ಣದ ಟೀ ಶರ್ಟ್ ಧರಿಸಿದ್ದ ಅನುಷ್ಕಾ ಶರ್ಮಾ ಫೋಟೋ ಮೇಲೆ ಸಿಎಸ್‍ಕೆ ಲೋಗೋ ಹಾಕಿ ಫೋಟೋಶಾಪ್ ಮಾಡಲಾಗಿದೆ.
ಹಳದಿ ಬಣ್ಣದ ಟೀ ಶರ್ಟ್ ಚೆನ್ನೈ ತಂಡದ ಜರ್ಸಿ ಆಗಿರುವುದಿಂದ ಕೆಲವರು ಸುಲಭವಾಗಿ ಫೋಟೋಶಾಪ್ ಮಾಡಿದ್ದು, ಆ ಮೂಲಕ ಕೊಹ್ಲಿ ಕಾಲೆಳೆಯಲು ಪ್ರತ್ನಿಸಿದ್ದರು. ಅಲ್ಲದೇ ಹಲವು ರೀತಿಯಲ್ಲಿ ಕೊಹ್ಲಿ, ಹಾಗೂ ಅನುಷ್ಕಾ ಶರ್ಮಾರ ಫೋಟೋಗಳನ್ನ ಬಳಸಿ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡುತ್ತಿದ್ದಾರೆ.
ಕೊಹ್ಲಿ ನಾಯಕತ್ವದ ಬಗ್ಗೆಯೂ ಕೆಲವರು ಕಾಮೆಂಟ್ ಮಾಡಿದ್ದು, ಕೊಹ್ಲಿ ವಿಶ್ವದ ನಂ.1 ಆಟಗಾರ ಹೌದು. ಆದರೆ ನಾಯಕತ್ವದ ಕೌಶಲ್ಯಗಳ ಬಗ್ಗೆ ಮತ್ತಷ್ಟು ಅನುಭವ ಪಡೆಯಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಉಳಿದಂತೆ ಶನಿವಾರ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ವಿರುದ್ಧ ಆರ್ ಸಿಬಿ ಪಡೆ ಕಣಕ್ಕಿಳಿಯಲಿದೆ.