ಭಾರತದ ನೂತನ ಸಂಸತ್ ಭವನಕ್ಕೆ ದೇಶದ ವಿವಿಧತೆಯ ಮೆರುಗು

Public TV
1 Min Read
New Parliament Building 1

– ಎಲ್ಲೆಲ್ಲಿಂದ ಏನೇನು ಬಂದಿದೆ?

ನವದೆಹಲಿ: ಭಾನುವಾರ ಉದ್ಘಾಟನೆಗೊಳ್ಳಲಿರುವ ದೇಶದ ನೂತನ ಸಂಸತ್ ಕಟ್ಟಡ (New Parliament) ಇಡೀ ಭಾರತದ ಸಾರವನ್ನು ಒಳಗೊಂಡಿದೆ. ಅಲ್ಲದೆ ಸಂಕೀರ್ಣದ ಒಳಗಿನ ಪ್ರತಿಯೊಂದು ಭಾಗಗಳೂ ವಿವಿಧ ರಾಜ್ಯಗಳ ಮಹತ್ವವನ್ನು ಇರಿಸಿಕೊಂಡಿದೆ.

ಹೊಸ ಸಂಸತ್ತಿನ ಕಟ್ಟಡ ರಚನೆಗೆ ಹಲವಾರು ಸಾಮಾಗ್ರಿಗಳನ್ನು ತ್ರಿಪುರ, ಉತ್ತರ ಪ್ರದೇಶ, ರಾಜಸ್ಥಾನ (Rajasthan) ಮತ್ತು ಉಳಿದ ಇತರ ರಾಜ್ಯಗಳಿಂದ ಪಡೆಯಲಾಗಿದೆ. ಇದನ್ನೂ ಓದಿ: 2 ವರ್ಷ ಕಾಲ ಹುಡುಕಾಟ – ಇತಿಹಾಸದಿಂದ ಮರೆಮಾಚಲಾಗಿದ್ದ ಸೆಂಗೋಲ್ ಬೆಳಕಿಗೆ ಬಂದಿದ್ದು ಹೇಗೆ?

new parliament building

 

ಎಲ್ಲೆಲ್ಲಿಂದ ಏನೇನು ಪ್ರಮುಖ ವಸ್ತುಗಳನ್ನು ತರಲಾಗಿದೆ?
ದೆಹಲಿಯ ಕೆಂಪು ಕೋಟೆ (Red Fort) ಮತ್ತು ಹುಮಾಯೂನ್ ಸಮಾಧಿಗೆ ಬಳಸಲಾಗಿರುವ ಮರಳುಗಲ್ಲನ್ನು ರಾಜಸ್ಥಾನದ ಸರ್ಮಥುರಾದಿಂದ ತಂದು ಸಂಸತ್ ಕಟ್ಟಡಕ್ಕೆ ಬಳಸಿಕೊಳ್ಳಲಾಗಿದೆ. ಲೋಕಸಭೆಯ (Lok Sabha) ಕೊಠಡಿಯೊಳಗೆ ಅಳವಡಿಸಲಾಗಿರುವ ಕೇಶರಿಯಾ ಹಸಿರು ಕಲ್ಲನ್ನು ರಾಜಸ್ಥಾನದ ಉದಯಪುರದಿಂದ ತರಲಾಗಿದೆ. ರಾಜ್ಯಸಭಾ ಕೊಠಡಿಯೊಳಗೆ ಸ್ಥಾಪಿಸಲಾದ ಕೆಂಪು ಗ್ರಾನೈಟ್‍ನ್ನು ಅಜ್ಮೀರ್‌ನ ಲಾಖಾದಿಂದ ಮತ್ತು ರಾಜಸ್ಥಾನದ ಅಂಬಾಜಿಯಿಂದ ಬಿಳಿ ಮಾರ್ಬಲ್‍ಗಳನ್ನು ತರಲಾಗಿದೆ.

ತೇಗದ ಮರಗಳನ್ನು ಮಹಾರಾಷ್ಟ್ರದ (Maharashtra) ನಾಗ್ಪುರದಿಂದ ತರಲಾಗಿದ್ದು, ಭವನದ ಒಳಗೆ ಇರಿಸಲಾದ ಪೀಠೋಪಕರಣಗಳನ್ನು ಮುಂಬೈನಲ್ಲಿ ತಯಾರಿಸಲಾಗಿದೆ. ಕಟ್ಟಡದ ಸುತ್ತಲೂ ಇರುವ ಕಲ್ಲಿನಿಂದ ತಯಾರಾದ ಜಾಲರಿಗಳನ್ನು ರಾಜಸ್ಥಾನ ಹಾಗೂ ಉತ್ತರಪ್ರದೇಶದ ನೋಯ್ಡಾದಿಂದ ತರಿಸಲಾಗಿದೆ. ಉಕ್ಕಿನಿಂದ ಮಾಡಿರುವ ಫಾಲ್ಸ್ ಸೀಲಿಂಗ್‍ಗಳನ್ನು ದಮನ್ ಮತ್ತು ದಿಯುನಿಂದ ಖರೀದಿಸಲಾಗಿದೆ.

ಅಶೋಕ ಸ್ತಂಭ ಲಾಂಛನವನ್ನು ಕೆತ್ತಲು ಬಳಸಲಾದ ವಸ್ತುಗಳನ್ನು ಔರಂಗಾಬಾದ್ ಮತ್ತು ಜೈಪುರದಿಂದ ತರಿಸಲಾಗಿತ್ತು. ಮೇಲಿನ ಮತ್ತು ಕೆಳಗಿನ ಮನೆಗಳಲ್ಲಿ ಸ್ಥಾಪಿಸಲಾದ ಅಶೋಕ ಚಕ್ರಗಳನ್ನು ಇಂದೋರ್‍ನಿಂದ ತರಲಾಗಿದೆ. ರಾಜಸ್ಥಾನದ ಕೊಟ್ಪುಟಲಿಯಿಂದ ತರಲಾಗಿದ್ದ ಕಲ್ಲನ್ನು ಇದಕ್ಕೆ ಬಳಸಲಾಗಿದೆ. ಇದರ ಕೆತ್ತನೆಯ ಕೆಲಸವನ್ನು ಉದಯಪುರದ ಶಿಲ್ಪಿಗಳು ಮಾಡಿದ್ದಾರೆ. ಇದನ್ನೂ ಓದಿ: ಮೋದಿ ಕನಸಿನ ಸೆಂಟ್ರಲ್ ವಿಸ್ಟಾ ಯೋಜನೆಯಿಂದ ಉಳಿತಾಯವಾಗಲಿದೆ 1,000 ಕೋಟಿ ವಾರ್ಷಿಕ ಬಾಡಿಗೆ

Share This Article