ಬೆಂಗಳೂರು: ದೇವಾಲಯಗಳಲ್ಲಿ ಹೆಚ್ಚು ಸೌಂಡ್ ಇರುವಂತಹ ಧ್ವನಿವರ್ಧಕ ಬಳಸುವಂತಿಲ್ಲ. ಪೂಜೆ ಸಂದರ್ಭದಲ್ಲಿ ಡಮರುಗ, ಧ್ವನಿವರ್ಧಕ, ಭಾರೀ ಸದ್ದಾಗುವ ಘಂಟೆ ಹೊಡೆಯದಂತೆ ಮುಜರಾಯಿ ಇಲಾಖೆಯಡಿಯ ದೇವಸ್ಥಾನಗಳಿಗೆ ನೋಟಿಸ್ ನೀಡಲಾಗಿದೆ. ಈ ಕುರಿತಾಗಿ ವಿಧಾನಸಭೆಯಲ್ಲಿ ಶೂನ್ಯವೇಳೆಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ದೊಡ್ಡ ಗಣಪತಿ ದೇವಸ್ಥಾನಕ್ಕೆ ನೋಟೀಸ್ ನೀಡಿದ ವಿಚಾರ ಪ್ರಸ್ತಾಪಿಸಿದ್ದಾರೆ.
Advertisement
ಘಂಟೆ ಶಬ್ಧದಿಂದ, ಶಂಖನಾದದಿಂದ ಮಾಲಿನ್ಯ ಅಂತಾರೆ, ಇದೊಂದು ಹೊಸದು, ಘಂಟೆಯಿಂದ ಮಾಲಿನ್ಯ ಆಗುತ್ತಾ? ಯಾರಿಗೆ ಕೆಟ್ಟ ಹೆಸರು ತರಲು ಹೀಗೆ ಮಾಡ್ತಿದ್ದಾರೆ? ತಲತಲಾಂತರಗಳಿಂದಲೂ ಘಂಟೆ, ಶಂಖನಾದ ಮಾಡುತ್ತಿದ್ದಾರೆ. ಸರ್ಕಾರ ಈ ಬಗ್ಗೆ ಸ್ಪಷ್ಟ ಉತ್ತರ ಕೊಡಬೇಕು ಅಂತಾ ಸಿ.ಟಿ.ರವಿ ಒತ್ತಾಯ ಮಾಡಿದ್ದಾರೆ. ಧ್ವನಿಗೂಡಿಸಿದ ಶಾಸಕ ರವಿಸುಬ್ರಮಣ್ಯ, ಇದು ಏಕೆ ಪದೇ ಪದೇ ಬರುತ್ತಿದೆ? ಇದರ ಹಿಂದೆ ಪಿತೂರಿ ಇರಬಹುದು. ಸರ್ಕಾರ ನಿಮ್ದೇ ಇದೆ, ಪಿತೂರಿ ಯಾರು ಮಾಡ್ತಾರೆ ಎಂದು ಶಿವಲಿಂಗೇಗೌಡ ಕಿಡಿ ಕಾರಿದ್ದಾರೆ.
Advertisement
Advertisement
ಅಧಿಕಾರಿಗಳ ಹಂತದಲ್ಲೇ ಏನೋ ಮಾಡಿರುತ್ತಾರೆ. ಸರ್ಕಾರದ ಉತ್ತರ ಕೇಳೋಣ ಎಂದ ಸ್ಪೀಕರ್, ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ, ನಮ್ಮ ಇಲಾಖೆಯಿಂದ ಯಾವುದೇ ಆದೇಶ ಆಗಿಲ್ಲ, ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಪತ್ರ ಬಂದಿತ್ತು, ಅದರ ಮೇರೆಗೆ ಪೊಲೀಸ್ ಇಲಾಖೆ ಸೂಚನೆ ಕೊಟ್ಟಿದೆ. ಮೈಕ್ ಮೂಲಕ ಕೂಗೂರಿಗೂ ಸೂಚನೆ ಕೊಟ್ಟಿದ್ದಾರೆ, ಗಂಟೆ ಹೊಡೆಯುವವರಿಗೂ ಕೊಟ್ಟಿದ್ದಾರೆ. ಆದರೆ ಈಗ ನೋಟೀಸ್ ವಾಪಸ್ ಪಡೆದಿದ್ದಾರೆ ಎಂದು ಗೃಹ ಸಚಿವ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: ದೇಗುಲಗಳಲ್ಲಿ ಗಂಟೆ ಸೌಂಡ್ ಜಾಸ್ತಿ ಬಂದ್ರೆ ದಂಡ, ಕೇಸ್- ಮುಜರಾಯಿ ಇಲಾಖೆಯಿಂದ ಹೊಸ ಆದೇಶ
Advertisement
ನಡೆದಿದ್ದೇನು?: ಮಾಲಿನ್ಯ ನಿಯಂತ್ರಣ ಮಂಡಳಿಯ ನಿರ್ದೇಶನದಂತೆ ನೋಟಿಸ್ ನೀಡಲಾಗಿದೆ. ಒಂದು ವೇಳೆ ಹೆಚ್ಚು ಸೌಂಡ್ ಬಂದ್ರೆ ಎರಡು ಬಾರಿ ದಂಡ ಹಾಕ್ತಾರೆ. ಮೂರನೇ ಬಾರಿಗೆ ಕೇಸ್ ದಾಖಲಿಸಿಕೊಳ್ತಾರೆ. ಇನ್ನೂ ದೇವಸ್ಥಾನಗಳಿಗೆ ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಕೂಡ ನಡೆಸಲಿದ್ದಾರೆ. ಈಗಾಗಲೇ ಬೆಂಗಳೂರಿನ ಪ್ರಸಿದ್ಧ ದೊಡ್ಡಗಣಪತಿ, ಬನಶಂಕರಿ, ಮಿಂಟೋ ಆಂಜನೇಯ ಸ್ವಾಮಿ ದೇವಸ್ಥಾನಗಳಿಗೆ ನೋಟಿಸ್ ನೀಡಲಾಗಿದೆ. ಈ ಬಗ್ಗೆ ಪರಿಸರ ಮತ್ತು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಪ್ರತಿಕ್ರಿಯಿಸಿದ್ದು, ನಮ್ಮ ಇಲಾಖೆಯಿಂದ ಯಾವುದೇ ನೊಟೀಸ್ ಕೊಟ್ಟಿಲ್ಲ ಅಂತ ಇಲಾಖೆಯ ಸೆಕ್ರೇಟರಿ ಹೇಳಿದ್ದಾರೆ. ನೊಟೀಸ್ ಪತ್ರದ ಸಂಖ್ಯೆ ನಮ್ಮ ಇಲಾಖೆಯದಲ್ಲ ಅಂತ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ರಾಹುಲ್ ಗಾಂಧಿಯು ದಿ.ರಾಜೀವ್ ಗಾಂಧಿ ಮಗ ಎಂಬುದಕ್ಕೆ ಬಿಜೆಪಿ ಪುರಾವೆ ಕೇಳಿತ್ತೇ? – ಅಸ್ಸಾಂ ಸಿಎಂ ವಿರುದ್ಧ ಪ್ರಕರಣ