ಬೆಂಗಳೂರು: ಹಿಜಬ್ ಗಾಗಿ ಹೋರಾಟ ಮಾಡುವವರು ಗಮನಿಸಬೇಕಾದಂತಹ ವಿಚಾರವೊಂದು ಶಿಕ್ಷಣ ಇಲಾಖೆಯಿಂದ ಹೊರಬಿದ್ದಿದೆ. ಸರ್ಕಾರದ ಆದೇಶ ಪಾಲನೆ ಮಾಡದೇ ಹೋದ್ರೆ ಪ್ರಾಯೋಗಿಕ ಪರೀಕ್ಷೆಗೆ ಅವಕಾಶ ಇಲ್ಲ ಎಂದು ಶಿಕ್ಷಣ ಇಲಾಖೆ ಸ್ಪಷ್ಟ ಸಂದೇಶ ರವಾನೆ ಮಾಡಿದೆ.
ಹಿಜಾಬ್ ಸಂಘರ್ಷ ಗೊಂದಲ ಹಿನ್ನೆಲೆಯಲ್ಲಿ ಪರೀಕ್ಷೆ ಹಾಜರಾಗದೇ ಹೋದ್ರೆ ಯಾವ ವಿದ್ಯಾರ್ಥಿಗಳಿಗೂ ವಿನಾಯ್ತಿ ಇಲ್ಲ ಎಂದು ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆ ಸಂಬಂಧ ಶಿಕ್ಷಣ ಇಲಾಖೆ ಸ್ಪಷ್ಟ ಮಾಹಿತಿ ನೀಡಿದೆ. ಇದನ್ನೂ ಓದಿ: ನಿಮಗೆ ಹೋರಾಟ ಅಲ್ಲ, ಲೂಟಿ ಹೊಡೆದು ಅಭ್ಯಾಸ ಇದೆ: ರೇಣುಕಾಚಾರ್ಯ ವ್ಯಂಗ್ಯ
Advertisement
Advertisement
ಫೆಬ್ರವರಿ 17 ರಿಂದ ದ್ವೀತಿಯ ಪಿಯುಸಿ ಪ್ರಾಯೋಗಿಕ ಪರೀಕ್ಷೆಗಳು ಪ್ರಾರಂಭ ಆಗಿವೆ. ಕೆಲ ಜಿಲ್ಲೆಗಳಲ್ಲಿ ನಾಳೆಯಿಂದ ಪ್ರಾರಂಭ ಆಗುತ್ತಿವೆ. ಸರ್ಕಾರದ ಆದೇಶ ಪಾಲನೆ ಮಾಡಿದ್ರೆ ಮಾತ್ರ ಪರೀಕ್ಷೆ ಬರೆಯಲು ಅವಕಾಶ ಸಿಗುತ್ತದೆ. ಇಲ್ಲದೆ ಹೋದ್ರೆ ಮತ್ತೆ ಪರೀಕ್ಷೆಗೆ ಅವಕಾಶ ನೀಡೋದಿಲ್ಲ. ಹೀಗಾಗಿ ನಿಯಮ ಪಾಲನೆ ಮಾಡಿ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆ ಸೂಚನೆ ನೀಡಿದೆ.
Advertisement
ಹಿಜಾಬ್ ಗಲಾಟೆಯಲ್ಲಿ ಪರೀಕ್ಷೆ ಬರೆಯದೇ ಹೋದ್ರೆ ಮತ್ತೆ ಅವಕಾಶ ಕೊಡುವುದಿಲ್ಲ ಎಂದು ಇಲಾಖೆ ಎಲ್ಲಾ ಕಾಲೇಜುಗಳಿಗೆ ಮಾಹಿತಿ ನೀಡಿದೆ.