ಕ್ಯಾನ್ಬೆರಾ: ಆಕಾಶದಲ್ಲಿ ಇಲ್ಲಿಯವರೆಗೆ ಎಂದಿಗೂ ಕಾಣಿಸಿಕೊಳ್ಳದ ವಿಚಿತ್ರ ವಸ್ತುವೊಂದನ್ನು ಮಿಲ್ಕಿ ವೇ(ಕ್ಷೀರಪಥ) ಗ್ಯಾಲಕ್ಸಿಯಲ್ಲಿ ಪತ್ತೆ ಹಚ್ಚಲಾಗಿದೆ. 18.18 ನಿಮಿಷಗಳಿಗೊಮ್ಮೆ ಸ್ಫೋಟಿಸುವ ಈ ಹೊಸ ವಸ್ತು ವಿಜ್ಞಾನ ಲೋಕಕ್ಕೆ ಹೊಸ ಸವಾಲಾಗಿದೆ.
ಪಶ್ಚಿಮ ಆಸ್ಟ್ರೇಲಿಯಾದ ಹೊರವಲಯದಲ್ಲಿರುವ ಮರ್ಚಿಸನ್ ವೈಡ್ಫೀಲ್ಡ್ ಅರೇ ಪ್ರಾಜೆಕ್ಟ್ ಅಡಿ ತಯಾರಾದ ದೂರದರ್ಶಕವನ್ನು ಬಳಸಿಕೊಂಡು ವಿದ್ಯಾರ್ಥಿಗಳು ಮೊದಲ ಬಾರಿಗೆ ಈ ವಿಚಿತ್ರ ವಸ್ತುವನ್ನು ಕಂಡುಹಿಡಿದಿದ್ದರು. ಈಗ ಪ್ರತಿ ಗಂಟೆಗೆ 3 ಬಾರಿ ದೊಡ್ಡ ಮಟ್ಟದ ಸ್ಫೋಟವನ್ನು ಬಿಡುಗಡೆ ಮಾಡುವ ವಸ್ತುವಿನ ಬಗ್ಗೆ ಖಗೋಳಶಾಸ್ತ್ರಜ್ಞರು ಕುತೂಹಲ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಚಂದ್ರನಿಗೆ ಅಪ್ಪಳಿಸಲಿದೆ SpaceX ರಾಕೆಟ್
Advertisement
Advertisement
ಈ ವಿಚಿತ್ರ ವಸ್ತು ಭೂಮಿಯಿಂದ 4 ಸಾವಿರ ಬೆಳಕಿನ ವರ್ಷಗಳಷ್ಟು ದೂರದಲ್ಲಿದೆ ಎಂದು ಊಹಿಸಲಾಗಿದೆ. ಅತ್ಯಂತ ಪ್ರಕಾಶಮಾನವಾಗಿರುವ ವಸ್ತು ಅತ್ಯಂತ ಬಲವಾದ ಕಾಂತೀಯ ಕ್ಷೇತ್ರವನ್ನು ಹೊಂದಿದೆ. ಇದರ ಬಗ್ಗೆ ಇನ್ನೂ ಹಲವು ರಹಸ್ಯವನ್ನು ಬಯಲು ಮಾಡುವುದು ಬಾಕಿ ಇದೆ ಎಂದು ಖಗೋಳಶಾಸ್ತ್ರಜ್ಞ ನತಾಶಾ ಹರ್ಲಿ-ವಾಕರ್ ತಿಳಿಸಿದ್ದಾರೆ. ಇದನ್ನೂ ಓದಿ: ಕಚ್ಚಾತೈಲ ಬೆಲೆ ಭಾರೀ ಏರಿಕೆ – ಮತ್ತೆ ಪೆಟ್ರೋಲ್ ಬೆಲೆ ದುಬಾರಿ?
Advertisement
ಕ್ಷೀರ ಪಥದಲ್ಲಿ ಕಂಡುಹಿಡಿಯಲಾದ ಈ ವಿಚಿತ್ರ ವಸ್ತು ಸದ್ಯ ಅಸ್ತಿತ್ವದಲ್ಲಿ ಇದೆಯೋ ಇಲ್ಲವೋ ಎಂಬುದರ ಬಗ್ಗೆ ಖಚಿತವಾಗಿಲ್ಲ. ಇದು ನಕ್ಷತ್ರದ ಅವಶೇಷವೂ ಅಗಿರುವ ಸಾಧ್ಯತೆಯಿದೆ. ಆದರೆ ಇದು ಇಲ್ಲಿಯವರೆಗೆ ಆಕಾಶದಲ್ಲಿ ಕಂಡುಹಿಡಿಯಲಾದ ಎಲ್ಲಾ ವಸ್ತುಗಳಿಗಿಂತಲೂ ಭಿನ್ನವಾಗಿದೆ ಎಂದು ತಿಳಿಸಿದ್ದಾರೆ.