ಬೆಂಗಳೂರು: 40 ಪ್ರಾಕ್ಟೀಸ್ ಪಿಚ್‌ಗಳು, ಇಂಡೋರ್ ಕ್ರಿಕೆಟ್ ಪಿಚ್ ಹಾಗೂ ಒಲಿಂಪಿಕ್ಸ್ ಗಾತ್ರದ ಈಜುಕೊಳ ಸೇರಿ ಅನೇಕ ಅತ್ಯಾಧುನಿಕ ಸೌಕರ್ಯಗಳನ್ನು ಒಳಗೊಂಡಿರುವ ನೂತನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (NCA) ಬೆಂಗಳೂರಿನಲ್ಲಿ ಉದ್ಘಾಟನೆಯಾಗಲಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ (Jay Shah) ಹೇಳಿದ್ದಾರೆ.
Very excited to announce that the @BCCI’s new National Cricket Academy (NCA) is almost complete and will be opening shortly in Bengaluru. The new NCA will feature three world-class playing grounds, 45 practice pitches, indoor cricket pitches, Olympic-size swimming pool and… pic.twitter.com/rHQPHxF6Y4
— Jay Shah (@JayShah) August 3, 2024
Advertisement
ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಬಿಸಿಸಿಐನ (BCCI) ಹೊಸ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಬಹುತೇಕ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಉದ್ಘಾಟನಾಯಾಗಲಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಒಲಿಂಪಿಕ್ಸ್ ಪದಕ ಗೆದ್ದ ಬೆನ್ನಲ್ಲೇ ಮನು ಭಾಕರ್‌ಗೆ ಭರ್ಜರಿ ಆಫರ್ – ಬ್ರ್ಯಾಂಡ್ ಮೌಲ್ಯ 6 ಪಟ್ಟು ಹೆಚ್ಚಳ
Advertisement
Advertisement
ಉದ್ಘಾಟನೆಗೊಳ್ಳಲಿರುವ ನೂತನ ಕ್ರಿಕೆಟ್ ಅಕಾಡೆಮಿಯಲ್ಲಿ ಮೂರು ವಿಶ್ವದರ್ಜೆಯ ಆಟದ ಮೈದಾನಗಳು (World class playing grounds), 45 ಅಭ್ಯಾಸ ಪಿಚ್‌ಗಳು, ಇಂಡೋರ್ ಕ್ರಿಕೆಟ್ ಪಿಚ್‌ಗಳು, ಒಲಿಂಪಿಕ್ಸ್ ಗಾತ್ರದ ಈಜುಕೊಳ (Olympic size swimming Pool), ತರಬೇತಿ, ಚೇತರಿಕೆ ಹಾಗೂ ಕ್ರೀಡಾ ವಿಜ್ಞಾನ ಸಂಸ್ಥೆಯಂತಹ ಸೌಲಭ್ಯಗಳು ಇರಲಿವೆ ಎಂದು ಜಯ್ ಶಾ ಮಾಹಿತಿ ಹಂಚಿಕೊಂಡಿದ್ದಾರೆ.
Advertisement
ಈ ಅಕಾಡೆಮಿಯು ನಮ್ಮ ದೇಶದ ಪ್ರಸ್ತುತ ಹಾಗೂ ಭವಿಷ್ಯದ ಆಟಗಾರರು ತಮ್ಮ ಕೌಶಲ್ಯ ಹೆಚ್ಚಿಸಿಕೊಳ್ಳಲು ಹಾಗೂ ಆಟಗಾರರಿಗೆ ಉತ್ತಮ ವಾತಾವರಣ ಕಲ್ಪಿಸಲು ಸಹಾಯಕವಾಗುತ್ತದೆ ಎಂದು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: IND vs SL ODI: ಟೀಂ ಇಂಡಿಯಾ ಆಲೌಟ್; ಗೆಲುವಿಗೆ ಬೇಕಿದ್ದ 1 ರನ್ ಗಳಿಸಲು ವಿಫಲ – ಲಂಕಾ ವಿರುದ್ಧದ ಚೊಚ್ಚಲ ಪಂದ್ಯ ಟೈ