ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಯುವಪೀಳಿಗೆ ಭವಿಷ್ಯ ಉಜ್ವಲ – ಗೆಹ್ಲೋಟ್

Public TV
1 Min Read
thawarchand gehlot

ಧಾರವಾಡ: ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು (New National Education Policy) ಯುವ ಪೀಳಿಗೆಯ ಭವಿಷ್ಯವನ್ನು ಉಜ್ವಲ ಮತ್ತು ಸುರಕ್ಷಿತವಾಗಿಸುತ್ತದೆ ಎಂದು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ (Thawarchand Gehlot) ಅಭಿಪ್ರಾಯಪಟ್ಟರು.

ಧಾರವಾಡದ (Dharwad) ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ(ಕರ್ನಾಟಕ)ದ ಘಟಿಕೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಶಿಕ್ಷಣ ನೀತಿಯ ಗುರಿಯು ಪ್ರತಿಯೊಬ್ಬರಿಗೂ ಉನ್ನತ ಶಿಕ್ಷಣವನ್ನು ಒದಗಿಸುವುದು, ಮಾತೃಭಾಷೆಯಲ್ಲಿ ಅಧ್ಯಯನದ ಜೊತೆಗೆ ನೆಚ್ಚಿನ ವಿಷಯವನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವನ್ನು ನೀಡುತ್ತದೆ. ಭಾರತದ ಸಾಂಸ್ಕೃತಿಕ ವೈಭವವನ್ನು ಮರುಸ್ಥಾಪಿಸಲು ಮತ್ತು ಭಾರತವನ್ನು ಜಾಗತಿಕ ಜ್ಞಾನ ಶಕ್ತಿಯನ್ನಾಗಿ ಮಾಡುವ ಈ ಶಿಕ್ಷಣ ನೀತಿಯನ್ನು ಯಶಸ್ವಿಗೊಳಿಸಲು ಯುವಪೀಳಿಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು. ಇದನ್ನೂ ಓದಿ: ಮಳೆ ಕಾರಣ ಪಂಚರತ್ನ ರಥಯಾತ್ರೆ 4 ದಿನ ಮುಂದೂಡಿಕೆ – ಹೆಚ್‌ಡಿಕೆ

thawarchand gehlot1

1918 ರಲ್ಲಿ ಮಹಾತ್ಮಾ ಗಾಂಧಿಯವರು ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆಗೆ ಅಡಿಪಾಯ ಹಾಕಿದರು. ಅವರು ಈ ಸಂಸ್ಥೆಯ ಅಧ್ಯಕ್ಷರಾಗಿ ಜೀವನದುದ್ದಕ್ಕೂ ಇದ್ದರು. 1964 ರಲ್ಲಿ, ಸಂಸ್ಥೆಯನ್ನು ಭಾರತ ಸರ್ಕಾರವು ರಾಷ್ಟ್ರೀಯ ಪ್ರಾಮುಖ್ಯತೆಯ ಸಂಸ್ಥೆಗಳಲ್ಲಿ ಒಂದೆಂದು ಗುರುತಿಸಿತು. 1935 ರಲ್ಲಿ ಸ್ಥಾಪನೆಯಾದ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ (ಕರ್ನಾಟಕ) ಧಾರವಾಡ, ಕರ್ನಾಟಕ ರಾಜ್ಯದ ಅನೇಕ ಸಂಸ್ಥೆಗಳ ಮೂಲಕ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಗಮನಾರ್ಹ ಕೆಲಸ ಮಾಡುತ್ತಿದೆ ಎಂದು ಹೇಳಿದರು.

ಪದವಿ ಪಡೆದ ಎಲ್ಲಾ ವಿದ್ಯಾರ್ಥಿಗಳನ್ನು ಅಭಿನಂದಿಸಿದ ರಾಜ್ಯಪಾಲರು, ಸಮಾಜದಲ್ಲಿ ಶಾಂತಿ ಸಮಾನತೆ ಕಾಪಾಡಲು ಮುಂದಾಗಬೇಕು ಎಂದು ಕರೆ ನೀಡಿದರು. ಇದನ್ನೂ ಓದಿ: ಮಾಜಿ ಸಚಿವ ವಿಶ್ವನಾಥ್ ಕಾಂಗ್ರೆಸ್ ಸೇರದಂತೆ ಮನವೊಲಿಸಲು ನಾನು ಮುಂದಾಳತ್ವ ವಹಿಸಲ್ಲ: ಹೆಬ್ಬಾರ್

ಸಲಹಾ ಸಮಿತಿಯ ಸದಸ್ಯರಾದ ಅರುಣ್ ಡಿ. ಜೋಶಿ, ಎಂ.ಆರ್. ಪಾಟೀಲ್, ವಿಶೇಷ ಕಾರ್ಯದರ್ಶಿ ಡಾ.ಎಸ್.ಬಿ. ಹಿಂಚಿಗೇರಿ, ಕಾರ್ಯದರ್ಶಿ ಎಸ್. ರಾಧಾಕೃಷ್ಣನ್, ಧಾರವಾಡದ ಗುತ್ತಲ ಆಯುರ್ವೇದಿಕ್ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎಸ್.ಟಿ. ಹೊಂಬಳ, ಡಾ.ಬಿ.ಡಿ. ವೈಷ್ಣವಿ ಸತೀಶ್ ಗಣ್ಯರು ಉಪಸ್ಥಿತರಿದ್ದರು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *