ಬೆಂಗಳೂರು: ರಾಜ್ಯದ ಮದ್ಯಪ್ರಿಯರಿಗೆ ಸರ್ಕಾರ ಸಿಹಿಸುದ್ದಿಯೊಂದನ್ನು ನೀಡಿದೆ. 40 ದಿನಗಳ ಬಳಿಕ ಸೋಮವಾರ ಎಣ್ಣೆಯನ್ನ ಗಂಟಲಿಗೆ ಇಳಿಸಿಕೊಂಡು ನಿದ್ದೆಗೆ ಜಾರಿದ್ದ ಗುಂಡೈಕ್ಳ ಬೆಳಗ್ಗೆ ಏಳುವಷ್ಟರಲ್ಲಿ ಮತ್ತೊಂದು ಸಿಹಿ ಸುದ್ದಿಯನ್ನು ನೀಡಿದೆ.
Advertisement
ಕರ್ನಾಟಕದಲ್ಲಿ 900 ಹೊಸ ಎಂಎಸ್‍ಐಎಲ್ ಮಳಿಗೆಗಳನ್ನು ತೆರೆಯಲು ಸರ್ಕಾರ ನಿರ್ಧರಿಸಿದೆ. 2016ರ ಕಾಂಗ್ರೆಸ್ ಸರ್ಕಾರದ ಆದೇಶವನ್ನು ಜಾರಿಗೆ ತರಲು ನಿರ್ಧರಿಸಿದ್ದು, ಶೀಘ್ರವೇ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 4 ಮಳಿಗೆ ಆರಂಭಿಸಲು ಚಿಂತನೆ ನಡೆಸಿದೆ. ಆದಾಯ ಹೆಚ್ಚಿಸಲು ಎಂಎಸ್‍ಐಎಲ್ ಮಳಿಗೆ (ಸಿಎಲ್ 11 ಸಿ) ತೆರೆಯಲು ಸರ್ಕಾರ ನಿರ್ಧರಿಸಿದೆ ಎಂದು ತಿಳಿದು ಬಂದಿದೆ.
Advertisement
ರಾಜ್ಯದಲ್ಲಿ ಇಂದು 45 ಕೋಟಿ ರೂ. ಮೌಲ್ಯದ ಮದ್ಯ ಮಾರಾಟ https://t.co/tfxXolPvtp#LiquorShops #Karnataka #KannadaNews #Lockdown
— PublicTV (@publictvnews) May 4, 2020
Advertisement
2016ರಲ್ಲಿ ಹೊರಡಿಸಿದ ಸುತ್ತೋಲೆಯಲ್ಲಿ ಸನ್ನದು ಸ್ಥಳ ಆರಿಸುವಾಗ ಸ್ಥಳೀಯರ ಶಾಸಕರ ಹಾಗೂ ಜನಪ್ರತಿನಿಧಿಗಳ ಅಭಿಪ್ರಾಯಕ್ಕೆ ಮನ್ನಣೆ ನೀಡಬೇಕೆಂಬ ಸೂಚನೆಯನ್ನ ಕೈಬಿಡುವಂತೆ ಆರ್ಥಿಕ ಇಲಾಖೆ ಮಾರ್ಚ್ 30 ರಂದು ಹೊರಡಿಸಿದ ಆದೇಶದಲ್ಲಿ ಅಬಕಾರಿ ಆಯುಕ್ತರಿಗೆ ತಿಳಿಸಿದೆ. ಈ ಮೊದಲು ಸ್ಥಳೀಯ ಶಾಸಕರ ಅಭಿಪ್ರಾಯ ಪಡೆಯಲೇಬೇಕಿತ್ತು.