ಹುಟ್ಟು ಹಬ್ಬಕ್ಕೆ ಹೊಸ ಸಿನಿಮಾ: ಪಾತ್ರದ ಬಗ್ಗೆ ನೆನಪಿರಲಿ ಪ್ರೇಮ್ ಮಾತು

Public TV
2 Min Read
Nenapirali Prem 1

ಪ್ಪ ಐ ಲವ್ ಯೂ ಸಿನಿಮಾ ಮೂಲಕ ಪ್ರೇಕ್ಷಕರ ಎದುರು ಬಂದಿದ್ದ ಲವ್ಲಿ ಸ್ಟಾರ್ ಪ್ರೇಮ್ (Nenapirali Prem) ಈಗ ಮತ್ತೊಂದು ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಈ ಬಾರಿ ಅವರು ಲವರ್ ಬಾಯ್ ಆಗಿ ಕಾಣಿಸಿಕೊಳ್ಳುತ್ತಿಲ್ಲ. ಬದಲಾಗಿ ರಗಡ್ ಅವತಾರ ತಾಳಿದ್ದಾರೆ. ನಿನ್ನೆ ಪ್ರೇಮ್ ಜನ್ಮದಿನ.. ಅವರ ಹುಟ್ಟುಹಬ್ಬದ ಸ್ಪೆಷಲ್ ಆಗಿ ಹೊಸ ಸಿನಿಮಾದ ಮುಹೂರ್ತ ನೆರವೇರಿದೆ. ಬೆಂಗಳೂರಿನ ಬಂಡಿ ಮಹಾಕಾಳಿ ದೇಗುಲದಲ್ಲಿ ಮುಹೂರ್ತ ನೆರವೇರಿದ್ದು, ಇಡೀ ಚಿತ್ರತಂಡ ಭಾಗಿಯಾಗಿ ತಾಯಿಯ ಆಶೀರ್ವಾದ ಪಡೆದುಕೊಂಡರು.

Nenapirali Prem 2

ಬಳಿಕ ನೆನಪಿರಲಿ ಪ್ರೇಮ್ ಮಾತನಾಡಿ, ಇಂದು ನಾನು ಹುಟ್ಟಿದ ದಿನ . ಈ ದಿನ ಮುಹೂರ್ತ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿತ್ತು. 2.0 ರೀಬ್ರ್ಯಾಂಡಿಂಗ್ ಅಂತಾ ನನ್ನ ಸ್ನೇಹಿತರು ಕೇಳಿದರು. ಈ ಮೊದಲು ಆಕ್ಷನ್ ಸಿನಿಮಾ ಮಾಡಿದ್ದೇವು. ಆದರೆ ಬಹಳಷ್ಟು ಗ್ಯಾಪ್ ಆಗಿತ್ತು. ಲವ್ ಬ್ರ್ಯಾಂಡ್ ಆಗಿದ್ದರಿಂದ ಈಗ ಒಂದೊಳ್ಳೆ ಕಥೆಯೊಂದಿಗೆ ನಿರ್ದೇಶಕರು ಬಂದರು. ಹೀಗಾಗಿ ಈ ಚಿತ್ರ ಒಪ್ಪಿಕೊಂಡೆ. ಸಿನಿಮಾದಲ್ಲಿ ಸ್ಟ್ರೀಕ್ಟ್ ಪೊಲೀಸ್ ಅಧಿಕಾರಿ ಪಾತ್ರ ನಿರ್ವಹಿಸುತ್ತಿದ್ದೇನೆ. ಸ್ಕ್ರೀಪ್ಟ್ ರೆಡಿಯಾಗ್ತಿದೆ. ಕ್ಲೈಮ್ಯಾಕ್ಸ್ ಚರ್ಚೆ ಹಂತದಲ್ಲಿದೆ. ಪೂರ್ಣ ಪ್ರಮಾಣದಲ್ಲಿ ಸ್ಟಾರ್ ಕಾಸ್ಟ್ ಡಿಸೈಡ್ ಆಗಿಲ್ಲ. ಮುಂದಿನ ದಿನಗಳಲ್ಲಿ ಮುಹೂರ್ತ ಮಾಡಬೇಕು ಎಂದುಕೊಂಡಿದ್ದೇವು. ಆದರೆ ನಿಮ್ಮ ಬರ್ತ್ ಡೇ ಒಳ್ಳೆ ಸಂದರ್ಭ ಸರ್ ಅಂತಾ ನಿರ್ದೇಶಕರು ಹೇಳಿದ್ದರು. ಹೀಗಾಗಿ ಈ ದಿನ ಮುಹೂರ್ತ ಮಾಡಿದ್ದೇವೆ ಎಂದರು.

Nenapirali Prem 3

ತೇಜೇಶ್ ಮಾತನಾಡಿ, ಇದು ನನ್ನ ಮೊದಲ ಸಿನಿಮಾ. ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ಇದಾಗಿದೆ. ಟೈಟಲ್ ಚರ್ಚೆಯಲ್ಲಿದೆ. ಕಥೆಗೆ ಪ್ರೇಮ್ ಸರ್ ಸೂಟ್ ಆಗಿರುವುದರಿಂದ ಅವರನ್ನು ಆಯ್ಕೆ ಮಾಡಿದ್ದೇವೆ. ರಂಗಾಯಣ ರಘು ಸರ್ ಚಿತ್ರದ ಭಾಗವಾಗಿದ್ದಾರೆ. ಈ ತಿಂಗಳಾತ್ಯಂಕ್ಕೆ ಶೂಟಿಂಗ್ ಗೆ ಹೊರಡಲಿದ್ದೇವೆ ಎಂದು ಮಾಹಿತಿ ನೀಡಿದರು.

Nenapirali Prem 4

ನೆನಪಿರಲಿ ಪ್ರೇಮ್ ಮತ್ತೆ ಪೊಲೀಸ್ ಪಾತ್ರ ಮಾಡಿದ್ದಾರೆ. 11 ವರ್ಷದ ಹಿಂದೆ ಪೊಲೀಸ್ ರೋಲ್ ಮಾಡಿದ್ದರು. ಶತ್ರು ಅನ್ನೋ ಈ ಚಿತ್ರದಲ್ಲಿ ಪೊಲೀಸ್ ಖದರ್ ನಲ್ಲಿ ಪವರ್ ತೋರಿಸಿದ್ದರು. ಆದರೆ ಪ್ರೇಮ್ ಈ ಸಲ ಬೇರೆ ರೀತಿಯ ಪೊಲೀಸ್ ಪಾತ್ರ ಮಾಡಿದ್ದಾರೆ. ರಫ್ ಆ್ಯಂಡ್ ಟಫ್ ಅಲ್ಲದೇ, ರಗಡ್ ಲುಕ್ ಇರೋ ಪೊಲೀಸ್ ರೀತಿನೂ ಕಾಣಿಸುತ್ತಿದ್ದಾರೆ. ಕೈಯಲ್ಲಿ ಸಿಂಗಲ್ ಬ್ಯಾರಲ್ ಗನ್ ಕೂಡ ಇದೆ. ಅದನ್ನ ಸ್ಟೈಲ್ ಆಗಿಯೂ ಪ್ರೇಮ್ ಹಿಡಿದು ಕೊಂಡು, ದೊಂಬಿ ಮಾಡೋರ ಕಡೆಗೆ ಮುಖ ಮಾಡಿ ನಿಂತಿದ್ದಾರೆ.

ಯುವ ಪ್ರತಿಭೆ ತೇಜಸ್ ಬಿ.ಕೆ (Tejas) ಕಥೆ ಚಿತ್ರಕಥೆ ಬರೆದು ಸಿನಿಮಾ ಆಕ್ಷನ್ ಕಟ್ ಹೇಳುತ್ತಿದ್ದಾರೆ. ವಾಸುಕಿ ವೈಭವ್ ಸಂಗೀತ, ಆನಂದ್ ಮೀನಾಕ್ಷಿ ಛಾಯಾಗ್ರಹಣ ಚಿತ್ರಕ್ಕಿದೆ. ಹೆಸರಿಡದ ಈ ಸಿನಿಮಾಗೆ ಮಧು ಗೌಡ ಬಂಡವಾಳ ಹೂಡಿದ್ದಾರೆ. ಮುಹೂರ್ತ ನೆರವೇರಿಸಿರುವ ಚಿತ್ರತಂಡ ಈ ತಿಂಗಳ್ಯಾಂತಕ್ಕೆ ಶೂಟಿಂಗ್ ಅಖಾಡಕ್ಕೆ ಧುಮುಕಲಿದೆ.

Share This Article