ಸ್ವಿಮಿಂಗ್ ಪೂಲ್‌ನಲ್ಲಿ ಕೂತು ಉರಿವ ಸೂರ್ಯನಿಗೆ ಚಾಲೆಂಜ್ ಮಾಡಿದ ಪ್ರಿಯಾಂಕಾ ಚೋಪ್ರಾ

Public TV
1 Min Read
priyanka

ಗ್ಲೋಬಲ್ ಸ್ಟಾರ್ ನ್ಯೂ ಮಮ್ಮಿ ಪ್ರಿಯಾಂಕಾ ಚೋಪ್ರಾ ಬ್ಯುಸಿ ನಟಿಯರಲ್ಲಿ ಒಬ್ಬರು. ಅವರು ಇತ್ತೀಚೆಗೆ ಬಾಡಿಗೆ ತಾಯಿಯಿಂದ ತಾಯ್ತನದ ಸುಖವನ್ನು ಅನುಭವಿಸುತ್ತಿದ್ದು, ಇಲ್ಲಿವರೆಗೂ ತಮ್ಮ ಮಗಳ ಫೋಟೋ, ವೀಡಿಯೋ ಯಾವುದನ್ನು ಶೇರ್ ಮಾಡದೆ ಅಭಿಮಾನಿಗಳನ್ನು ಕಾಯಿಸುತ್ತಿದ್ದಾರೆ. ಮನೆಗೆ ಮಗು ಬಂದ ಬಳಿಕ ಈ ನಟಿ ಬಿ’ಟೌನ್ ಮತ್ತು ಹಾಲಿವುಡ್ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿರುವುದು ತುಂಬಾ ಕಡಿಮೆಯಾಗಿದೆ. ಈಗ ಈ ನಟಿ ಪೂಲ್‌ನಲ್ಲಿ ಬಿಕಿನಿ ತೊಟ್ಟು ಕ್ಯಾಮೆರಾ ಪೋಸ್ ನೀಡಿರುವ ಫೋಟೋವನ್ನು ಸೋಶಿಯಲ್ ಮೀಡಿಯಾನಲ್ಲಿ ಶೇರ್ ಮಾಡಿದ್ದಾರೆ.

priyankachopra 59585872 2366095253434180 5766567080337647031 n

ಪ್ರಿಯಾಂಕಾ ಚೋಪ್ರಾ ಅವರು ಇತ್ತೀಚೆಗೆ ತಮ್ಮ ‘ಲಾ’ ಮನೆಯಲ್ಲಿ ಸಮಯ ಕಳೆಯುತ್ತಿದ್ದು, ಈ ವೇಳೆ ಅವರು ಜನರು ಬೆರಗುಗೊಳಿಸುವಂತಹ ಫೊಟೋ ಶೇರ್ ಮಾಡಿದ್ದು ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಪ್ರಿಯಾಂಕಾ ನ್ಯೂ ಫೋಟೋ ಶೇರ್ ಮಾಡಿದ್ದು, ತಮ್ಮ ‘ಲಾ’ ಮನೆಯಲ್ಲಿರುವ ಪೂಲ್‌ನಲ್ಲಿ ಸಮಯ ಕಳೆಯುತ್ತಿರುವುದನ್ನು ಫೋಟೋದಲ್ಲಿ ನೋಡಬಹುದು. ಇದನ್ನೂ ಓದಿ: ನಿಮಗೆ ಹಿಂದಿ ಬರದಿದ್ದರೆ ದೇಶ ಬಿಟ್ಟು ತೊಲಗಿ: ಯುಪಿ ಸಚಿವ

 

View this post on Instagram

 

A post shared by Priyanka (@priyankachopra)

ಇನ್ಸ್ಟಾಗ್ರಾಮ್‌ನಲ್ಲಿ ವಿಶೇಷ ಫೋಟೋವನ್ನು ಶೇರ್ ಮಾಡಿರುವ ಈ ನಟಿ ಎರಡು ನ್ಯೂ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಈ ವೇಳೆ ಪ್ರಿಯಾಂಕ, ‘ಇನ್ಸ್ಟಾಗ್ರಾಮ್ ವ್ಸ್ ರಿಯಾಲಿಟಿ’ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಪೂಲ್ನಲ್ಲಿ ಪ್ರಿಯಾಂಕಾ ಬಿಕಿನಿ ಹಾಕಿಕೊಂಡು ಕೂಲ್ ಆಗಿ ಸೂರ್ಯನಿಗೆ ಮುಖ ತೋರಿಸಿದ್ದಾರೆ. ಈ ವೇಳೆ ಫೋಟೋವನ್ನು ಕ್ಲಿಕ್ ಮಾಡಲಾಗಿದೆ. ಕ್ಯೂಟ್ ಅಂಡ್ ಹಾಟ್ ಆಗಿ ಕಾಣುತ್ತಿರುವ ಪ್ರಿಯಾಂಕಾರನ್ನು ನೋಡಿದ ಜನರು ಫಿದಾ ಆಗಿದ್ದಾರೆ. ಒಂದು ಮಗುವಾಗಿದ್ರೂ ಪ್ರಿಯಾಂಕ ಸೂಪರ್ ಎಂದು ಬರೆದು ಕಾಮೆಂಟ್ ಮಾಡಿದ್ದಾರೆ.

priyanka chopra and nick jonas 3

ಬಿಕಿನಿಯಲ್ಲಿ ಕೂಲ್ ಆಗಿ ಕುಳಿತಿರುವ ಪ್ರಿಯಾಂಕಾ ಕೂದಲನ್ನು ಕಟ್ಟಿಕೊಂಡಿದ್ದು, ಸೂರ್ಯನಿಗೆ ಮುಖ ತೋರಿಸುತ್ತಿದ್ದಾರೆ. ಪ್ರಿಯಾಂಕಾ ಫ್ಯಾಮಿಲಿಗೆ ಫುಲ್ ಸಮಯ ಕೊಡುತ್ತಿದ್ದು, ಎಂಜಾಯ್ ಮಾಡುತ್ತಿದ್ದಾರೆ. ಇದನ್ನೂ ಓದಿ: ಮನೆಯಿಂದ ಹೋಗಬೇಕಾದ್ರೆ ರಾಜಕುಮಾರಿ ತರ ಹೋದ್ಳು, ಆದರೆ ಈಗ….: ಆ್ಯಸಿಡ್ ಸಂತ್ರಸ್ತೆ ತಾಯಿ ಅಳಲು 

Share This Article
Leave a Comment

Leave a Reply

Your email address will not be published. Required fields are marked *