ದೇಶದ ಅತಿದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ (Maruti Suzuki) ನಾಲ್ಕನೇ ತಲೆಮಾರಿನ ಹೊಸ ಡಿಜೈರ್ (Dzire) ಕಾರನ್ನು 6.79 ಲಕ್ಷಕ್ಕೆ (ಎಕ್ಸ್ ಶೋರೂಂ) ಬಿಡುಗಡೆ ಮಾಡಿದೆ. ಕಾರಿನ ಬೆಲೆ 6.79 ಲಕ್ಷದಿಂದ 10.14 ಲಕ್ಷದವರೆಗೆ ಇದೆ. ಹೊಸ ಡಿಸೈರ್ ಕಾರಿಗಾಗಿ ಬುಕ್ಕಿಂಗ್ ಆರಂಭವಾಗಿದ್ದು ಆಸಕ್ತ ಖರೀದಿದಾರರು ರೂ.11 ಸಾವಿರ ಪಾವತಿಸುವ ಮೂಲಕ ‘ಡಿಸೈರ್’ ಕಾರನ್ನು ಬುಕ್ ಮಾಡಬಹುದು.
ಹೊಸ ಡಿಸೈರ್ ಕಾರು ಮಾನ್ಯುಯಲ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಪ್ರತಿ ಲೀಟರ್ ಪೆಟ್ರೋಲ್‌ಗೆ 24.79 ಕಿಲೋಮೀಟರ್ ಮೈಲೇಜ್ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಅದೇ ರೀತಿ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ಹೊಸ ಡಿಸೈರ್ ಬರೋಬ್ಬರಿ 25.71 ಕಿಲೋಮೀಟರ್ ಮೈಲೇಜ್ ನೀಡುತ್ತದೆ. ಇನ್ನು CNG ಮಾದರಿಯಲ್ಲೂ ಕಾರು ಲಭ್ಯವಿದ್ದು ಪ್ರತಿ KG CNGಗೆ 33.73 ಕಿಲೋಮೀಟರ್ ಮೈಲೇಜ್ ನೀಡುತ್ತದೆ. ಇದನ್ನೂ ಓದಿ: 7.89 ಲಕ್ಷಕ್ಕೆ ಸ್ಕೋಡಾ ಕೈಲಾಕ್ ಕಾರು ಬಿಡುಗಡೆ
ಹೊಸ ಡಿಸೈರ್ 3,995mm ಉದ್ದ, 1,735mm ಅಗಲ ಮತ್ತು 1,525mm ಎತ್ತರ, 2,450mm ವೀಲ್‌ಬೇಸ್ ಮತ್ತು 163mm ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ. Z12E 1.2-ಲೀಟರ್ 3-ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿರುವ ಹೊಸ ಡಿಸೈರ್, 81.58 PS ಪವರ್ ಮತ್ತು 111.7 ಎನ್ಎಂ ಟಾರ್ಕ್ ಉತ್ಪಾದಿಸಲಿದೆ. 5-ಸ್ಪೀಡ್ ಮ್ಯಾನುವಲ್ ಮತ್ತು ಆಟೋಮೆಟಿಕ್ ಗೇರ್‌ಬಾಕ್ಸ್‌ನೊಂದಿಗೆ ಡಿಸೈರ್ ದೊರೆಯಲಿದೆ. ಇದನ್ನೂ ಓದಿ: ಹೊಸ ಮಾರುತಿ ಡಿಸೈರ್‌ಗೆ ಸಿಕ್ಕಿತು 5 ಸ್ಟಾರ್ ಸೇಫ್ಟಿ ರೇಟಿಂಗ್
ಎಲೆಕ್ಟ್ರಿಕ್ ಸನ್ ರೂಫ್, ‘ಕ್ರಿಸ್ಟಲ್ ವಿಷನ್’ LED ಹೆಡ್ ಲ್ಯಾಂಪ್, ‘3D ಟ್ರಿನಿಟಿ LED ಎಲಿಮೆಂಟ್ಸ್’ ಹೊಂದಿರುವ ಟೈಲ್ ಲ್ಯಾಂಪ್, 9 ಇಂಚ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಟೋ ಕ್ಲೈಮೇಟ್ ಕಂಟ್ರೋಲ್, ವೈರ್‌ಲೆಸ್ ಚಾರ್ಜರ್, ಆರ್ಕಮಿಸ್ ಟ್ಯೂನ್ಡ್ ಸೌಂಡ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ, ಯುಎಸ್‌ಬಿ ಟೈಪ್-A & ಟೈಪ್-C ಪೋರ್ಟ್, 360 ಡಿಗ್ರಿ ಕ್ಯಾಮೆರಾ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಡಿಸೈರ್ ಹೊಂದಿದೆ.
LXi, VXi, ZXi ಮತ್ತು ZXi+ ವೇರಿಯಂಟ್ಗಳಲ್ಲಿ 6 ಏರ್‌ಬ್ಯಾಗ್‌ಗಳು, ESP, ಹಿಲ್ ಹೋಲ್ಡ್ ಅಸಿಸ್ಟ್, EBD ಜೊತೆಗೆ ABS, ಬ್ರೇಕ್ ಅಸಿಸ್ಟ್, ಎಲ್ಲಾ ಸೀಟ್‌ಗಳಿಗೆ ಮೂರು-ಪಾಯಿಂಟ್ ಸೀಟ್ ಬೆಲ್ಟ್‌ಗಳು ಮತ್ತು ISOFIX ಸೀಟ್ ಮೌಂಟ್ ಸ್ಟ್ಯಾಂಡರ್ಡ್ ಆಗಿ ದೊರೆಯಲಿವೆ. ಇದನ್ನೂ ಓದಿ: ಕಾರು ಮಾರಾಟ ಭಾರೀ ಕುಸಿತ – 7.90 ಲಕ್ಷ ವಾಹನಗಳು ಸಿದ್ದವಾಗಿದ್ದರೂ ಖರೀದಿಸುತ್ತಿಲ್ಲ ಜನ
ಇತ್ತೀಚೆಗಷ್ಟೇ ಗ್ಲೋಬಲ್ ಎನ್‌ಸಿಎಪಿ (Global NCAP) ನಡೆಸಿದ ಸುರಕ್ಷತಾ ಪರೀಕ್ಷೆಯಲ್ಲಿ ಹೊಸ ಡಿಸೈರ್ ವಯಸ್ಕರ ರಕ್ಷಣೆ ವಿಭಾಗದಲ್ಲಿ (Adult Occupant Protection) 34ಕ್ಕೆ 31.24 ಅಂಕಗಳನ್ನು ಗಳಿಸುವ ಮೂಲಕ ಡಿಸೈರ್ 5-ಸ್ಟಾರ್ ರೇಟಿಂಗ್ ಪಡೆದಿದೆ. ಅದೇ ರೀತಿ ಮಕ್ಕಳ ರಕ್ಷಣೆ ವಿಭಾಗದಲ್ಲಿ (Child Occupant Protection) 42ಕ್ಕೆ 39.20 ಅಂಕಗಳನ್ನು ಪಡೆದು 4-ಸ್ಟಾರ್ ರೇಟಿಂಗನ್ನು ತನ್ನದಾಗಿಸಿಕೊಂಡಿದೆ. ಟಾಟಾ ಕಂಪನಿಯ ಆಲ್ಟ್ರೋಜ್ ಮತ್ತು ಟಿಯಾಗೋ ಕಾರುಗಳಿಗಿಂತ ಹೊಸ ಡಿಸೈರ್ ಸುರಕ್ಷಿತವಾಗಿದೆ.