ಬೆಂಗಳೂರು: ನಗರದ ಪಾದರಾಯನಪುರದಲ್ಲಿ ಹೊಸ ನಿಯಮಗಳನ್ನು ಜಾರಿಗೆ ತರಲಾಗಿದೆ. ಕಠಿಣ ನಿಯಮಗಳು ಇಂದಿನಿಂದ ಅನ್ವಯವಾಗಲಿದ್ದು, ಜನರು ಮನೆಯಿಂದ ಹೊರ ಬರುವಂತಿಲ್ಲ.
ಸೀಲ್‍ಡೌನ್ ಆಗಿದ್ರೂ ಯಾವುದೇ ರೀತಿಯ ಭಯವಿಲ್ಲದೇ ಜನ ಆರಾಮವಾಗಿ ಮನೆಯಿಂದ ಹೊರಬಂದು ಕಾಲಹರಣ ಮಾಡುತ್ತಿದ್ದರು. ಭಾನುವಾರ ರಾತ್ರಿ ನಡೆದ ಗಲಭೆಯಿಂದ ಎಚ್ಚೆತ್ತ ಪೊಲೀಸ್ ಇಲಾಖೆ ಪುಂಡರನ್ನ ಬಂಧಿಸಿದ್ದಾರೆ. ಇಡೀ ಪಾದರಾಯನಪುರ ಪೊಲೀಸ್ ಸರ್ಪಗಾವಲಿನಲ್ಲಿದೆ. ದಿನ ಬೆಳ್ಳಂ ಬೆಳಗ್ಗೆ ಹಾಲು, ತರಕಾರಿ ನೆಪ ಹೇಳಿಕೊಂಡು ಹೊರಬರುತ್ತಿದ್ದ ಜನ ಈಗ ಮನೆಯಿಂದ ಹೊರಬರುತ್ತಿಲ್ಲ.
Advertisement
Advertisement
ಹೊಸ ನಿಯಮಗಳು:
1. ಮನೆಯಿಂದ ಯಾರು ಹೊರಗಡೆ ಬರುವಂತಿಲ್ಲ. (ತುರ್ತು ವೈದ್ಯಕೀಯ ಹೊರತುಪಡಿಸಿ)
2. ಪಾದರಾಯನಪುರ ಏರಿಯಾ ಸಂಪೂರ್ಣ ಲಾಕ್‍ಡೌನ್.
3. ಪ್ರವೇಶ ಮತ್ತು ನಿರ್ಗಮನಗೆ ಒಂದೇ ಮಾರ್ಗ. ಉಳಿದೆಲ್ಲ ರಸ್ತೆಗಳು ಬಂದ್
4. ಲಾಕ್‍ಡೌನ್ ಪ್ರದೇಶಕ್ಕೆ ದಿನಕ್ಕೊಂದು ಬಾರಿ ತರಕಾರಿ, ಹಾಲು, ದಿನಸಿಯವರ ಪ್ರವೇಶ
5. ಆಯಾಯ ವ್ಯಾಪಾರಿಗಳಿಗೆ ಕೋಡ್ ಹಾಗೂ ಸಮವಸ್ತ್ರ ಕೊಡಲಾಗುತ್ತೆ. ಅವರಿಗಷ್ಟೇ ಪ್ರವೇಶ
6. ಮನೆಬಾಗಿಲಿಗೆ ದಿನಸಿ ,ಔಷಧಿ ತಲುಪಿಸಲಾಗುತ್ತೆ.
7. ಇಡೀ ಚಟುವಟಿಕಗೆ ಕಂಪ್ಲೀಟ್ ಬ್ರೇಕ್.
8. ವೈದ್ಯರನ್ನು ಹೊರತು ಪಡಿಸಿ ಈ ಏರಿಯಾಗೆ ಬೇರೆ ಯಾರ ಎಂಟ್ರಿಯೂ ಇಲ್ಲ. ಸಂಪೂರ್ಣ ಪ್ರವೇಶ ನಿಷಿದ್ಧ.
9. ಎಂಎಲ್‍ಎ ಸೇರಿದಂತೆ ಜನಪ್ರತಿನಿಧಿಗಳ ನಿವಾಸ ಕಂಟೈನ್‍ಮೆಂಟ್ ಝೋನ್ ನಲ್ಲಿದ್ರೇ ಅವರು ಕೂಡ ಹೊರಗೆ ಬರುವಂತಿಲ್ಲ.
10. ಈಗಾಗಲೇ ಪಾದರಾಯನಪುರದಲ್ಲಿದೆ ಗರುಡು ಟೀಂ ಇದೆ.