CoronaInternationalLatestLeading NewsMain Post

ಚೀನಾದಲ್ಲಿ ಮತ್ತೊಂದು ಮಾರಕ ವೈರಸ್ ಪತ್ತೆ – ಶೇ.40 ರಿಂದ 70ರಷ್ಟು ಮರಣ ಸಾಧ್ಯತೆ

ಬೀಜಿಂಗ್: ಕೊರೊನಾದಿಂದ ಜಗತ್ತು ಇನ್ನೂ ಸಂಪೂರ್ಣವಾಗಿ ಮುಕ್ತವಾಗಿಲ್ಲ. ಇಂತಹ ಸಂದರ್ಭದಲ್ಲಿಯೇ ಚೀನಾದಲ್ಲಿ ಮತ್ತೊಂದು ಹೊಸ ವೈರಸ್ ಪತ್ತೆ ಆಗಿದ್ದು, ಆತಂಕಕ್ಕೆ ಕಾರಣವಾಗಿದೆ.

ಚೀನಾದಲ್ಲಿ ಪ್ರಾಣಿಗಳಿಂದ ಮತ್ತೊಂದು ವೈರಸ್ ಮನುಷ್ಯರಿಗೆ ಸೋಕಿದೆ. ಪ್ರಾಣಿಗಳಿಂದ ವ್ಯಾಪಿಸುವ ಲಾಂಗ್ಯ ಹೆನಿಪಾ ವೈರಸ್ 35ಕ್ಕೂ ಹೆಚ್ಚು ಮಂದಿಯಲ್ಲಿ ಪತ್ತೆ ಆಗಿದೆ. ಲಾಂಗ್ಯ ಹೆನಿಪಾ ವೈರಸನ್ನು ಬಯೋಸೇಫ್ಟಿ ಲೆವೆಲ್-4 ವೈರಸ್ ಎಂದು ಚೀನಾದ ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ. ಇದನ್ನೂ ಓದಿ: ಕಾಶ್ಮೀರಿ ಪಂಡಿತ ರಾಹುಲ್ ಭಟ್‌ನನ್ನು ಕೊಂದಿದ್ದ ಭಯೋತ್ಪಾದಕನ ಎನ್‌ಕೌಂಟರ್

ಇದು ಮನುಷ್ಯರಲ್ಲಿ, ಪ್ರಾಣಿಗಳಲ್ಲಿ ತೀವ್ರ ಸ್ವರೂಪದ ಅನಾರೋಗ್ಯ ಉಂಟು ಮಾಡುತ್ತದೆ ಎಂದು ಎಚ್ಚರಿಸಿದೆ. ಮರಣ ಸಾಧ್ಯತೆ ಶೇಕಡಾ 40 ರಿಂದ 75ರಷ್ಟಿದೆ ಎಂದು ಹೇಳಿದೆ. ಅಂದ ಹಾಗೇ ಲಾಂಗ್ಯ ಹೆನಿಪಾ ವೈರಸ್ ವ್ಯಾಪ್ತಿ ನಿವಾರಣೆಗೆ ಯಾವುದೇ ಔಷಧಿ ಇಲ್ಲ. ಕೇವಲ ರೋಗ ಲಕ್ಷಣಗಳ ಆಧಾರದ ಮೇಲೆ ಚಿಕಿತ್ಸೆ ಲಭ್ಯವಿದೆ ಎಂದಿದೆ. ಇದನ್ನೂ ಓದಿ: ಮೋದಿ ಗೆದ್ದಿರೋದು 2024ರಲ್ಲಿ ಅಲ್ಲ, ಮೈತ್ರಿ ಮುರಿದ ಬಳಿಕ ಸಿಎಂ ನಿತೀಶ್ ವಾಗ್ದಾಳಿ

ಏನಿದು ಲಾಂಗ್ಯ ಹೆನಿಪಾ ವೈರಸ್?
ಇದು ಬಾವಲಿಯಿಂದ ಹಬ್ಬುವ ನಿಫಾ ವೈರಸ್ ತಳಿಗೆ ಸೇರಿದ್ದು, ನಿಫಾ, ಕೋವಿಡ್ ವೈರಸ್ ಮಾದರಿಯಲ್ಲಿ ಹಬ್ಬುವ ಸಾಮರ್ಥ್ಯ ಹೊಂದಿದೆ. ಮೇಕೆ, ನಾಯಿಗಳಲ್ಲಿಯೂ ಲಾಂಗ್ಯ ಹೆನಿಪಾ ವೈರಸ್ ಪತ್ತೆಯಾಗಿದೆ. 2019ರಲ್ಲಿ ಮೊದಲ ಬಾರಿಗೆ ಮನುಷ್ಯರಲ್ಲಿ ಪತ್ತೆಯಾಗಿತ್ತು. 2020ರ ಜುಲೈ ನಂತರ 11, ಲಾಂಗ್ಯ ವೈರಸ್ ತಳಿ ಪತ್ತೆಯಾಗಿತ್ತು. ಪ್ರಸಕ್ತ ವರ್ಷದಲ್ಲಿ ಸೋಂಕಿನ ಹೆಚ್ಚು ಕೇಸ್ ನಮೂದಾಗಿದೆ. ಜ್ವರ, ಕೆಮ್ಮು, ವಾಂತಿ, ಸುಸ್ತು, ಸ್ನಾಯು ನೋವು, ಪ್ಲೇಟ್‌ಲೆಟ್ಸ್ ಸಂಖ್ಯೆ ಕುಸಿತ, ಹಸಿವು ಇಲ್ಲದಿರುವಿಕೆಯ ಲಕ್ಷಣಗಳನ್ನು ಒಳಗೊಂಡಿದೆ. ಸೋಂಕಿನ ಅಪಾಯದ ಹಾನಿ, ತೀವ್ರತೆ ಬಗ್ಗೆ ಸಂಶೋಧನೆ ನಡೆಯುತ್ತಿದೆ.

Live Tv

Leave a Reply

Your email address will not be published.

Back to top button