ಕಲರ್ ಫುಲ್ ‘ಬಿಲ್ ಗೇಟ್ಸ್’ ಎಂಟ್ರಿಗೆ ಡೇ ಕೌಂಟ್ ಸ್ಟಾರ್ಟ್

Public TV
2 Min Read
bill gates

ಕಲರ್ ಫುಲ್ ರಂಗೀನ್ ದುನಿಯಾದಲ್ಲಿ ವಾರಕ್ಕೆ ಒಂದಿಷ್ಟು ಸಿನಿಮಾಗಳು ರಿಲೀಸ್‍ಗೆ ರೆಡಿ ಇದ್ದು, ಈ ವಾರ ಯಾವ ಸಿನೆಮಾ ನೋಡೋದು..? ಯಾವುದನ್ನ ಬಿಡೋದು ಅನ್ನೋ ಕನ್ಫ್ಯೂಸನ್‍ನಲ್ಲಿರುವಂತೆ ಮಾಡ್ತೀವೆ. ಆದರೆ ಈ ಸಿನಿರಸಿಕ ರಿಲೀಸ್ ಆದ ಟ್ರೈಲರ್, ಟೀಸರ್, ಸಾಂಗುಗಳನ್ನ ನೋಡಿ ಮೊದಲೇ ಈ ಸಿನಿಮಾನ ಮಿಸ್ ಮಾಡದೇ ನೋಡ್ಬೇಕಪ್ಪ ಅಂತ ಡಿಸೈಡ್ ಮಾಡ್ಕೋಂಡಿರೋ ಚಿತ್ರಗಳ ಪಟ್ಟಿಗೆ ಸೇರಿರೋ “ಬಿಲ್ ಗೇಟ್ಸ್” ಇದೇ ಫೆಬ್ರವರಿ 7ಕ್ಕೆ ತೆರೆ ಮೇಲೆ ಮೋಡಿ ಮಾಡೋಕೆ ಬರ್ತಿದ್ದಾನೆ.

BillGates 3

ಎಸ್ ಸ್ಯಾಂಡಲ್‍ವುಡ್‍ನಲ್ಲಿ ಭಾರಿ ಕುತೂಹಲ ಹಾಗೂ ನಿರೀಕ್ಷೆ ಮೂಡಿಸಿರುವ `ಬಿಲ್ ಗೇಟ್ಸ್’ ಚಿತ್ರದ ಟ್ರೇಲರ್ ನೋಡಿದಾಗ್ಲೇ ಈ ಚಿತ್ರದಲ್ಲೇನೋ ವಿಶೇಷತೆ ಇದೆ ಅನ್ನೋದು ಕನ್ಫರ್ಮ್ ಆಗಿತ್ತು. ಚಿತ್ರದಲ್ಲಿನ ಶಿಶೀರ್ ಶಾಸ್ತ್ರಿ ಹಾಗೂ ಚಿಕ್ಕಣ್ಣ ಗೆಟಪ್ ರಿವೀಲ್, ಅದ್ದೂರಿ ಯಮಲೋಕದ ಅರಮನೆಯ ಸೆಟ್ ನಿರ್ಮಾಣ ಹೀಗೆ ಒಂದೊಂದೇ ಅಂಶಗಳ ಮೂಲಕ ಕ್ಯುರಿಯಾಸಿಟಿ ಕಾಯ್ದುಕೊಂಡಿದ್ದ ಚಿತ್ರ ಅಂತೂ ತೆರೆಮೇಲೆ ರಾರಾಜಿಸಲು ಸಿದ್ಧವಾಗಿದೆ.

ಬಹುಶಃ ಬ್ಯಾಕ್ ಟು ಬ್ಯಾಕ್ ಸ್ಟಾರ್ ಸಿನಿಮಾಗಳಲ್ಲೇ ಬ್ಯೂಸಿಯಿರೋ ಕಾಮಿಡಿ ಕಿಂಗ್ ಚಿಕ್ಕಣ್ಣರನ್ನ ಯಮನ ಗೆಟಪ್‍ನಲ್ಲಿ ನೋಡಿಯೂ ಇರಬಹುದು.ನೋಡೋಕೆ ಸಣ್ಣಗಿರೋ ಚಿಕ್ಕಣ್ಣ ಯಮನ ಪಾತ್ರಕ್ಕೆ ಸೂಟ್ ಅಗ್ತಾರ ಅಂದೋರಿಗೆ ಯಮನನ್ನ ಯಾರ್ ನೋಡಿದಾರೆ ಅಂತ ಈ ಹಿಂದೆ ಜಾಣ್ಮೆಯ ಉತ್ತರ ಕೊಟ್ಟಿದ್ದ ಚಿಕ್ಕಣ್ಣ ಯಮನಾಗಿ ಹೇಗೆ ಪ್ರೇಕ್ಷಕರನ್ನು ನಗಿಸ್ತಾರೆ ಅನ್ನೋದು ಸಹ ಕ್ಯೂರಿಯಾಸಿಟಿಯಾಗೇ ಉಳಿದಿದೆ.

BillGates 1

ಶ್ರೀ ಪಾಂಚಜನ್ಯ ಸಿನಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ `ಬಿಲ್ ಗೇಟ್ಸ್’ ನಿರ್ಮಾಣವಾಗಿದ್ದು ವಸಂತಕುಮಾರ್, ಅರವಿಂದ್, ಯತೀಶ್, ಗಿರೀಶ್, ಸತ್ಯನಾರಾಯಣ, ರಾದೇಶ್, ಕುಮಾರಸ್ವಾಮಿ, ಮುನಿಕೃಷ್ಣ, ಶಿವಶಂಕರ್, ಕುಮಾರ್, ಆದಿನಾರಾಯಣ ಸೇರಿದಂತೆ 14 ನಿರ್ಮಾಪಕರು ಚಿತ್ರದ ಹೆಸರಿನಂತೆ ಅದ್ದೂರಿ ತನಕ್ಕೆ ಮೋಸವಾಗದಂತೆ ಬಂಡವಾಳ ಹೂಡಿದ್ದಾರೆ. ಈ ಚಿತ್ರಕ್ಕೆ ನಿರ್ದೇಶಕ ಶ್ರೀನಿವಾಸ ಮಂಡ್ಯ ಅವರ ಕಥೆ ಹಾಗೂ ನಿರ್ದೇಶನವಿದ್ದು, ರಾಜಶೇಖರ್ ಅವರು ಚಿತ್ರಕಥೆ ಹೆಣೆದಿದ್ದು, ಜಯ ಮಲ್ಲಿಕಾರ್ಜುನ ಸಂಭಾಷಣೆಯಿದೆ.

ದೇಶದ ಅತಿದೊಡ್ಡ ಸಿರಿವಂತ ಬಿಲ್ ಗೇಟ್ಸ್‍ಗೂ ಈ ಚಿತ್ರಕ್ಕೂ ಸಂಬಂಧವಿಲ್ಲದಿದ್ದರೂ ಹಳ್ಳಿಯಿಂದ ಬರುವ ಇಬ್ಬರು ಯುವಕರು ಬಿಲ್ ಗೇಟ್ಸ್ ಆಗಲು ಯತ್ನಿಸುವ ಪ್ರಯತ್ನದಲ್ಲಿ ಗೆಲ್ತಾರಾ ಅನ್ನೋದೇ ಚಿತ್ರದ ಎಳೆಯಂತೆ. ಒಟ್ಟಾರೆ ಚಿತ್ರದ ತಾರಾಬಳಗವೂ ದೊಡ್ಡದಿದ್ದು, ನಕ್ಕು ನಗಿಸೋಕು ಪಾತ್ರಗಳಿದ್ದು ಇನ್ನೂ ರಿಲೀಸ್ ಬಳಿಕ ಥಿಯೇಟರ್ ನಲ್ಲಿ ಕೂತು ಎಂಜಾಯ್ ಮಾಡೋದೊಂದೇ ಬ್ಯಾಲೆನ್ಸ್ ಆಗಿ ಉಳಿದಿದೆ.

Share This Article
Leave a Comment

Leave a Reply

Your email address will not be published. Required fields are marked *